ಚಿಕ್ಕಮಗಳೂರು: ಪಿಎಸ್‌ಐ ಪರೀಕ್ಷೆ ಪ್ರಾಮಾಣಿಕವಾಗಿ ಬರೆದವರು ಮತ್ತು ಪರೀಕ್ಷೆಯ ಅಕ್ರಮದಲ್ಲಿ ಪಾಲ್ಗೊಂಡವರ ಪಟ್ಟಿಯನ್ನು ಪ್ರತ್ಯೇಕಿಸಿ ಪ್ರಾಮಾಣಿಕರಿಗೆ ಕೆಲಸ ನೀಡಿ ತಪ್ಪಿತಸ್ಥರಿಗೆ ಶಿಕ್ಷೆ ನೀಡಬೇಕು ಎಂದು ಜಿಲ್ಲೆಯ ಕಡೂರಿನ ಮಾಜಿ ಶಾಸಕ ಹಾಗೂ ಜೆಡಿಎಸ್ ಮುಖಂಡ ವೈ.ಎಸ್.ವಿ. ದತ್ತ ಆಗ್ರಹಿಸಿದ್ದಾರೆ.
ಚಿಕ್ಕಮಗಳೂರಿನಲ್ಲಿ ಜಿಲ್ಲಾಧಿಕಾರಿ ಕಚೇರಿ ಬಳಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಪಿಎಸ್‍ಐ ನೇಮಕಾತಿ ಅಕ್ರಮದಲ್ಲಿ ಸರ್ಕಾರ ತಲೆಗೆಲ್ಲಾ ಒಂದೇ ಮಂತ್ರ ಎಂಬಂತೆ ನಡೆದುಕೊಳ್ಳಬಾರದು. ಸರ್ಕಾರ ಆಯ್ಕೆ ಪಟ್ಟಿಯನ್ನೇ ರದ್ದುಪಡಿಸುವುದಕ್ಕಿಂತ ಬೇರೆ ಮಾರ್ಗ ಯೋಚಿಸಲಿ, ಸರ್ಕಾರಕ್ಕೆ ಅದ್ಯಾವುದು ದೊಡ್ಡ ಕೆಲಸವಲ್ಲ. ಪ್ರಮಾಣಿಕವಾಗಿ ಓದಿ, ಪರೀಕ್ಷೆ ಬರೆದವರಿಗೆ ಮೋಸ ಆಗಬಾರದು. ಪ್ರಕರಣ ತನಿಖೆ ಹಂತದಲ್ಲಿರುವಾಗಲೇ ಪ್ರಾಮಾಣಿಕರು ಹಾಗೂ ಅಕ್ರಮವೆಸಗಿದವರನ್ನು ಪ್ರತ್ಯೇಕ ಮಾಡಬೇಕೆಂದು ಒತ್ತಾಯಿಸಿದರು. ಇದನ್ನೂ ಓದಿ: ‘ಆರ್‌ಎಸ್‌ಎಸ್’ ದೇಶದ ಶ್ರೀಮಂತ ಎನ್‍ಜಿಓ, ಅದಕ್ಕೆ ಹಣ ಎಲ್ಲಿಂದ ಬರುತ್ತೆ?: ಬಿ.ಕೆ ಹರಿಪ್ರಸಾದ್
ವೈಎಸ್‍ವಿ ದತ್ತಾ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರುತ್ತಾರೆಂಬ ಸುದ್ದಿಗೆ ಪ್ರತಿಕ್ರಿಯಿಸಿ, ಎಲ್ಲದಕ್ಕೂ ಕಾಲ ಬರಬೇಕು. ನಾನು ಜೆಡಿಎಸ್‍ನಲ್ಲೇ ಇರುತ್ತೇನೆ ಎಂದು ಹೇಳಲು, ಜೆಡಿಎಸ್ ಬಿಡುತ್ತೇನೆ ಎಂದು ಹೇಳಲು ಎಲ್ಲದಕ್ಕೂ ಕಾಲ ಕೂಡಿ ಬರಬೇಕು. ಆ ಕಾಲ ಬಂದಾಗ ನಿಮಗೆ ಖಂಡಿತ ನನ್ನ ನಿರ್ಧಾರ ಹೇಳುತ್ತೇನೆ ಎಂದರು. ಇದನ್ನೂ ಓದಿ: ಉಕ್ರೇನ್ ವಿದ್ಯಾರ್ಥಿಗಳಿಗೆ ಗುಡ್‍ನ್ಯೂಸ್- ಡಾಕ್ಟರ್ ಆಗುವ ಕನಸಿಗೆ ನೀರೆರದ ಸಿದ್ದಗಂಗಾ