ಬೆಳಗಾವಿ: ರಾಜ್ಯದಲ್ಲಿ ಬೇಲಿನೇ ಎದ್ದು ಹೊಲ ಮೇಯಲು ಶುರು ಮಾಡಿಕೊಂಡಿದೆ. ಪೊಲೀಸರೇ ಕಳ್ಳರು, ಇನ್ನು ಕಳ್ಳತನ ಹೇಗೆ ತಪ್ಪಿಸುತ್ತಾರೆ ಎಂದು ಬೆಳಗಾವಿಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಪಿಎಸ್‍ಐ ಹಗರಣದ ಕುರಿತಾಗಿ ಪೊಲೀಸರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
Advertisement
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪಿಎಸ್‍ಐ ಹಗರಣದಲ್ಲಿ ಇಬ್ಬರು ಡಿವೈಎಸ್‍ಪಿ, ಒಬ್ರೂ ಇನ್ಸ್‌ಪೆಕ್ಟರ್ ಅರೆಸ್ಟ್ ಆಗಿದ್ದಾರೆ. ಎಡಿಜಿಪಿ ಅಮೃತ್ ಪೌಲ್, ಡಿವೈಎಸ್‍ಪಿ ಶಾಂತಕುಮಾರ್ ಅವರನ್ನು ವರ್ಗಾವಣೆ ಮಾಡಿದ್ದಾರೆ. ಬೇಲಿನೇ ಎದ್ದು ಹೊಲ ಮೇಯಲು ಶುರುಮಾಡಿಕೊಂಡಿದೆ. ಇವರೇ ಕಳ್ಳರು, ಇನ್ನು ಕಳ್ಳತನ ಹೇಗೆ ತಪ್ಪಿಸುತ್ತಾರೆ ಎಂದು ಪೊಲೀಸರ ವಿರುದ್ಧ ಅನುಮಾನ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಸಿಎಂ ಪೋಸ್ಟ್‌ಗಾಗಿ 2,500 ಕೋಟಿ ರೂ. ಬೇಡಿಕೆ ವಿಚಾರ- ತನಿಖೆಗೆ ಡಿಕೆಶಿ ಒತ್ತಾಯ
Advertisement
Advertisement
ಪಿಎಸ್‍ಐ ಹಗರಣದ ಕುರಿತು ಮಾತನಾಡಿದರೆ ನೋಟಿಸ್ ನೀಡ್ತಾರೆ ಎಂಬ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಮಾಹಿತಿ ಕೊಟ್ಟರೆ ನೋಟಿಸ್ ಕೊಡುವುದು ಕಾನೂನು ಬಾಹಿರ ನಾನು ವಕೀಲರಾಗಿದ್ದವರು ಕಾನೂನು ಆ ರೀತಿ ಹೇಳೋದಿಲ್ಲ. ತನಿಖೆಯನ್ನು ಪೊಲೀಸರೇ ಮಾಡಲಿ ಆದ್ರೇ ನ್ಯಾಯಾಧೀಶರ ಮೇಲ್ವಿಚಾರಣೆಯಲ್ಲಿ ನಡೆಯಬೇಕು. ಪೊಲೀಸ್ ಅಧಿಕಾರಿಗಳು ಅರೆಸ್ಟ್ ಆಗಿದ್ದಾರೆ. ರಾಜಕಾರಣಿಗಳು ಭಾಗಿಯಾಗಿದ್ದಾರೆ. ರಾಜಕಾರಣಿಗಳ ಕುಟುಂಬಸ್ಥರು ಭಾಗಿಯಾಗಿದ್ದಾರೆ. ಈ ಕಾರಣಕ್ಕೆ ಸಿಐಡಿ ಮೇಲೆ ಪ್ರಭಾವ ಬೀರುತ್ತಾರೆ. ಅಶ್ವಥ್ ನಾರಾಯಣ ಸಂಬಂಧಿಕ ಒಬ್ಬ ಸೆಲೆಕ್ಟ್ ಆಗಿದ್ದನು. ಪೊಲೀಸರು ನೋಟಿಸ್ ಕೊಟ್ಟು ವಿಚಾರಣೆಗೆ ಕರೆದಿದ್ರೂ. ಅವನನ್ನು ನಂತರ ಬಿಟ್ಟು ಬಿಟ್ರಲ್ಲ ಯಾಕೆ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಡಿಕೆಶಿ ಜೊತೆ ದಿವ್ಯಾ ಹಾಗರಗಿ ಫೋಟೋ ತೆಗೆಸಿಕೊಂಡ ರಹಸ್ಯ ಬಯಲು
Advertisement
ಅಶ್ವಥ್ ನಾರಾಯಣ ಆರೋಪಿಯನ್ನು ಬಿಡುವಂತೆ ಪೊಲೀಸರ ಮೇಲೆ ಒತ್ತಡ ಹೇರಿದ್ದಾರೆ. ನನ್ನ ಪ್ರಕಾರ ಈ ಹಗರಣದಲ್ಲಿ ಸರ್ಕಾರದ ಇನ್ವಾಲ್ಮೆಂಟ್, ಸಚಿವರ ಇನ್ವಾಲ್ಮೆಂಟ್ ಇಲ್ಲದೇ ಈ ರೀತಿ ಕೃತ್ಯ ನಡೆಯಲು ಸಾಧ್ಯವಿಲ್ಲ. ಪೊಲೀಸರು ರಾಜಕಾರಣಿಗಳ ಜೊತೆಗೆ ಬಾಂಧ್ಯವ ಇಟ್ಟುಕೊಂಡೇ ಮಾಡಿದ್ದಾರೆ. ಹೀಗಾಗಿ ಪಿಎಸ್‍ಐ ಹಗರಣ ನ್ಯಾಯಾಧೀಶರ ಮೇಲ್ವಿಚಾರಣೆಯಲ್ಲಿ ನಡೆಯಬೇಕು ಎಂದು ಆಗ್ರಹಿಸಿದ್ದಾರೆ.