ಬೆಂಗಳೂರು: ಪಿಎಸ್‍ಐ ಪರೀಕ್ಷಾ ಅಕ್ರಮದ ತನಿಖೆ ತೀವ್ರಗೊಳಿಸಿರುವ ಸಿಐಡಿ ನಿನ್ನೆ 12, ಇಂದು ನಾಲ್ವರನ್ನು ಬಂಧಿಸಿದೆ. ಇದ್ರೊಂದಿಗೆ ಪ್ರಕರಣದಲ್ಲಿ ಬಂಧಿತರ ಸಂಖ್ಯೆ 39ಕ್ಕೇರಿದೆ.
Advertisement
ಬಂಧಿತರದಲ್ಲಿ ಓರ್ವ ಪೊಲೀಸ್ ಪೇದೆ ಕೂಡ ಇದ್ದಾನೆ. ಇಂದು ಹಗರಣದ ಮೊತ್ತೋರ್ವ ಕಿಂಗ್‍ಪಿನ್ ಎನ್ನಲಾದ ನೀರಾವರಿ ಇಲಾಖೆ ಕಿರಿಯ ಎಂಜಿನಿಯರ್ ಮಂಜುನಾಥ್ ಮೆಳಕುಂದಿ ತಾವಾಗಿಯೇ ಬಂದು ಸಿಐಡಿ ಪೊಲೀಸರಿಗೆ ಶರಣಾಗಿದ್ದಾರೆ. ಕೋರ್ಟ್ ಅರೆಸ್ಟ್ ವಾರೆಂಟ್ ಪ್ರಕಾರ ಮಂಜುನಾಥ್ ಮೆಳಕುಂದಿ ನಾಳೆಯೊಳಗೆ ಶರಣಾಗಬೇಕಿತ್ತು. ಇಲ್ಲದಿದ್ರೆ ಆಸ್ತಿ ಮುಟ್ಟುಗೋಲು ಆಗ್ತಿತ್ತು. ಇದೇ ಭಯಕ್ಕೆ ಮಂಜುನಾಥ್ ಸಿಐಡಿಗೆ ಶರಣಾಗಿದ್ದಾರೆ. ಆದ್ರೆ, ಜ್ಞಾನ ಜ್ಯೋತಿ ಶಾಲೆ ಮುಖ್ಯ ಶಿಕ್ಷಕ ಕಾಶಿನಾಥ್ ಇನ್ನೂ ಪತ್ತೆಯಾಗಿಲ್ಲ. ಕಾಶಿನಾಥ್‍ಗೆ ಕೋರ್ಟ್ ವಿಧಿಸಿದ್ದ ಡೆಡ್‍ಲೈನ್ ಕೂಡ ನಾಳೆಯೇ ಮುಗಿಯಲಿದೆ. ಇದನ್ನೂ ಓದಿ: ಪಿಎಸ್‍ಐ ಅಕ್ರಮ: ಸಿಐಡಿಗೆ ಶರಣಾದ ಆರೋಪಿ ಮಂಜುನಾಥ್
Advertisement
Advertisement
ಕಲಬುರಗಿಯ ಜ್ಞಾನಜ್ಯೋತಿ ಶಾಲೆಯಲ್ಲಿ ಅಕ್ರಮ ನಡೆದಿರುವಂತೆ ಬೆಂಗಳೂರಿನ ಕೇಂಬ್ರಿಡ್ಜ್ ಕಾಲೇಜ್‍ನಲ್ಲಿಯೂ ದೊಡ್ಡ ಮಟ್ಟದ ಪರೀಕ್ಷಾ ಅಕ್ರಮ ನಡೆದಿರೋದು ಬೆಳಕಿಗೆ ಬಂದಿದೆ. ಕೇಂಬ್ರಿಡ್ಜ್ ಕೇಂದ್ರದಲ್ಲಿ ಪರೀಕ್ಷೆ ಬರೆದಿದ್ದ ಏಳಕ್ಕೂ ಹೆಚ್ಚು ಅಭ್ಯರ್ಥಿಗಳನ್ನು ಸಿಐಡಿ ಬಂಧಿಸಿದೆ. ಇಲ್ಲಿಯೂ ಓಎಂಆರ್ ಶೀಟ್ ತಿದ್ದಿರೋದು ದೃಢಪಟ್ಟಿದೆ. ಬ್ಲೂಟೂತ್ ಕೂಡ ಆರೋಪಿಗಳು ಬಳಕೆ ಮಾಡಿರೋದು ಬೆಳಕಿಗೆ ಬಂದಿದೆ. ಈ ಮಧ್ಯೆ, ಆರ್‍ಡಿ ಪಾಟೀಲ್ ಮತ್ತು ಮಂಜುನಾಥ್ ಮೆಳಕುಂದಿ ಟೀಂಗಳಿಂದ ದೊಡ್ಡ ಮೊತ್ತದ ಹಣ ಸ್ವೀಕರಿಸಿರೋದನ್ನು ದಿವ್ಯಾ ಹಾಗರಗಿ ಒಪ್ಪಿಕೊಂಡಿದ್ದಾರೆ. ಇದನ್ನೂ ಓದಿ: ಪಿಎಸ್‌ಐ ನೇಮಕಾತಿಯಲ್ಲಿ ಅಕ್ರಮ – ಬೆಂಗಳೂರಿನಲ್ಲಿ 12 ಅಭ್ಯರ್ಥಿಗಳು ಅರೆಸ್ಟ್
Advertisement
ಕಲಬುರಗಿಯಲ್ಲಿ ಪರೀಕ್ಷೆಯ ಅಕ್ರಮ ಬಯಲಾಗಿತ್ತು. ಈ ಪ್ರಕರಣದ ಆರೋಪಿ ಆಗಿದ್ದ ಮಂಜುನಾಥ್ ಮೇಳಕುಂದಿ ಇಂದು ತಾವಾಗಿಯೇ ಬಂದು ಸಿಐಡಿ ಪೊಲೀಸರಿಗೆ ಶರಣಾಗಿದ್ದಾರೆ. ನೀರಾವರಿ ಇಲಾಖೆಯಲ್ಲಿ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. ಆ ಬಳಿಕ ಎಫ್‍ಐಆರ್ ದಾಖಲಾದ ಬಳಿಕ ನಾಪತ್ತೆ ಆಗಿದ್ದರು. ಈ ಹಿನ್ನೆಲೆಯಲ್ಲಿ 6 ದಿನಗೊಳಗೆ ಶರಣಾಗಬೇಕು, ಇಲ್ಲದಿದ್ದರೇ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವುದಾಗಿ ಕೋರ್ಟ್ ಎಚ್ಚರಿಕೆ ನೀಡಿತ್ತು. ಇದೀಗ ಆಟೋದಲ್ಲಿ ಒಬ್ಬನೇ ಸಿಐಡಿ ಕಚೇರಿಗೆ ಆಗಮಿಸಿ ಶರಣಾಗಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿ ಮಾತನಾಡಿದ ಅವರು, ನಾನು ಯಾವುದೇ ತಪ್ಪು ಮಾಡಿಲ್ಲ. ನನ್ನ ಆರೋಗ್ಯ ಸರಿಯಿರಲಿಲ್ಲ. ಹೀಗಾಗಿ ಮಂಗಳೂರಿಗೆ ಹೋಗಿದ್ದೆ. ಇಂದು ಮುಂಜಾನೆ ಕಲಬುರಗಿಗೆ ಬಂದಿದ್ದೇನೆ. ನಂತರ ನಾನೇ ಸಿಐಡಿ ಮಂದೆ ಶರಣಾಗಲು ಬಂದಿದ್ದೇನೆ ಎಂದು ತಿಳಿಸಿದರು.