ಬೆಂಗಳೂರು: ಪಿಎಸ್‍ಐ ಬ್ರಹ್ಮಾಂಡ ಭ್ರಷ್ಟಾಚಾರ ಪ್ರಕರಣ ದಿನ ದಿನ ಅನಾವರಣ ಆಗುತ್ತಲೇ ಇದೆ. ಒಬ್ಬೊಬ್ಬರದ್ದು ಒಂದೊಂದು ಸ್ಟೋರಿ. ಅದರಂತೆ ಪಿಎಸ್‍ಐ ಆಗಿಯೇ ಬಿಟ್ಟೆ ಅಂದುಕೊಂಡಿದ್ದ ಬಾವಿ ಪಿಎಸ್‍ಐ ಪೊಲೀಸರ ಖೆಡ್ಡಾಕ್ಕೆ ಬಿದ್ದಿದ್ದಾನೆ.
Advertisement
ಹೌದು, ಕಲುಬುರಗಿಯ ವಿಶಾಲ್‍ಗೆ ಕಲ್ಯಾಣ ಕರ್ನಾಟಕದ ಖೋಟಾದಡಿ 15ನೇ ರ್‍ಯಾಕಿಂಗ್ ಬಂದಿತ್ತು. 15ನೇ ರ್‍ಯಾಂಕ್ ಬಂದವನು ಮೊದಲನೇ ಪೇಪರ್ ಅಲ್ಲಿ ಪಡೆದಿದ್ದು ಕೇವಲ 18 ಅಂಕಗಳನ್ನು ಮಾತ್ರ. ಮೊದಲ ಪೇಪರ್ ಅಲ್ಲಿ 18 ಅಂಕ ಪಡೆದಿದ್ದವ ಎರಡನೇ ಪೇಪರ್‌ನಲ್ಲಿ ಏಕಾಏಕಿ 123 ಅಂಕ ಪಡೆದು ಸೆಲೆಕ್ಟ್ ಆಗಿದ್ದ. ಇದನ್ನೂ ಓದಿ: ಪಿಎಸ್‌ಐ ಪರೀಕ್ಷೆಯಲ್ಲಿ ಅಕ್ರಮ – ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅರೆಸ್ಟ್
Advertisement
Advertisement
ಈ ಸೆಲೆಕ್ಷನ್ ಬಗ್ಗೆ ಅನುಮಾನ ಹೊಂದಿದ್ದ ಸಿಐಡಿ ಒಂದಷ್ಟು ಮಾಹಿತಿ ಕಲೆ ಹಾಕಿದ್ರು. ಈತನೂ ಕೂಡ ದಿವ್ಯಾ ಹಾಗರಗಿ ಕಾಲೇಜಿನಲ್ಲಿಯೇ ಎಕ್ಸಾಂ ಬರೆದಿದ್ದು, ಇವನೂ ಕೂಡ ಅಕ್ರಮವಾಗಿಯೇ ಸೆಲೆಕ್ಟ್ ಆಗಿದ್ದಾನೆ. ಸದ್ಯ ಸಿಐಡಿ ಪೊಲೀಸರು ತಮ್ಮ ವಶಕ್ಕೆ ಪಡೆದಿದ್ದು ವಿಚಾರಣೆ ಮುಂದುವರಿಸಿದ್ದಾರೆ. ಇದನ್ನೂ ಓದಿ: PSI ಅಕ್ರಮ ನೇಮಕಾತಿ: ಎಂಎಲ್‌ಎ ಮುಂದೆಯೇ ಗನ್‌ಮ್ಯಾನ್ ಅರೆಸ್ಟ್
Advertisement