ಬೆಳಗಾವಿ: ಪೊಲೀಸ್ ಸಬ್ ಇನ್‌ಸ್ಪೆಕ್ಟರ್(PSI) ಪರೀಕ್ಷೆ ಬರೆಯಲು ಮುಂದಾಗಿದ್ದ ಅಭ್ಯರ್ಥಿಗಳಿಗೆ ಗುಡ್‌ನ್ಯೂಸ್. ಪರೀಕ್ಷೆಯನ್ನು ಸರ್ಕಾರ ಒಂದು ತಿಂಗಳು ಮುಂದೂಡಿಕೆ ಮಾಡಿದೆ.
ಬೆಳಗಾವಿ ಅಧಿವೇಶನದಲ್ಲಿ (Belagavi Session) ಮಾಜಿ ಸಚಿವ ಆರಗ ಜ್ಞಾನೇಂದ್ರ (Araga Jnanendra) ಅವರು ಎರಡು ತಿಂಗಳ ಬಳಿಕ ಪರೀಕ್ಷೆ ಮಾಡಿ, ಸಮಸ್ಯೆ ಏನೂ ಆಗುವುದಿಲ್ಲ ಎಂದು ಒತ್ತಾಯಿಸಿದರು.ಇದಕ್ಕೆ ಉತ್ತರ ನೀಡಿದ ಗೃಹ ಸಚಿವ ಪರಮೇಶ್ವರ್ (G Parameshwar) ಮೊದಲು ಡಿ.23 ಕ್ಕೆ ಮಾಡಲು ನಿಗದಿ ಮಾಡಿದ್ದೆವು. ಈಗ ಈ ಪರೀಕ್ಷೆಯನ್ನು ಜ.23ಕ್ಕೆ ಮುಂದೂಡಿಕೆ ಮಾಡಿದ್ದೇವೆ ತಿಳಿಸಿದರು.
Advertisement
Advertisement
ಪರೀಕ್ಷೆ ನಡೆಸುವಾಗ ಜಾಗ್ರತೆ ವಹಿಸಿದ್ದರೆ ಇದು ಆಗುತ್ತಿರಲಿಲ್ಲ. ಆ ಸರ್ಕಾರ, ಈ ಸರ್ಕಾರ ಅಂತಲ್ಲ. ಲಾ ಆಂಡ್ ಆರ್ಡರ್ ಇಲ್ಲದೆ, ಕಾನೂನು ಸುವ್ಯವಸ್ಥೆ ಕಷ್ಟ ಆಗಿದೆ. ಒಂದುವರೆ ಸಾವಿರ ಪಿಎಸ್‌ಐ ನೇಮಕ ಆಗಬೇಕು. ಇದರಿಂದ ಲಾ ಆಂಡ್ ಆರ್ಡರ್ ಸಮಸ್ಯೆ ಆಗಿದೆ ಎಂದರು.
Advertisement
ನಮ್ಮ ಶಾಸಕರೇ ಇವರು ಸರಿ ಇಲ್ಲ, ಅವರು ಸರಿ ಇಲ್ಲ ಎಂದು ಹೇಳುತ್ತಾರೆ. ಈ ಮಧ್ಯೆ ಖಾಲಿ ಇದೆ, ಇವರನ್ನು ಕೊಡಿ, ಅವರನ್ನು ಕೊಡಿ ಎಂದು ಹೇಳುತ್ತಾರೆ. ಗೃಹ ಸಚಿವರಾಗಿದ್ದ ಅಶೋಕ್, ಆರಗ ಜ್ಞಾನೇಂದ್ರ ಅವರಿಗೂ ಗೊತ್ತಿದೆ ಎಂದು ಸದನಕ್ಕೆ ತಿಳಿಸಿದರು.