ಬೆಂಗಳೂರು: ಪ್ರಸ್ತುತ ರಾಜ್ಯದಲ್ಲಿ ಪಿಎಸ್‌ಐ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ನಡೆದಿರುವ ಬಗ್ಗೆ ತನಿಖೆ ನಡೆಯುತ್ತಿದ್ದು, ದಿನಕ್ಕೊಂದು ಸ್ಪೋಟಕ ಮಾಹಿತಿಗಳು ಹೊರಬೀಳುತ್ತಿವೆ.
ಈ ಬೆನ್ನಲ್ಲೇ ಪಿಎಸ್‌ಐ ನೇಮಕಾತಿ ಪರೀಕ್ಷಾ ಅಕ್ರಮದ ಪ್ರಮುಖ ಆರೋಪಿ ದಿವ್ಯಾ ಹಾಗರಗಿ ಅವರ ಜೊತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಮಾತನಾಡುತ್ತಿರುವ ಚಿತ್ರವನ್ನು ಟ್ವೀಟ್ ಮಾಡಿರುವ ಬಿಜೆಪಿ, ಕಾಂಗ್ರೆಸ್ ಮುಂದೆ ಹಲವು ಪ್ರಶ್ನೆಗಳನ್ನು ಇಟ್ಟಿದೆ. ಇದನ್ನೂ ಓದಿ: ರಾಜ್ಯದಲ್ಲಿ ಅವಧಿ ಪೂರ್ವ ಚುನಾವಣೆ, ಸಿಎಂ ಬದಲಾವಣೆ ಸಾಧ್ಯವೇ ಇಲ್ಲ: ಜಗದೀಶ್ ಶೆಟ್ಟರ್
Advertisement
ಪ್ರಿಯಾಂಕ ಖರ್ಗೆಯವರೇ, ಪೂರ್ಣ ಸರ್ಕಾರವೇ ದಿವ್ಯಾ ಹಾಗರಗಿ ಅವರ ಜೊತೆಯಿದೆ ಎಂದು ಆಪಾದಿಸಿದ್ದೀರಿ.
ಆದರೆ ಇಲ್ಲಿ ನೋಡಿ..!!! ಈ ಚಿತ್ರ ಏನು ಹೇಳುತ್ತದೆ?
ಎಷ್ಟೊಂದು ತನ್ಮಯತೆಯಿಂದ ಮಾತನಾಡುತ್ತಿದ್ದಾರೆ!
ನಿಮ್ಮ ಪಕ್ಷದ ಯಾರು ಯಾರು ಗೋಡಂಬಿ-ಬಾದಾಮಿ ತಿಂದಿರಬಹುದು ಎಂದು ವಿವರಿಸಬಹುದೇ?#CONgressPSIToolkit pic.twitter.com/qnEPtdjRa6
— BJP Karnataka (@BJP4Karnataka) April 26, 2022
Advertisement
ಪ್ರಿಯಾಂಕ್ ಖರ್ಗೆಯವರೇ ಪೂರ್ಣ ಸರ್ಕಾರವೇ ದಿವ್ಯಾ ಹಾಗರಗಿ ಜೊತೆ ಇದೆ ಎಂದು ಆಪಾದಿಸಿದೀರಿ. ಆದರೆ ಇಲ್ಲಿ ನೋಡಿ… ಈ ಚಿತ್ರ ಏನು ಹೇಳುತ್ತದೆ? ಎಂದು ಬಿಜೆಪಿ ಪ್ರಶ್ನಿಸಿದೆ. ಎಷ್ಟೊಂದು ತನ್ಮಯತೆಯಿಂದ ಮಾತಾಡುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ದಿವ್ಯಾ ಹಾಗರಗಿ ಜೊತೆಗಿರುವ ಚಿತ್ರವನ್ನು ತಮ್ಮ ಬಿಜೆಪಿ ಕರ್ನಾಟಕ ಟ್ವೀಟ್ ಖಾತೆಯಲ್ಲಿ ಹಂಚಿಕೊಂಡಿದೆ.
Advertisement
ನಿಮ್ಮ ಪಕ್ಷದ ಯಾರು ಯಾರು ಗೋಡಂಬಿ -ಬಾದಾಮಿ ತಿಂದಿರಬಹುದು ಎಂಬುದನ್ನು ವಿವರಿಸಬಹುದೇ? ಎಂದೂ ಬಿಜೆಪಿ ಲೇವಡಿ ಮಾಡಿ, ನೀವೆಷ್ಟೇ ರಹಸ್ಯ ಕಾರ್ಯಾಚರಣೆ ನಡೆಸಿದರೂ ಸತ್ಯ ಒಂದಿಲ್ಲೊಂದು ದಿನ ಬಯಲಾಗಲೇಬೇಕಲ್ಲವೇ? ಎಂದು ಪ್ರಶ್ನಿಸಿದೆ. ಇದನ್ನೂ ಓದಿ: ಕೋವಿಡ್ ನಿಯಮ ಉಲ್ಲಂಘಿಸಿದ್ರೆ ಬೀಳುತ್ತೆ ಭಾರೀ ದಂಡ – ಯಾವ ರಾಜ್ಯದಲ್ಲಿ ಎಷ್ಟಿದೆ ಗೊತ್ತಾ?
Advertisement
ಸಿದ್ದರಾಮಯ್ಯ ಅವರೇ, ಗೋವಿಂದರಾಜ್ ಡೈರಿಯಲ್ಲಿ ನಿಮ್ಮ ಪರ್ಸಂಟೇಜ್ ವ್ಯವಹಾರದ ಲೆಕ್ಕವಿತ್ತೇ?
ಅಡಿಯಿಂದ ಮುಡಿಯವರೆಗೂ ಭ್ರಷ್ಟಾಚಾರವನ್ನು ಹೊದ್ದು ಮಲಗಿದ ಸರ್ಕಾರ ನಿಮ್ಮದಾಗಿತ್ತು ಎಂಬುದು ಡೈರಿಯೇ ಹೇಳುತ್ತಿತ್ತು.
ತಾನು ಕಳ್ಳ ಪರರ ನಂಬ ಎಂಬ ಮಾತು @siddaramaiah ಅವರಿಗೆ ಹೇಳಿ ಮಾಡಿಸಿದ ಹಾಗಿದೆ.#CONgressPSIToolkit pic.twitter.com/eazf8XLuKG
— BJP Karnataka (@BJP4Karnataka) April 26, 2022
ಪಿಎಸ್‌ಐ ನೇಮಕ ಹಗರಣ ಕಾಂಗ್ರೆಸ್ ಕೃಪಾಪೋಷಿತರ ನಾಟಕ ಮಂಡಳಿಯ ಟೂಲ್ ಕಿಟ್ ಎಂದು ಸಾರಿ ಸಾರಿ ಹೇಳುವುದಕ್ಕೆ ಸಾಕ್ಷ್ಯ ಇಲ್ಲಿದೆ. ಕಾಂಗ್ರೆಸ್ ಟೂಲ್ ಕಿಟ್ ಷಡ್ಯಂತ್ರಕ್ಕೆ ಕೆಪಿಸಿಸಿ ಅಧ್ಯಕ್ಷರ ಸದಾಶಿವನಗರದ ಬಂಗಲೆಯೇ ಪ್ರಮುಖ ಅಡ್ಡಾವಾಗಿದೆ. ಅಧಿಕಾರ ಇಲ್ಲದೇ ಇದ್ದರೂ ವ್ಯವಸ್ಥೆಯಲ್ಲಿ ಭ್ರಷ್ಟಾಚಾರ ತುರುಕುವುದಕ್ಕೆ ಕಾಂಗ್ರೆಸ್ ನಾಯಕರಿಗೆ ಮಾತ್ರ ಸಾಧ್ಯ ಎಂದೂ ಹೇಳಿದೆ. ಇದನ್ನೂ ಓದಿ: ತಾಳಿ ಭಾಗ್ಯ, ಅನ್ನ ಭಾಗ್ಯದಂತಹ ದರಿದ್ರ ಭಾಗ್ಯಗಳು ಬೇಡ: ಸಿಎಂ ಮುಂದೆ ಯತ್ನಾಳ್ ಕಿಡಿ
ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಡಿ.ಕೆ.ಶಿವಕುಮಾರ್ ನಡೆಸುತ್ತಿರುವ ಪ್ರತಿಯೊಂದು ಷಡ್ಯಂತ್ರಕ್ಕೂ ಈಗ ದಾಖಲೆ ಲಭಿಸುತ್ತಿದೆ. ಸಿಡಿ ವಿವಾದ, ಹಿಜಾಬ್ ಸಂಘರ್ಷ, 40 ಪರ್ಸೆಂಟ್ ಕಮಿಷನ್, ಹರ್ಷನ ಕೊಲೆ, ಹುಬ್ಬಳ್ಳಿ ಗಲಭೆ, ಪಿಎಸ್‌ಐ ನೇಮಕ ಹಗರಣ ಎಲ್ಲದಕ್ಕೂ ಸೂತ್ರಧಾರ ಒಬ್ಬರೇ, ಅದು ಡಿ.ಕೆ.ಶಿವಕುಮಾರ್ ಎಂದು ಬಿಜೆಪಿ ಆರೋಪಿಸಿದೆ. ಅಲ್ಲದೆ, ಪಿಎಸ್‌ಐ ನೇಮಕಾತಿ ಪರೀಕ್ಷೆಗೆ ಬ್ಲೂಟೂತ್ ಮೂಲಕ ಉತ್ತರ ರವಾನಿಸಿದ್ದ ಕಾಂಗ್ರೆಸ್ ಮುಖಂಡನ ಬಂಧನ ಎನ್ನುವ ಪತ್ರಕಾ ವರದಿಯನ್ನೂ ಟ್ವೀಟ್ ಮಾಡಿದೆ.
ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧವೂ ಟ್ವೀಟ್ ವಾರ್ ನಡೆಸಿರುವ ಬಿಜೆಪಿ, ಸಿದ್ದರಾಮಯ್ಯ ಅವರೇ, ಗೋವಿಂದರಾಜ್ ಡೈರಿಯಲ್ಲಿ ನಿಮ್ಮ ಪರ್ಸಂಟೇಜ್ ವ್ಯವಹಾರದ ಲೆಕ್ಕವಿತ್ತೇ? ಅಡಿಯಿಂದ ಮುಡಿಯವರೆಗೂ ಭ್ರಷ್ಟಾಚಾರ ಹೊದ್ದು ಮಲಗಿದ ಸರ್ಕಾರ ನಿಮ್ಮದಾಗಿತ್ತು ಎಂಬುದು ಡೈರಿಯೇ ಹೇಳುತ್ತಿತ್ತು. ತಾನೇ ಕಳ್ಳ ಪರರನ್ನು ನಂಬಬೇಡ ಎನ್ನುವ ಮಾತು ಸಿದ್ದರಾಮಯ್ಯ ಅವರಿಗೆ ಹೇಳಿಮಾಡಿಸಿದಂತಿದೆ ಎಂದು ಸರಣಿ ಟ್ವೀಟ್‌ಗಳನ್ನು ಮಾಡಿದೆ.