ಕೊಪ್ಪಳ: ಹೃದಯಾಘಾತದಿಂದ ಮೃತಪಟ್ಟಿದ್ದ ಪಿಎಸ್ಐ ಪರಶುರಾಮ್ (PSI Parashuram) ಮೃತದೇಹದ ಅಂತ್ಯಸಂಸ್ಕಾರ ತಾಲೂಕಿನ ಸೋಮನಾಳ ಗ್ರಾಮದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿತು.
ಪೊಲೀಸ್ ಇಲಾಖೆಯ ಯಾದಗಿರಿ ಮತ್ತು ಕೊಪ್ಪಳ ಜಿಲ್ಲೆಯ ಅಧಿಕಾರಿಗಳು ಸೇರಿದಂತೆ ತಾಲೂಕಿನ ವಿವಿಧ ಸಂಘಟನೆಗಳು ಸುತ್ತಮುತ್ತಲಿನ ಗ್ರಾಮಗಳ ನೂರಾರು ಜನರು ಪಿಎಸ್‌ಐ ಪರಶುರಾಮ್ ಅವರ ಅಂತಿಮದರ್ಶನ ಪಡೆದರು. ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ, ಬಳ್ಳಾರಿ ಐಜಿ ಬಿ.ಜಿ.ಲೋಕೇಶ ಕುಮಾರ್, ಎಸ್ಪಿ ಡಾ. ರಾಮ್ ಅರಸಿದ್ದ, ಮಾಜಿ ಶಾಸಕ ಬಸವರಾಜ ದಢೇಸ್ಗೂರು, ಗೌರವ ವಂದನೆಗಳನ್ನು ಸಲ್ಲಿಸಿದರು. ಪೊಲೀಸ್ ಇಲಾಖೆಯಿಂದ ಪಿಎಸ್‌ಐ ಪರಶುರಾಮ್ ಪಾರ್ಥಿವ ಶರೀರಕ್ಕೆ ಗೌರವವಂದನೆ ಸಲ್ಲಿಸಿ ಮೂರು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಲಾಯಿತು. ಇದನ್ನೂ ಓದಿ: ಪಿಎಸ್‌ಐ ಸಾವು ಪ್ರಕರಣ; ಸಿಐಡಿ ತನಿಖೆಗೆ ವಹಿಸಿ ಸರ್ಕಾರ ಆದೇಶ
Advertisement
Advertisement
ಕೊಪ್ಪಳದ ಕಾರಟಗಿ ತಾಲೂಕಿನ ಸೋಮನಾಳ ಗ್ರಾಮಕ್ಕೆ ಪರಶುರಾಮ್ ಪಾರ್ಥಿವ ಶರೀರ ಆಗಮಿಸಿತು. ಪಿಎಸ್‌ಐ ಸ್ವಗ್ರಾಮದಲ್ಲಿ ನೀರವ ಮೌನ ಆವರಿಸಿತ್ತು. ಸಂಜೆ 6ಗಂಟೆ ಸರಿಯಾಗಿ ಪಾರ್ಥಿವ ಶರೀರ ಗ್ರಾಮಕ್ಕೆ ಆಗಮಿಸಿ ಮೊದಲಿಗೆ ನೇರವಾಗಿ ಅವರ ಸ್ವಗೃಹಕ್ಕೆ ತೆಗೆದುಕೊಂಡು ಹೋಗಲಾಯಿತು. ಸ್ವಗ್ರಾಮ ತಲುಪುತ್ತಿದ್ದಂತೆ ಕುಟಂಬಸ್ಥರು ಹಾಗೂ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು.
Advertisement
ಪ್ರತಿಭಟನೆ: ಘಟನೆ ಖಂಡಿಸಿ ಸೋಮನಾಳದಲ್ಲಿ ಛಲವಾದಿ ಸಂಘಟನೆಯಿಂದ ಪ್ರತಿಭಟನೆ ನಡೆಯಿತು. ಯಾದಗಿರಿ ಭ್ರಷ್ಟ ಶಾಸಕನಿಗೆ ಧಿಕ್ಕಾರ ಅಂತಾ ಘೋಷಣೆ ಕೂಗಿದ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಪಾರ್ಥಿವ ಶರೀರ ಇಟ್ಟ ಮೈದಾನದಲ್ಲಿಯೇ ಸಂಘಟನೆ ಪ್ರತಿಭಟನೆ ನಡೆಯಿತು. ಯಾದಗಿರಿ ಶಾಸಕ ಚೆನ್ನಾರೆಡ್ಡಿ ಮತ್ತು ಆತನ ಪುತ್ರ ಬಂಧನಕ್ಕೆ ಮೃತ ಪಿಎಸ್‌ಐ ಪರಶುರಾಮ್ ಕುಟುಂಬಕ್ಕೆ ನ್ಯಾಯದೊರಕಿಸಿ ಕೊಡಬೇಕೆಂದು ಆಗ್ರಹಿಸಿ ರಸ್ತೆಯ ಮೇಲೆ ಕುಳಿತು ಪ್ರತಿಭಟನೆ ನಡೆಸಿದರು. ಮೃತರ ಕುಟುಂಬಕ್ಕೆ 2 ಕೋಟಿ ಪರಿಹಾರ ನೀಡಬೇಕು. ಅವರ ಪತ್ನಿಗೆ ಅದೇ ಹುದ್ದೆಯನ್ನೂ ನೀಡಬೇಕೆಂದು ಒತ್ತಾಯಿಸಿದರು. ಇದನ್ನೂ ಓದಿ: ಪಿಎಸ್‌ಐ ಪರಶುರಾಮ್ ಸಾವು : ಕೊನೆಗೂ ಶಾಸಕ, ಪುತ್ರನ ವಿರುದ್ಧ ಕೇಸ್
Advertisement
ಸಚಿವರ ಭೇಟಿ: ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ಗ್ರಾಮಕ್ಕೆ ಭೇಟಿ ನೀಡಿ ಮೃತ ಪಿಎಸ್‌ಐ ಪರಶುರಾಮ್ ಅಂತಿಮದರ್ಶನ ಪಡೆದರು. ಸಚಿವರು ಗ್ರಾಮದ ಪ್ರೌಢಶಾಲೆಗೆ ಭೇಟಿ ನೀಡುತ್ತಿದ್ದಂತೆ ದಲಿತ ಸಂಘಟನೆಗಳು ಮತ್ತು ಕುಟುಂಬದ ಸದಸ್ಯರು ಸಚಿವರನ್ನು ಭೇಟಿಯಾಗಿ ಪ್ರಕರಣ ತನಿಖೆಗೆ ಒತ್ತಾಯಿಸಿದರು. ಮೊದಲಿಗೆ ಕುಟುಂಬದ ಸದಸ್ಯರಿಗೆ ಸಂತಾಪ ನೀಡಿದ ಸಚಿವರು ಪ್ರಕರಣದ ಕುರಿತು ಸಿಎಂ ಇವರ ಗಮನಕ್ಕೆ ತರುವೆ. ನನ್ನ ಕ್ಷೇತ್ರದ ವ್ಯಕ್ತಿಗೆ ಈ ರೀತಿಯಾಗಿದ್ದು, ಇದೆಲ್ಲವನ್ನೂ ಸಿಎಂ ಇವರೊಂದಿಗೆ ಚರ್ಚಿಸಿ ನ್ಯಾಯ ಒದಗಿಸುವೆ ಎಂದು ಭರವಸೆ ನೀಡಿದರು. ಈ ನಡುವೆ ನೆರೆದಿದ್ದ ಜನರು ಮೃತರ ಪತ್ನಿಗೆ ಪಿಎಸ್‌ಐ ಹುದ್ದೆಯನ್ನೇ ನೀಡಬೇಕೆಂದು ಆಗ್ರಹಿಸಿದರು.