ಮಂಗಳೂರು: ಕರಾವಳಿ, ಮಲೆನಾಡಿನಲ್ಲಿ ಎಡಬಿಡದೇ ಸುರಿಯುತ್ತಿರುವ ಮಳೆಯಿಂದಾಗಿ ಅಲ್ಲಿಯ ಜನರು ಬೀದಿಗೆ ಬಂದಿದ್ದು, ಜೀವವನ್ನು ಕೈಯಲ್ಲಿ ಹಿಡಿದುಕೊಂಡು ರಸ್ತೆಗಳನ್ನು ದಾಟುತ್ತಿದ್ದಾರೆ. ಸಂಪಾಜೆಯ ಜೋಡುಪಾಳದಲ್ಲಿ ಗುಡ್ಡ ಕುಸಿತವಾದ ಹಿನ್ನೆಲೆಯಲ್ಲಿ ಪಿಎಸ್ ಐ ಮಂಜುನಾಥ್ ಹೆಗಲ ಮೇಲೆ ಸ್ಥಳೀಯರನ್ನ ಹೊತ್ತೊಯ್ದ ಸುರಕ್ಷಿತ ಸ್ಥಳಕ್ಕೆ ಸಾಗಿಸುತ್ತಿದ್ದಾರೆ.
ಜನರನ್ನು ಒಂದೆಡೆಯಿಂದ ಮತ್ತೊಂದು ಕಡೆಗೆ ಸಾಗಿಸಲು ಮಾರ್ಗ ಮಧ್ಯೆ ಹಗ್ಗ ಕಟ್ಟಲಾಗಿದ್ದು, ರಕ್ಷಣಾ ಕಾರ್ಯ ಮುಂದುವರೆದಿದೆ. ಸ್ಥಳದಲ್ಲಿ ಮಂಜುನಾಥ್‍ರ ಕೆಲಸ ಸ್ಥಳೀಯರ ಮೆಚ್ಚುಗೆಗೆ ಪಾತ್ರವಾಗಿದೆ. ರಭಸದಿಂದ ಹರಿಯುತ್ತಿರುವ ನೀರನ್ನು ದಾಟಿಸಲು ಮಂಜುನಾಥ್ ತಮ್ಮ ಭುಜದ ಮೇಲೆ ಹೊತ್ತು ಸಾಗಿಸುತ್ತಿದ್ದಾರೆ.
Advertisement
ಶುಕ್ರವಾರ ಜೋಡುಪಾಳ್ಯದಲ್ಲಿ ನೀರಿನ ಸಮೇತ ಮಣ್ಣು ಸಹ ಕೊಚ್ಚಿಕೊಂಡು ಬರುತ್ತಿತ್ತು. ಈ ವೇಳೆ ಜೋಡುಪಾಳ್ಯದ ಪ್ರವಾಹದಲ್ಲಿ ಸುಮಾರು 180 ಜನರು ಸಿಲುಕಿಕೊಂಡಿದ್ದರು. ಪಶ್ಚಿಮ ಘಟ್ಟದಲ್ಲಿ ನಿರಂತರವಾಗಿ ಮಳೆಯಾಗಿದ್ದು, ಮಣ್ಣನ್ನು ಹಿಡಿದಿಟ್ಟುಕೊಳ್ಳಲು ಅಲ್ಲಿ ಮರಗಳು ಇಲ್ಲದ ಕಾರಣ ಜೋಡುಪಾಳ್ಯ ಗ್ರಾಮಕ್ಕೆ ಸಂಪೂರ್ಣ ಮಣ್ಣಿನಿಂದ ಕೊಚ್ಚಿಕೊಂಡು ಹೋಗುತ್ತಿದೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
Advertisement
https://youtu.be/gGXGFVXr2eA