ಚಿಕ್ಕಬಳ್ಳಾಪುರ: ಸುಳ್ಳು ಪ್ರಕರಣ ಸೃಷ್ಟಿಸಿ ವ್ಯಕ್ತಿಯೊಬ್ಬನನ್ನು ಕಿಡ್ನಾಪ್ ಮಾಡಿಸಿದ ಪಿಎಸ್‍ಐ ಹಾಗೂ ಮುಖ್ಯಪೇದೆಯೊಬ್ಬರನ್ನು ಪೊಲೀಸ್ ಇಲಾಖೆ ಅಮಾನತುಗೊಳಿಸಲಾಗಿದೆ.
ಜಿಲ್ಲೆಯ ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ ಪಿಎಸ್‍ಐ ವಿಜಯ್ ರೆಡ್ಡಿ ಹಾಗೂ ಮುಖ್ಯಪೇದೆ ಇನಾಯತ್ ಉಲ್ಲಾ ಕಿಡ್ನಾಪ್ ಪ್ರಕರಣದಲ್ಲಿ ಸಿಲುಕಿಕೊಂಡಿರುವ ಪೊಲೀಸ್ ಸಿಬ್ಬಂದಿ. ಚಿಕ್ಕಬಳ್ಳಾಪುರದ ಎಸ್ಪಿ ಕಾರ್ತಿಕ್ ರೆಡ್ಡಿ ಅವರು ಕರ್ತವ್ಯಲೋಪ ಹಾಗೂ ನಿರ್ಲಕ್ಷ್ಯ ಆರೋಪದಡಿ ಪಿಎಸ್‍ಐ ವಿಜಯ್ ರೆಡ್ಡಿ ಹಾಗೂ ಮುಖ್ಯಪೇದೆ ಇನಾಯತ್ ಉಲ್ಲಾ ಅವರನ್ನು ಅಮಾನತುಗೊಳಿಸುವಂತೆ ಆದೇಶ ಹೊರಡಿಸಿದ್ದಾರೆ.
Advertisement
Advertisement
ಯಾಕೆ ಅಮಾನತು..?
Advertisement
ಶಿಡ್ಲಘಟ್ಟ ಗ್ರಾಮಾಂತರ ಪಿಎಸ್‍ಐ ವಿಜಯ್ ರೆಡ್ಡಿ 2017ರ ನವೆಂಬರ್ 9ರಂದು ಮಳಮಾಚನಹಳ್ಳಿ ಬಳಿ ಬೆಂಗಳೂರು ಮೂಲದ ಮದನ್ ಗೋಪಾಲ್ ಎಂಬಾತನನ್ನ ಬಂಧಿಸಿದ್ದರು. ಈತನ ವಿರುದ್ಧ ಅಕ್ರಮ ಶ್ರೀಗಂಧ ಕಳ್ಳಸಾಗಾಣಿಕೆ ಪ್ರಕರಣ ದಾಖಲಿಸಿ ಫಾರೆಸ್ಟ್ ಆ್ಯಕ್ಟ್‌ನಡಿ ಕೇಸ್ ಮಾಡಿ ಜೈಲಿಗೆ ಕಳುಹಿಸಿದ್ದರು. ಈ ಪ್ರಕರಣದಲ್ಲಿ ನವೆಂಬರ್ 9 ರಂದು ಮದನ್ ಗೋಪಾಲ್ ಬಂಧನವಾಗಿದ್ದರು. ಅಲ್ಲದೆ ನವೆಂಬರ್ 10ರಂದು ಎಫ್‍ಐಆರ್ ದಾಖಲಾಗಿತ್ತು. ಈ ಪ್ರಕರಣದಲ್ಲಿ ಎಎಸ್‍ಐ ರತ್ನಯ್ಯ ದೂರದಾರರನ್ನಾಗಿ ಮಾಡಲಾಗಿತ್ತು. ಆದ್ರೆ ಈ ಘಟನೆ ನಡೆದ ದಿನದಂದು ನಾನು ರಜೆಯಲ್ಲಿದ್ದೆ. ಪಿಎಸ್‍ಐ ವಿಜಯ್ ರೆಡ್ಡಿ ಒತ್ತಡ ಹಾಕಿ ಶ್ರೀಗಂಧ ಸಾಗಾಣಿಕೆ ಮಾಡುತ್ತಿದ್ದ ಮದನ್ ಗೋಪಾಲ್‍ನನ್ನ ಬಂಧಿಸಿ ಠಾಣೆಗೆ ಕರೆತಂದಿರುವುದಾಗಿ ಬಲವಂತವಾಗಿ ದೂರು ದಾಖಲಿಸಿಕೊಂಡಿದ್ದರು ಎಂದು ಎಎಸ್‍ಐ ತಿಳಿಸಿದ್ದಾರೆ.
Advertisement
ಅಷ್ಟೇ ಅಲ್ಲದೆ, ನಾನು ಹಾಗೂ ಪಿಎಸ್‍ಐ ವಿಜಯ್ ರೆಡ್ಡಿ ಸೇರಿ ಪರಿಚಯಸ್ಥರಿಗೆ ಬೆಂಗಳೂರಿನಲ್ಲಿ ಕೋಟ್ಯಂತರ ರೂಪಾಯಿ ಬೆಲೆಬಾಳುವ ವಿವಾದದಲ್ಲಿದ್ದ ಜಮೀನಿನ ವ್ಯವಹಾರ ಮಾಡುತ್ತಿದ್ದರು. ಹೀಗಾಗಿ ಜಮೀನಿಗಾಗಿ ವಿಜಯ್ ರೆಡ್ಡಿ ಷಡ್ಯಂತ್ರ ರೂಪಿಸಿ ನನ್ನನ್ನು ಕಿಡ್ನಾಪ್ ಮಾಡಿಸಿದ್ದರು ಹಾಗೂ ನನ್ನ ಮೇಲೆ ಸುಳ್ಳು ಪ್ರಕರಣ ಹಾಕಲಾಗಿತ್ತು ಎಂದು ಮದನ್ ಗೋಪಾಲ್ ಪೊಲೀಸರ ಬಳಿ ತಿಳಿಸಿದ್ದಾನೆ.
ಕರ್ತವ್ಯ ದುರ್ಬಳಕೆ ಗೊತ್ತಾಗಿದ್ದು ಹೇಗೆ?
ಸುಳ್ಳು ಪ್ರಕರಣದಲ್ಲಿ ಜೈಲುಪಾಲಾಗಿದ್ದ ಮದನ್ ಗೋಪಾಲ್ ಜಾಮೀನಿನ ಮೇಲೆ ಬಿಡುಗಡೆಯಾದ ನಂತರ ಬೆಂಗಳೂರು ಕಮೀಷನರ್ ಬಳಿ ತೆರಳಿದ್ದರು. ಆಗ ತನ್ನನ್ನ 2017ರ ನವೆಂಬರ್ 9ರಂದು ಅಪರಿಚಿತರು ಬಂಡೆಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಿಡ್ನಾಪ್ ಮಾಡಿದ್ದರು. ಹಾಗೆಯೇ ವಿಜಯ್ ರೆಡ್ಡಿ ತನ್ನ ವಿರುದ್ಧ ಸುಳ್ಳು ಕೇಸ್ ದಾಖಲಿಸಿ ಜೈಲಿಗೆ ಕಳುಹಿಸಿದ್ದರು ಅಂತ ದೂರು ನೀಡಿದ್ದರು. ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿದ ಬೆಂಗಳೂರು ಕಮೀಷನರ್, ನಗರದ ಎಸಿಪಿ ವಾಸು ಅವರಿಗೆ ಪ್ರಕರಣದ ತನಿಖೆ ನಡೆಸಲು ಸೂಚನೆ ನೀಡಿದ್ದರು.
ಈ ಬಗ್ಗೆ ತನಿಖೆ ಕೈಗೊಂಡ ಎಸಿಪಿ ವಾಸು ಅವರಿಗೆ, ಉದ್ದೇಶಪೂರ್ವಕವಾಗಿ ಮದನ್ ಗೋಪಾಲ್ ವಿರುದ್ಧ ಪಿತೂರಿ ನಡೆಸಿರುವ ವಿಷಯ ತಿಳಿದುಬಂದಿದೆ. ಹೀಗಾಗಿ ಪ್ರಕರಣದಲ್ಲಿ ಶಿಡ್ಲಘಟ್ಟ ಪಿಎಸ್‍ಐ ವಿಜಯ್ ರೆಡ್ಡಿ ಸಹ ಶಾಮೀಲಾಗಿರುವ ಶಂಕೆ ವ್ಯಕ್ತವಾಗಿದೆ. ಬಳಿಕ ಪಿಎಸ್‍ಐ ವಿಜಯ್ ರೆಡ್ಡಿ ವಶಕ್ಕೆ ಪಡೆಯಲು ಎಸಿಪಿ ವಾಸು ನೇತೃತ್ವದ ಪೊಲೀಸರ ತಂಡ ಹುಡುಕಾಟ ಆರಂಭಿಸಿದರು. ಆದ್ರೆ ಪಿಎಸ್‍ಐ ವಿಜಯ್ ರೆಡ್ಡಿ ಕಳೆದ 5 ದಿನಗಳಿಂದ ಕರ್ತವ್ಯಕ್ಕೆ ರಜೆ ಹಾಕಿ ನಾಪತ್ತೆಯಾಗಿದ್ದಾರೆ. ಇದೆಲ್ಲ ಪ್ರಕರಣ ಬೆಳಕಿಗೆ ಬಂದ ನಂತರ ಪಿಎಸ್‍ಐ ವಿಜಯ್ ರೆಡ್ಡಿ ಹಾಗೂ ಪ್ರಕರಣದಲ್ಲಿ ಕರ್ತವ್ಯ ಲೋಪ ಮಾಡಿರುವ ಆರೋಪದಡಿ ಮುಖ್ಯಪೇದೆ ಇನಾಯತ್‍ನನ್ನ ಅಮಾನತು ಮಾಡಲಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv