ಬೆಂಗಳೂರು/ಕಲಬುರಗಿ: ರಾಜ್ಯಾದ್ಯಂತ ಹುಡುಕಾಡಿದರೂ ಸಿಗದ ಪಿಎಸ್‌ಐ ಅಕ್ರಮ ನೇಮಕಾತಿ ಪ್ರಕರಣದ ಕಿಂಗ್‌ಪಿನ್ ಆರೋಪಿ ದಿವ್ಯಾ ಹಾಗರಗಿ ಸಿಐಡಿ ಬೋನಿಗೆ ಬಿದ್ದದೆ ರೋಚಕ.
ದಿನಕ್ಕೊಂದು ರಹಸ್ಯಗಳನ್ನು ಬಯಲು ಮಾಡುತ್ತಿದ್ದ ಈ ಪ್ರಕರಣದಲ್ಲಿ ವಿಶೇಷ ತಂಡಗಳನ್ನು ರಚಿಸಿ ಫುಲ್ ಆಕ್ಟೀವ್ ಆಗಿ ಕೆಲಸ ಮಾಡುತ್ತಿದ್ದ ಸಿಐಡಿ ಅಧಿಕಾರಿಗಳು, ಹೊಂಚುಹಾಕಿ ಸಿನಿಮೀಯ ರೀತಿಯಲ್ಲಿ ಆಕೆಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದನ್ನೂ ಓದಿ: ಜಮೀರ್‌ಗೆ ಬಿಜೆಪಿ `ಮಹಾನಾಯಕ’ನ ಬೆಂಬಲವಿದೆ, ನಮ್ಮವರೇ ಸುಲಿಗೆ ಮಾಡುತ್ತಿದ್ದಾರೆ: ಯತ್ನಾಳ್
Advertisement
Advertisement
ದಿವ್ಯಾ ಎಸ್ಕೇಪ್ ಆಗಿದ್ದು ಹೇಗೆ?: ಪಿಎಸ್‌ಐ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ವಿಚಾರ ಕೇಳಿಬರುತ್ತಿದ್ದಂತೆ ದಿವ್ಯಾ ಹಾಗರಗಿ, ಕಾರುಚಾಲಕ ಸದ್ದಾಂ ಹುಸೇನ್‌ನ ಸಹಾಯದಿಂದ ತನ್ನ ಇನ್ನೋವಾ ಕಾರಿನಲ್ಲಿ ಅರ್ಚನಾ, ಸುನೀತಾಳನ್ನ ಕೂರಿಸಿಕೊಂಡು ಎಸ್ಕೇಪ್ ಆಗಿದ್ದಾಳೆ. ಅಷ್ಟರಲ್ಲಾಗಲೇ ಫುಲ್ ಆಕ್ಟೀವ್ ಆಗಿದ್ದ ಸಿಐಡಿಯ ಸೈಬರ್ ಕ್ರೈಂ ತಂಡವು ದಿವ್ಯಾ ಎಲ್ಲೆಲ್ಲಿ ಹೋಗ್ತಿದ್ದಾಳೆ? ಎಂಬ ಮಾಹಿತಿಯನ್ನು ಕಲೆಹಾಕತೊಡಗಿತ್ತು. ಇದಕ್ಕಾಗಿ ಸಿಐಡಿಯು 6 ವಿಶೇಷ ತಂಡಗಳನ್ನು ರಚಿಸಿಕೊಂಡಿತ್ತು. ಎಸ್ಪಿ ನಾಗೇಶ್ ಅವರ ಟೀಂ ನಿಂದ ಟೆಕ್ನಿಕಲ್ ಸಹಕಾರ ನೀಡಿತ್ತು. ಇದನ್ನೂ ಓದಿ: ತಾಕತ್ತಿದ್ದರೆ ನನ್ನ ವಿರುದ್ಧ ರೇವಣ್ಣ ನಿಲ್ಲಲಿ: ಪ್ರೀತಂ ಸವಾಲು
Advertisement
Advertisement
ಎಸ್ಕೇಪ್ ಆಗಿ ಸೊಲ್ಲಾಪುರಕ್ಕೆ ತೆರಳಿದ್ದ ದಿವ್ಯಾ ಅಲ್ಲಿ ಟೆಲಿಕಾಂ ಬ್ಯುಸಿನಸ್ ಮಾಡ್ತಿದ್ದ ಸುರೇಶ್ ಕಾಟ್ಗಾಂವ್ ನನ್ನ ಭೇಟಿಯಾಗಿದ್ದಳು. ನಂತರ ಆತನ ಬಳಿ ಆಶ್ರಯ ನೀಡುವಂತೆ ದುಂಬಾಲುಬಿದ್ದಿದ್ದಳು. ಈ ಹಿಂದೆ ಕಲಬುರಗಿಯ ಅಫ್ಜಲ್ ಪುರದಲ್ಲಿ ಸ್ಯಾಂಡ್ ಬ್ಯುಸಿನೆಸ್ ಮಾಡಿಕೊಂಡಿದ್ದಾಗ ಸುರೇಶ್‌ನ ಪರಿಚಯವಾಗಿತ್ತು. ದಿವ್ಯಾ ಸುರೇಶ್‌ಗೆ ಹಣಕಾಸಿನ ಸಹಾಯ ಮಾಡುತ್ತಿದ್ದಳು. ಆ ಋಣವನ್ನ ತೀರಿಸೋಕೆ ಸುರೇಶ್ ದಿವ್ಯಾ ಸಹಾಯಕ್ಕಾಗಿ ನಿಂತಿದ್ದನು.
ಅಕ್ರಮ ನೇಮಕಾತಿ ವಿಚಾರ ಬಯಲಾಗುತ್ತಿದ್ದಂತೆ ಅಫ್ಜಲ್‌ಪುರ ತಲುಪುವ ಮುನ್ನವೇ ದಿವ್ಯಾ ಮೊಬೈಲ್ ಸ್ವಿಚ್‌ಆಫ್ ಮಾಡಿಕೊಂಡಿದ್ದಾಳೆ. ನಂತರ ದಿವ್ಯಾ ಅಂಡ್ ಟೀಂ ಮೊಬೈಲ್ ಬಳಸದೇ ಮಹಾರಾಷ್ಟ್ರದ ಪುಣೆ ತಲುಪಿದೆ. ಇದಕ್ಕೂ ಮುನ್ನವೇ ಗುಜರಾತ್-ಮಹಾರಾಷ್ಟ್ರ ಭಾಗಗಳಲ್ಲಿ ಕಾರಿನಲ್ಲಿ ಓಡಾಟ ನಡೆಸಿದ್ದರು. ದಿವ್ಯಾಳ ಮೊಬೈಲ್ ಸ್ವಿಚ್ ಆಫ್ ಆಗೋಕು ಮುನ್ನ ಸುರೇಶನಿಗೆ ಕಾಲ್ ಮಾಡಿದ್ದಳು. ಈ ಆಧಾರದ ಮೇಲೆಯೇ ಸುರೇಶ್ ಚಲನವಲನದ ಬಗ್ಗೆ ಗಮನಹರಿಸಿದ್ದ ಸಿಐಡಿ ಟೀಂ ಸುರೇಶನ ಬೆಂಬಿದ್ದಿದೆ. ನಂತರ ಸುರೇಶ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ದಿವ್ಯಾಳ ಬಗ್ಗೆ ಸತ್ಯ ಬಾಯ್ಬಿಟ್ಟಿದ್ದಾನೆ. ಪುಣೆಗೆ ಹೋಗ್ತೀನಿ ಅಂದಿದ್ರು ಆದರೆ, ಎಲ್ಲಿ ಅಂತ ಗೊತ್ತಿಲ್ಲ ಎಂದು ಬಾಯ್ಬಿಟ್ಟಿದ್ದಾನೆ. ಇದನ್ನೂ ಓದಿ: ಮನೆಯಿಂದ ಹೋಗಬೇಕಾದ್ರೆ ರಾಜಕುಮಾರಿ ತರ ಹೋದ್ಳು, ಆದರೆ ಈಗ….: ಆ್ಯಸಿಡ್ ಸಂತ್ರಸ್ತೆ ತಾಯಿ ಅಳಲು
ನಂತರ ಸಿಐಡಿ ಅಧಿಕಾರಿಗಳು ಸುರೇಶ್‌ನನ್ನು ಪುಣೆಗೆ ಕರೆದೊಯ್ದು ದಿವ್ಯಾಳಿಗೆ ಫೋನ್ ಮಾಡಿಸಿದ್ದಾರೆ. ಲಾಡ್ಜ್ ಒಂದರ ಮಾಹಿತಿಯನ್ನ ನೀಡಿದ್ದ ದಿವ್ಯಾ. ಆ ಲಾಡ್ಜ್ ನಲ್ಲಿ ಅಡುಗೆಭಟ್ಟ ಕಾಳಿದಾಸನಿಂದ ಬಗೆಬಗೆಯ ಅಡುಗೆ ಮಾಡಿಸಿಕೊಂಡು ತಿನ್ನುತ್ತಿದ್ದರು. ಕಾಳಿದಾಸನ ಮೊಬೈಲ್ ನಿಂದಲೇ ವಾಟ್ಸಪ್ ಕಾಲ್ ಮಾಡ್ತಿದ್ರು. ಇದರಿಂದ ಆಕೆ ಲಾಡ್ಜ್ನಲ್ಲಿ ಇರುವುದು ಕನ್ಫರ್ಮ್ ಆಗಿದೆ. ಲಾಡ್ಜ್ ಅನ್ನು ಸುತ್ತುವರಿದ ಪೊಲೀಸರು ದಿವ್ಯಾ, ಅರ್ಚನಾ, ಸುನೀತಾ, ಕಾರು ಚಾಲಕ ಸದ್ದಾಂನನ್ನು ಅರೆಸ್ಟ್ ಮಾಡಿದ್ದಾರೆ. ಉಳಿದಂತೆ ಎಂಎಸ್ ಬಿಲ್ಡಿಂಗ್‌ನ ಡಿಪಿಆರ್ ಸೆಕ್ಷನ್‌ನಲ್ಲಿದ್ದ ಜ್ಯೋತಿ ಸಹ ತಗಲ್ಲಾಕ್ಕೊಂಡಿದ್ದಾಳೆ.
ಜ್ಯೋತಿ, ಶಾಂತಾಭಾಯಿ ಎಂಬಾಕೆಯನ್ನು ಪಿಎಸ್‌ಐ ಅಕ್ರಮ ನೇಮಕಾತಿ ಮಾಡಿಸಿದ್ದಳು. 15 ಉತ್ತರವನ್ನಷ್ಟೇ ಶಾಂತಾಭಾಯಿ ಉತ್ತರಿಸಿದ್ದಳು. ಆದರೆ, ಓಎಂಆರ್ ಶೀಟ್ ನಲ್ಲಿ 130 ಅಂಕ ಪಡೆಯುವಂತೆ ಮಾಡಲಾಗಿದೆ. ಒಟ್ಟಿನಲ್ಲಿ ಶಾಂತಾಭಾಯಿ ಎಸ್ಕೇಪ್ ಆಗಿದ್ದು ಆಕೆಯ ಹುಡುಕಾಟದಲ್ಲಿ ಸಿಐಡಿ ಬ್ಯುಸಿಯಾಗಿದೆ.