ರಾಯಚೂರು: ಜಿಲ್ಲೆಯ ದೇವದುರ್ಗಾ ಪೊಲೀಸ್ ಠಾಣೆಯ ಪಿಎಸ್‍ಐ ಆಗಿ ಕಾರ್ಯನಿರ್ವಹಿಸುತ್ತಿರುವ ಎಲ್‍ಬಿ ಅಗ್ನಿ ಅವರು ತಮ್ಮ ಒಂದು ತಿಂಗಳ ವೇತನವನ್ನು ಹುತಾತ್ಮ ಯೋಧ ಗುರು ಅವರ ಕುಟುಂಬಕ್ಕೆ ನೀಡಿದ್ದಾರೆ.
ಪುಲ್ವಾಮಾ ದಾಳಿಯಲ್ಲಿ 40 ಯೋಧರು ಸಾವನ್ನಪ್ಪಿದ್ದು, ಯೋಧರ ಸಾವಿನ ಸುದ್ದಿ ಕೇಳಿ ಅಘಾತವಾಯಿತು. ನಮ್ಮ ರಾಜ್ಯ ಒಬ್ಬ ಯೋಧರು ಸಾವನ್ನಪ್ಪಿದ ತಿಳಿದ ಬಳಿಕ ಅವರ ಕುಟುಂಬಕ್ಕೆ ಸಹಾಯ ಮಾಡಲು ಯೋಚಿಸಿದೆ. ಅದರಂತೆ ನನ್ನ ಒಂದು ತಿಂಗಳ ವೇತನ 45 ಸಾವಿರ ರೂ. ಗಳನ್ನು ಅವರ ಕುಟುಂಬಕ್ಕೆ ನೀಡುತ್ತೇನೆ. ಈ ಮೂಲಕ ಯೋಧರಿಗೆ ನೈತಿಕ ಬೆಂಬಲ ನೀಡುವುದು ನನ್ನ ಉದ್ದೇಶವಷ್ಟೇ ಎಂದು ತಿಳಿಸಿದ್ದಾರೆ. ಇದರಂತೆ ಗುರು ಅವರ ತಂದೆ ಹೊನ್ನಯ್ಯ ಅವರ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಮಾಡಿದ್ದಾರೆ. ಇದನ್ನು ಓದಿ: ಹುತಾತ್ಮ ಯೋಧನ ಕುಟುಂಬಕ್ಕೆ 1 ದಿನದ ದುಡಿಮೆ ನೀಡಿದ್ರು ಗೋಬಿ ಮಂಚೂರಿ ವ್ಯಾಪಾರಿ!
ಇತ್ತ ಯೋಧನ ಕುಟುಂಬಕ್ಕೆ ಮಂಡ್ಯ ಜಿಲ್ಲಾ ಹಾಲು ಒಕ್ಕೂಟ 3 ಲಕ್ಷ ರೂ. ಹಾಗೂ ಡಿಸಿಸಿ ಬ್ಯಾಂಕ್ 2 ಲಕ್ಷ ರೂ. ಹಣವನ್ನು ಸಹಾಯ ಮಾಡಿದೆ. ಇದೇ ವೇಳೆ ಗುಡಿಗೆರೆ ಭೇಟಿ ನೀಡಿದ್ದ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಪಕ್ಷ ವತಿಯಿಂದ 5 ಲಕ್ಷ ರೂ. ಪರಿಹಾರ ವಿತರಣೆ ಮಾಡಿ, ಸಂತ್ವಾನ ಹೇಳಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv