ರಾಯಚೂರು: ಕರ್ತವ್ಯ ಲೋಪ ಆರೋಪದ ಹಿನ್ನೆಲೆಯಲ್ಲಿ ರಾಯಚೂರಿನ ಸಿರವಾರ ಠಾಣೆಯ ಪಿಎಸ್‌ಐ (PSI) ಗೀತಾಂಜಲಿ ಶಿಂಧೆ ಅವರನ್ನ ಅಮಾನತುಗೊಳಿಸಲಾಗಿದೆ.
ಪಿಎಸ್‌ಐ (PSI) ವಿರುದ್ಧ ವಿವಿಧ ಆರೋಪಗಳು ಕೇಳಿಬರುತ್ತಿದ್ದು, ಕೆಲವರು ಖುದ್ದಾಗಿ ಜಿಲ್ಲಾ ಎಸ್ಪಿಗೆ ದೂರು ನೀಡಿದ್ದರು. ಹಾಗಾಗಿ ಕರ್ತವ್ಯಲೋಪ ಆರೋಪದ ಮೇಲೆ ಅಮಾನತುಗೊಳಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ನಿಖಿಲ್ ಆದೇಶ ಹೊರಡಿಸಿದ್ದಾರೆ. ಇದನ್ನೂ ಓದಿ: ಡೆತ್‍ನೋಟ್ ಬರೆದಿಟ್ಟು ನಾಪತ್ತೆಯಾಗಿದ್ದ ಯುವಕ ಬಳ್ಳಾರಿಯಲ್ಲಿ ಪತ್ತೆ
Advertisement
Advertisement
ಇತ್ತೀಚೆಗೆ ಓರ್ವ ಯುವಕ ಡೆತ್‌ನೋಟ್ (DeathNote) ನಲ್ಲಿ ಪಿಎಸ್‌ಐ ಹೆಸರು ಬರೆದಿಟ್ಟು ನಾಪತ್ತೆಯಾಗಿದ್ದ. ಜಮೀನು ವಿಚಾರಕ್ಕೆ ಅನಾವಶ್ಯಕವಾಗಿ ತಲೆದೂರಿಸಿ ಮೂರು ತಿಂಗಳಿಂದ ಸತತ ಕಿರುಕುಳ ನೀಡಿದ್ದರು ಎಂಬುದಾಗಿ ಡೆತ್‌ನೋಟ್‌ನಲ್ಲಿ ಯುವಕ ಆರೋಪಿಸಿದ್ದ. ಈ ಕುರಿತು ಸಿರವಾರ ಠಾಣೆಯಲ್ಲಿ ಪಿಎಸ್‌ಐ ವಿರುದ್ಧ ಕೇಸ್ (FIR) ಸಹ ದಾಖಲಾಗಿತ್ತು. ಮೂರು ದಿನಗಳ ಬಳಿಕ ಯುವಕನನ್ನ ಪತ್ತೆಹಚ್ಚಿ ಮರಳಿ ಕರೆದುಕೊಂಡು ಬಂದಿದ್ದರು. ಇದನ್ನೂ ಓದಿ:13 ಕೋಟಿ ರೂ. ಖರ್ಚು ಮಾಡಿ ಕಟ್ಟಿದ ಬ್ರಿಡ್ಜ್ ಉದ್ಘಾಟನೆಗೂ ಮುನ್ನ ಢಮಾರ್!
Advertisement
Advertisement
ಅಷ್ಟೇ ಅಲ್ಲದೇ ಬೈಕ್ ಕಳ್ಳತನ, ಕುರಿಗಳ್ಳತನ ಪ್ರತ್ಯೇಕ ಪ್ರಕರಣಗಳಲ್ಲಿ ಜಪ್ತಿಯಾದ ಬೈಕ್ ಹಾಗೂ ಕುರಿಗಳನ್ನ ಕಳೆದುಕೊಂಡವರಿಗೆ ಸರಿಯಾಗಿ ಮರಳಿಸಿಲ್ಲ ಅನ್ನೊ ಆರೋಪಗಳು ಇದ್ದವು. ಒಟ್ಟಾರೆ ದೂರುಗಳ ಹಿನ್ನೆಲೆಯಲ್ಲಿ ಗೀತಾಂಜಲಿ ಅವರನ್ನ ಅಮಾನತುಗೊಳಿಸಲಾಗಿದೆ.