ಕಲಬುರಗಿ: ಪಿಎಸ್‍ಐ (PSI) ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ಎಸಗಿ ಮಹಾರಾಷ್ಟ್ರದಲ್ಲಿ ತಲೆಮರೆಸಿಕೊಂಡಿದ್ದ ಡೀಲ್ ರಾಣಿ ದಿವ್ಯಾ ಹಾಗರಗಿ(Divya Hagaragi) ಯನ್ನ ಸಿಐಡಿ (CID) ಅಧಿಕಾರಿಗಳು ಬಂಧನಕ್ಕೆ ತೆರಳಿದ್ದ ವೇಳೆ ಹೈಡ್ರಾಮಾ ಕ್ರಿಯೇಟ್ ಮಾಡಿ ಮೊಬೈಲ್ ಬಿಸಾಕಿದ್ದಳು.
Advertisement
ಸಿಐಡಿ ಅಧಿಕಾರಿಗಳು ಬಂಧನದ ವೇಳೆ ಗಾಬರಿ ಬಿದ್ದು ಮಹಾರಾಷ್ಟ್ರದಲ್ಲಿ ಬಳಕೆ ಮಾಡೋದಕ್ಕೆ ಖರೀದಿ ಮಾಡಿದ್ದ ಹೊಸ ಮೊಬೈಲ್ ದಿವ್ಯಾ ಬಿಸಾಕಿದ್ದಳಂತೆ. ಆದರೆ ಅಕ್ರಮಕ್ಕೆ ಬಳಸಿದ ಹಳೆಯ ಮೊಬೈಲ್ ತನ್ನ ಬಳಿಯೇ ಇಟ್ಟುಕೊಂಡಿದ್ದಳು ಅನ್ನೋದು ಇದೀಗ ಸಿಐಡಿ ಅಧಿಕಾರಿಗಳ ತನಿಖೆಯ ವೇಳೆಯಲ್ಲಿ ಬಯಲಾಗಿದೆ.
Advertisement
Advertisement
ದಿವ್ಯಾ ಹಾಗರಗಿ ಅಕ್ರಮಕ್ಕೆ ಬಳಸಿದ್ದ ಮೊಬೈಲ್ ಪತ್ತೆಯಾದ ಹಿನ್ನೆಲೆ ಇದೀಗ ದಿವ್ಯಾ ಮೊಬೈಲ್ ನ ಜನ್ಮ ಜಾಲಾಡೋದಕ್ಕೆ ಸಿಐಡಿ ಅಧಿಕಾರಿಗಳು ಮುಂದಾಗಿದ್ದಾರೆ. ಮೊಬೈಲ್ ಪತ್ತೆಯಾದ ಹಿನ್ನೆಲೆಯಲ್ಲಿ ಅಕ್ರಮದಲ್ಲಿ ಇನ್ಯಾರ್ಯಾರು ಭಾಗಿಯಾಗಿದ್ದಾರೆ. ಜೊತೆಗೆ ದಿವ್ಯಾ ಹಾಗರಗಿ ಹಿಂದಿರುವ ದಿವ್ಯ ಶಕ್ತಿಗಳ ಬಗ್ಗೆಯು ಕೂಡ ಸಿಐಡಿ ಅಧಿಕಾರಿಗಳು ತಲಾಶ್ ನಡೆಸೋದಕ್ಕೆ ಮುಂದಾಗಿದ್ದಾರೆ. ಇದನ್ನೂ ಓದಿ: PSI ಎಕ್ಸಾಂ ಗೋಲ್ಮಾಲ್ – ಜೈಲಿನಲ್ಲಿ ಪತಿ ಕಂಡು ಕಿಂಗ್‍ಪಿನ್ ಕಣ್ಣೀರು
Advertisement
ಇತ್ತ ಅಕ್ರಮದಲ್ಲಿ ಭಾಗಿಯಾಗಿ ಜೈಲು ಪಾಲಾಗಿರುವ ರಾಜೇಶ್ ಹಾಗರಗಿಯನ್ನ 21 ದಿನಗಳ ಬಳಿ ದಿವ್ಯಾ ಹಾಗಾರಗಿ ಜೈಲಿನಲ್ಲಿರುವ ಗಂಡ ರಾಜೇಶ್ ಹಾಗರಗಿಯನ್ನ ಕಂಡ ತಕ್ಷಣ ಕುಸಿದು ಬಿದ್ದು ಅರ್ಧ ಗಂಟೆಗಿಂತಲೂ ಹೆಚ್ಚು ಕಣ್ಣೀರು ಹಾಕಿದ್ದಾಳಂತೆ. ದಿವ್ಯಾ ಹಾಗರಗಿ ಕುಸಿದು ಬಿದ್ದು ಕಣ್ಣೀರು ಹಾಕ್ತಿದ್ದಂತೆಯೇ ಕಂಬಿ ಹಿಂದೆಯಿಂದಲೇ ಪತಿ ರಾಜೇಶ್ ಮೊಮ್ಮಲ ಕರಗಿ ಆತನು ಕೂಡ ಕಣ್ಣೀರು ಹಾಕಿದ್ದಾನೆ. ಅದಾದ ಬಳಿಕ ಜೈಲಿನಲ್ಲಿರುವ ಮಹಿಳೆಯರ ಸಿಂಗಲ್ ಬ್ಯಾರಕ್ ನಲ್ಲಿ ದಿವ್ಯಾ ಹಾಗರಗಿಯನ್ನ ಹಾಕಿದ್ದಾರೆ. ಆದರೆ ದಿವ್ಯಾ ಹಾಗರಗಿ ನನಗೆ ಸಿಂಗಲ್ ಬ್ಯಾರಕ್ ಇರುವ ಕೊಠಡಿ ಬೇಡ ತನ್ನ ಶಾಲೆಯ ಶಿಕ್ಷಕರು ಇರುವ ಮಹಿಳೆಯರ ಬ್ಯಾರಕ್ ನಲ್ಲೆ ಹಾಕುವಂತೆ ಮನವಿ ಮಾಡಿಕೊಂಡಿದ್ದಳಂತೆ. ಆದರೆ ದಿವ್ಯಾ ಹಾಗರಗಿಯ ಮನವಿ ಸ್ಪಂದಿಸದ ಜೈಲು ಸಿಬ್ಬಂದಿ ಸಿಂಗಲ್ ಬ್ಯಾರಕ್ ನಲ್ಲೆ ಹಾಕಿ ಲಾಕ್ ಮಾಡಿದ್ದಾರಂತೆ. ಇದನ್ನೂ ಓದಿ: ಸಿಐಡಿಗೆ ಪ್ರಕರಣ ದಾಖಲಾಗ್ತಿದ್ದಂತೆ ಡ್ಯಾಂಗೆ ಮೊಬೈಲ್ ಎಸೆದ ಆರೋಪಿ
ಪಿಎಸ್‍ಐ ನೇಮಕಾತಿ ಪರೀಕ್ಷೆಯ ಅಕ್ರಮದ ಬಗ್ಗೆ ತನಿಖೆ ನಡೆಸುತ್ತಿರುವ ಸಿಐಡಿ ಅಧಿಕಾರಿಗಳಿಗೆ ಪಿಡಬ್ಲುಡಿ ಪರೀಕ್ಷೆಯಲ್ಲಿ ನಡೆದಿರುವ ಅಕ್ರಮವನ್ನು ಬಯಲು ಮಾಡಿದ್ದಾರೆ. ಹಾಗಾಗಿಯೆ ಸಿಐಡಿ ಅಧಿಕಾರಿಗಳು ಪಿಎಸ್‍ಐ ನೇಮಕಾತಿಯ ಪರೀಕ್ಷೆಯ ಅಕ್ರಮದ ತನಿಖಾ ವರದಿಯಲ್ಲಿ ಪಿಡಬ್ಲುಡಿ ಪರೀಕ್ಷೆಯ ಅಕ್ರಮದ ಬಗ್ಗೆಯು ಕೂಡ ಸಿಐಡಿ ಅಧಿಕಾರಿಗಳು ಉಲ್ಲೇಖ ಮಾಡಿದ್ದಾರೆ. ಸಿಐಡಿ ಅಧಿಕಾರಿಗಳು ಪಿಡಬ್ಲುಡಿ ಅಕ್ರಮದ ಬಗ್ಗೆ ಉಲ್ಲೇಖ ಮಾಡಿದ ಬೆನ್ನಲ್ಲೇ ಇದೀಗ ಅಕ್ರಮದ ಕಿಂಗ್ ಪಿನ್ ಗಳಾಗಿರುವ ಆರ್ ಡಿ ಪಾಟೀಲ್ ಆಂಡ್ ಮಂಜುನಾಥ್ ಮೇಳಕುಂದಿಗೆ ಪಿಡಬ್ಲುಡಿ ಕೇಸ್ ಕೂಡ ಉರುಳಾಗೋದು ಎರಡು ಮಾತಿಲ್ಲ.