ಕಲಬುರಗಿ: ಪಿಎಸ್‍ಐ ಅಕ್ರಮ ಪ್ರಕರಣದಲ್ಲಿ 15 ದಿನಗಳಿಂದ ತಲೆ ಮರೆಸಿಕೊಂಡಿರುವ ದಿವ್ಯಾ ಹಾಗರಗಿ & ಟೀಂಗೆ ನಿರೀಕ್ಷಣಾ ಜಾಮೀನು ನೀಡದಂತೆ ಸಿಐಡಿ ಅಧಿಕಾರಿಗಳು ನ್ಯಾಯಾಲಯಕ್ಕೆ ತಕರಾರು ಅರ್ಜಿ ಸಲ್ಲಿಸಿದ್ದಾರೆ.
Advertisement
ಪಿಎಸ್‍ಐ ನೇಮಕಾತಿ ಪರೀಕ್ಷಾ ಅಕ್ರಮ ಪ್ರಮುಖ ತಾಣವಾದ ಜ್ಞಾನಜ್ಯೋತಿ ಶಾಲೆಯ ಮುಖ್ಯಸ್ಥೆ ದಿವ್ಯಾ ಹಾಗರಗಿ, ಪ್ರಾಂಶುಪಾಲ ಕಾಶಿನಾಥ್ ಮತ್ತು ಮಂಜುನಾಥ್ ಮೇಳಕುಂದಿ, ಅರ್ಚನಾ ಹೊನಗೇರಿ ಮತ್ತು ಸುನಂದಾ ಸಿಐಡಿ ತನಿಖೆಯಿಂದ ತಲೆ ಮರೆಸಿಕೊಂಡಿದ್ದು, ಅಜ್ಞಾತ ಸ್ಥಳಕ್ಕೆ ಶಿಫ್ಟ್ ಆಗಿದ್ದಾರೆ. ಇದನ್ನೂ ಓದಿ: ಪಿಎಸ್‍ಐ ಹಗರಣಕ್ಕೆ ಮೃತಪಟ್ಟವರ ಮೊಬೈಲ್ ಬಳಕೆ
Advertisement
Advertisement
ಅಜ್ಞಾತ ಸ್ಥಳದಿಂದಲೇ ದಿವ್ಯಾ & ಟೀಮ್ ನೀರಿಕ್ಷಣಾ ಜಾಮೀನು ಕೋರಿ ಕಲಬುರಗಿ ಜಿಲ್ಲಾ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದೆ. ಆದರೀಗ ನೀರಿಕ್ಷಣಾ ಜಾಮೀನಿಗೆ ಸಿಐಡಿ ತಕರಾರು ಅರ್ಜಿ ಸಲ್ಲಿಸಿದೆ. ಇದು ಸಂಘಟಿಕ ಅಪರಾಧ, ಜಾಮೀನು ಕೊಟ್ಟರೆ ಸಾಕ್ಷಿ ನಾಶ ಪಡಿಸುವ ಸಾಧ್ಯತೆ ಇದೆ. ಹಾಗಾಗಿ ಈ ಐವರಿಗೆ ನಿರೀಕ್ಷಣಾ ಜಾಮೀನು ನೀಡಬೇಡಿ ಎಂದು ಕಲಬುರಗಿಯ ಒಂದನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯಕ್ಕೆ ಸಿಐಡಿ ತಕರಾರು ಅರ್ಜಿ ಸಲ್ಲಿಸಿದೆ. ಇದನ್ನೂ ಓದಿ: ಅಸಿಸ್ಟೆಂಟ್ ಪ್ರೊಫೆಸರ್ ಎಕ್ಸಾಮ್‍ನಲ್ಲೂ ಗೋಲ್ಮಾಲ್- ಕಾಸು ಕೊಟ್ರೆ ಸರ್ಕಾರಿ ಹುದ್ದೆ..?
Advertisement
ಸ್ಫೋಟಕ ಮಾಹಿತಿ ಬಹಿರಂಗ:
ಪಿಎಸ್‍ಐ ಅಕ್ರಮ ನೇಮಕಾತಿ ಕರ್ಮಕಾಂಡವು ಬಗೆದಷ್ಟು ಬಯಲಾಗುತ್ತಿದೆ. ಇದೀಗ ತನಿಖೆಯಲ್ಲಿ ಮತ್ತೊಂದು ವಿಚಾರ ಬೆಳಕಿಗೆ ಬಂದಿದೆ. ಪಿಎಸ್‍ಐ ಪರೀಕ್ಷೆ ಅಕ್ರಮಕ್ಕೆ ಕೋವಿಡ್‍ನಿಂದ ಮೃತಪಟ್ಟ ನೌಕರನ ಮೊಬೈಲ್‍ನನ್ನು ಕಿಂಗ್‍ಪಿನ್ ಆರ್.ಡಿ. ಪಾಟೀಲ್ ಬಳಸುತ್ತಿದ್ದ ಎನ್ನುವ ವಿಚಾರ ತನಿಖೆಯಲ್ಲಿ ಬಯಲಾಗಿದೆ.
ತಮ್ಮ ಬಳಿಯಿರುವ ಮೊಬೈಲ್ ಬಳಸಿದರೆ ಪ್ರಕರಣ ಬಯಲಿಗೆ ಬರುತ್ತದೆ ಎಂದು ಮೃತ ವ್ಯಕ್ತಿಯ ಮೊಬೈಲ್‍ನ್ನು ಬಳಸುತ್ತಿದ್ದೆ ಎಮದು ಒಪ್ಪಿಕೊಂಡಿದ್ದಾನೆ. ಎರಡು ದಿನಗಳ ಹಿಂದೆ ಆರ್‌ಡಿ ಪಾಟೀಲ್ ಸ್ನೇಹಿತ ಮಂಜುನಾಥ್ ಮಲ್ಲುಗೌಡನನ್ನು ಸಿಐಡಿ ಅಧಿಕಾರಿಗಳು ಬಂಧಿಸಿದ್ದರು. ಈ ಹಿನ್ನೆಲೆಯಲ್ಲಿ ಇಬ್ಬರನ್ನು ಕಲಬುರಗಿ ಜೆಎಮ್‍ಎಫ್‍ಸಿ ಕೋರ್ಟ್ 13 ದಿನಗಳ ಕಾಲ ಸಿಐಡಿ ಕಸ್ಟಡಿಗೆ ನೀಡಿದೆ.