ಬೆಂಗಳೂರು: ಪಿಎಸ್‍ಐ ಮರುಪರೀಕ್ಷೆ ಪತ್ರಿಕೆ ಲೀಕ್ (PSI exam Scam) ಮಾಡಿದ ಆರೋಪ ಎದುರಿಸುತ್ತಿರುವ ಆಡಿಯೋ ಸೂತ್ರಧಾರ ಸಬ್ ಇನ್ಸ್‌ಪೆಕ್ಟರ್ ಲಿಂಗಯ್ಯ ವಿಚಾರಣೆ ವೇಳೆ ಸಿಸಿಬಿ (CCB) ಅಧಿಕಾರಿಗಳ ಬಳಿ ಸ್ಫೋಟಕ ವಿಚಾರ ಬಾಯ್ಬಿಟ್ಟಿದ್ದಾರೆ. ಇದು ಪ್ರಕರಣದಲ್ಲಿ ಹಲವಾರು ಅನುಮಾನಕ್ಕೆ ಕಾರಣವಾಗಿದೆ. ನಾನು ಮಾಡಿದ್ದು ಸ್ಟಿಂಗ್ ಆಪರೇಷನ್, ಇದೊಂದು ಟಾಸ್ಕ್ ಆಗಿತ್ತು. ನಾನು ನನ್ನ ಕೆಲಸ ಮಾಡಿದ್ದೇನೆ ಅಷ್ಟೇ, ಅಕ್ರಮ ಎಸಗಿಲ್ಲ. ನಾನು ಯಾರ ಬಳಿಯೂ ಹಣ ಪಡೆದಿಲ್ಲ. ರಹಸ್ಯ ಕಾರ್ಯಾಚರಣೆ ಮಾಡುವ ಸಲುವಾಗಿ ಅಭ್ಯರ್ಥಿಗಳ ಜೊತೆ ಮಾತನಾಡಿದ್ದೆ ಎಂದು ಹೇಳಿದ್ದಾನೆ.
ಶುಕ್ರವಾರ ಸಬ್ ಇನ್ಸ್ಪೆಕ್ಟರ್ ಲಿಂಗಯ್ಯನನ್ನು ವಶಕ್ಕೆ ಪಡೆದಿದ್ದ ಚಂದ್ರಾಲೇಔಟ್ ಪೊಲೀಸರು ಪ್ರಕರಣದ ತನಿಖೆಗೆ ಸಿಸಿಬಿಗೆ ಒಪ್ಪಿಸಿದ್ದರು. ಸಿಸಿಬಿ ಪೆÇಲೀಸರಿಂದ ಲಿಂಗಯ್ಯ ಮಾಡಿರುವ ಚಾಟಿಂಗ್ ಕುರಿತಾಗಿ ತೀವ್ರ ವಿಚಾರಣೆ ನಡೆಸಿದ್ದಾರೆ. ಯಾರಿಗೆಲ್ಲ ಚಾಟಿಂಗ್ ಮಾಡಿದ್ದೀರಾ? ಚಾಟಿಂಗ್ ನಿಮ್ಮದೇನಾ? ಹಣದ ಬಗ್ಗೆಯೂ ಚರ್ಚೆ ಮಾಡಿದ್ದು, ಯಾರಿಂದಲಾದರೂ ಹಣ ಪಡೆದಿದ್ದೀರಾ ಎಂದು ವಿಚಾರಣೆ ನಡೆಸಿದ್ದಾರೆ. ಇದನ್ನೂ ಓದಿ: ಹಣಕ್ಕಾಗಿ ತನ್ನ ಅಜ್ಜಿಯನ್ನೇ ಉಸಿರುಗಟ್ಟಿಸಿ ಕೊಲೆಗೈದ 9ನೇ ತರಗತಿ ವಿದ್ಯಾರ್ಥಿ ಅರೆಸ್ಟ್
Advertisement
Advertisement
ಇಬ್ಬರು ಅಭ್ಯರ್ಥಿಗಳ ಬಳಿ ಅಡ್ವಾನ್ಸ್ ಆಗಿ 10 ಲಕ್ಷ ರೂ. ಪಡೆದಿರೋ ಮಾಹಿತಿ ಇದ್ದು, ಹೀಗಾಗಿ ಹಣ ಪಡೆದು ಏನು ಮಾಡಿದ್ದೀರಿ? ಯಾರಿಗೆ ಕೊಟ್ಟಿದ್ದೀರಿ ಎಂದು ಅಧಿಕಾರಿಗಳು ಪ್ರಶ್ನಿಸಿದ್ದಾರೆ. ಪ್ರಶ್ನೆಪತ್ರಿಕೆ ಸೋರಿಕೆ ಆಗಿದೆಯಾ ಎಂಬ ಬಗ್ಗೆಯೂ ವಿಚಾರಣೆ ನಡೆಸಲಾಗಿದೆ. ಅಲ್ಲದೇ ಚಾಟಿಂಗ್ ನಡೆಸಿದ ವ್ಯಕ್ತಿಗಳಿಗೂ ನೋಟಿಸ್ ನೀಡಿ ವಿಚಾರಣೆ ನಡೆಸಲು ಅಧಿಕಾರಿಗಳು ಮುಂದಾಗಿದ್ದಾರೆ.
Advertisement
Advertisement
ಇದೇ ತಿಂಗಳ 21 ರಂದು ಸಿಟಿಐ ಹಾಗೂ 23ಕ್ಕೆ ಪಿಎಸ್‍ಐ ಪರೀಕ್ಷೆ ಇದ್ದು, ಲಿಂಗಯ್ಯ ಎರಡೂ ಪರೀಕ್ಷೆಗಳ ಬಗ್ಗೆ ಚಾಟಿಂಗ್ ನಡೆಸಿರುವ ಆರೋಪವಿದೆ. ಹೀಗಾಗಿ ಅಜ್ಞಾತ ಸ್ಥಳದಲ್ಲಿ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ರಾಮಲಲ್ಲಾ ವಿಗ್ರಹದ ಫೋಟೋ ವೈರಲ್ ಮಾಡಿದವ್ರ ವಿರುದ್ಧ ಕಠಿಣ ಕ್ರಮಕ್ಕೆ ಪ್ರಧಾನ ಅರ್ಚಕ ಒತ್ತಾಯ