DistrictsKarnatakaLatestMain PostVijayapura

PSI ಪರೀಕ್ಷೆಯಲ್ಲಿ ಅಕ್ರಮ ಪ್ರಕರಣ- ಆರೋಪಿ ರಚನಾ ದೊಡ್ಡಮ್ಮ ಕಣ್ಣೀರು

ವಿಜಯಪುರ: ಪಿಎಸ್‍ಐ ಪರೀಕ್ಷಾ ಅಕ್ರಮದ ಪ್ರಕರಣದಲ್ಲಿ ವಿಜಯಪುರ ಜಿಲ್ಲೆಯ ಬಸವನಗಾಬೇವಾಡಿ ಪಟ್ಟಣದ ರಚನಾ ಎಂಬ ಪರಿಕ್ಷಾರ್ಥಿ ಮೇಲೆ ಸಿಐಡಿ ದೂರು ದಾಖಲಿಸಿದೆ. ಆದರೆ ರಚನಾ ಅರೆಸ್ಟ್ ಅಗಿದ್ದಾಳಾ ಅಥವಾ ನಾಪತ್ತೆಯಾಗಿದ್ದಾಳಾ ಎಂಬುದು ಇದುವರೆಗೂ ನಿಗೂಢವಾಗಿದೆ.

ರಚಾನ ದೊಡ್ಡಮ್ಮ ಕಸ್ತೂರಿ ಅವರು ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿ, ಪ್ರತಿಭಟನೆಗೆಂದು ತೆರಳಿದವಳು ಇದುವರೆಗೆ ಸಿಕ್ಕಿಲ್ಲ. ಸಿಐಡಿ ಅಧಿಕಾರಿಗಳು ವಶಕ್ಕೆ ಪಡೆದಿರುವ ಬಗ್ಗೆ ನಮಗೆ ಮಾಹಿತಿ ಇಲ್ಲ. ಅದರ ಬಗ್ಗೆ ನಮಗೆ ಯಾವುದೇ ಮಾಹಿತಿಯನ್ನು ಸಿಐಡಿ ಅಧಿಕಾರಿಗಳು ನೀಡಿಲ್ಲ. ಅವಳು ಈಗ ಹೇಗಿದ್ದಾಳೋ, ಎಲ್ಲಿದ್ದಾಳೋ ಎಂದು ಕಣ್ಣಿರಿಟ್ಟಿದ್ದಾರೆ. ಇದನ್ನೂ ಓದಿ: PSI ಅಕ್ರಮ – ಮಹಿಳಾ ವಿಭಾಗದ ಟಾಪರ್ ರಚನಾ ವಿರುದ್ಧ ಎಫ್‌ಐಆರ್

ರಚನಾ ನಿರ್ದೋಷಿ ಆಗಿದ್ದಾಳೆ. ರಾಜ್ಯ ಸರ್ಕಾರ ತನ್ನ ತಪ್ಪು ಮುಚ್ಚಿಕೊಳ್ಳಲು ಈ ರೀತಿ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಮೇ 9 ರಿಂದ ಬೆಳಗ್ಗೆ 5 ಗಂಟೆಯಿಂದಲೇ ದೇವಸ್ಥಾನಗಳಲ್ಲಿ ಸುಪ್ರಭಾತ ಮೊಳಗಲಿ: ಮುತಾಲಿಕ್

Leave a Reply

Your email address will not be published.

Back to top button