ಧಾರವಾಡ: ಇಲ್ಲಿನ ಕರ್ನಾಟಕ ವಿವಿಗೆ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಬಂದ ವೇಳೆ ಭಾರೀ ಹೈಡ್ರಾಮಾ ನಡೆದಿದೆ. ಈ ವೇಳೆ ಅಡ್ಡಬಂದ ಪಿಎಸ್‍ಐ ಅಭ್ಯರ್ಥಿಗೆ ಗನ್ ಮ್ಯಾನ್ ಥಳಿಸಿದ ಘಟನೆ ನಡೆದಿದೆ.
Advertisement
ಹೌದು. ಪಿಎಸ್‍ಐ ಮರು ಪರೀಕ್ಷೆಗೆ ಆಗ್ರಹಿಸಿ ಅಭ್ಯರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಮಾಜಿ ಸಿಎಂ ಅಲ್ಲಿಗೆ ಭೇಟಿ ನಿಡಿದ್ದಾರೆ. ಪರೀಕ್ಷೆಗೆ ಕುಳಿತ ಅಭ್ಯರ್ಥಿಗಳಿಗೆ ಅನ್ಯಾಯ ಆಗಿಲ್ಲ ಎಂದು ಕುಮಾರಸ್ವಾಮಿ ಹೇಳಿದರು. ಈ ಮಾತು ವಾಪಸ್ ಪಡೆಯಬೇಕು ಎಂದು ಪಿಎಸ್ ಐ ಅಭ್ಯರ್ಥಿಗಳು ಪಟ್ಟು ಹಿಡಿದರು. ಇದನ್ನೂ ಓದಿ: ಒಂದು ಚಡ್ಡಿ ಸುಟ್ಟಿದ್ದಕ್ಕೆ ಅರೆಸ್ಟ್ ಮಾಡ್ತೀರಾ? ಎಲ್ಲಾ ಜಿಲ್ಲೆಗಳಲ್ಲೂ ಚಡ್ಡಿಗಳನ್ನು ಸುಡ್ತೀವಿ: ನಲಪಾಡ್ ಸವಾಲು
Advertisement
Advertisement
ಆರಂಭದಲ್ಲೇ ಎಚ್‍ಡಿಕೆ ಮತ್ತು ಅಭ್ಯರ್ಥಿಗಳ ಮಧ್ಯೆ ವಾಗ್ವಾದ ನಡೆಯಿತು. ಈ ಹಿನ್ನೆಲೆ ವಾಪಸ್ ಹೋಗುವಾಗ ಎಚ್‍ಡಿಕೆ ಕಾರ್‍ಗೆ ಪಿಎಸ್‍ಐ ನೇಮಕಾತಿ ವಂಚಿತ ಅಭ್ಯರ್ಥಿಗಳು ಘೇರಾವ್ ಹಾಕಲು ಯತ್ನಿಸಿದ್ದಾರೆ. ಎಚ್‍ಡಿಕೆ ವಾಹನವನ್ನು ಅಭ್ಯರ್ಥಿಗಳು ಬೆನ್ನತ್ತಿ ಹೋದರು. ಪ್ರತಿಭಟನಾಕಾರರನ್ನು ತಡೆಯಲು ಪೊಲೀಸರು ಹರಸಾಹಸ ಪಟ್ಟರು. ಕೊನೆಗೆ ವೇಗವಾಗಿ ವಾಹನ ಚಲಾಯಿಸುವ ಮೂಲಕ ಎಚ್‍ಡಿಕೆ ಭಾರೀ ಅಪಾಯದಿಂದ ಪಾರಾದರು. ಇತ್ತ ಕುಮಾರಸ್ವಾಮಿ ವಾಹನವನ್ನು ಬೆನ್ನಟ್ಟಿದ್ದ ಪಿಎಸ್ ಐ ಅಭ್ಯರ್ಥಿ ಮೇಲೆ ಕುಮಾರಸ್ವಾಮಿ ಗನ್‍ಮ್ಯಾನ್ ಹಲ್ಲೆ ನಡೆಸಿದ್ದಾರೆ.
Advertisement
ಧಾರವಾಡದಲ್ಲಿ ಎಚ್ ಡಿ ಕೆ ಗನ್ ಮ್ಯಾನ್ ಪಿಎಸ್ ಐ ಅಭ್ಯರ್ಥಿ ಮೇಲೆ ಹಲ್ಲೆ ವಿಚಾರ ಸಂಬಂಧ ಹಲ್ಲೆಗೆ ಒಳಗಾದ ರಾಘು ಮಾತನಾಡಿ, ತನಿಖೆ ದಾರಿ ತಪ್ಪಿಸುತ್ತಿದ್ದಾರೆ. ನಾವು ಮನವಿ ಕೊಡಲು ಬಂದಿದ್ದೆವು. ಶಾಂತಿಯುತವಾಗಿ ಕುಮಾರಸ್ವಾಮಿಗೆ ಮನವಿ ಕೊಡಲು ಬಂದಿದ್ದೆವು. ಅವರು ಕಾರು ಸ್ಟಾಪ್ ಮಾಡದೇ ಹೋದರು. ನಾವು ಗೂಂಡಾಗಿರಿ ಮಾಡಲು ಬಂದಿರಲಿಲ್ಲ. ನಾವು ಪೊಲೀಸ್ ಆಗುವವರು, ನಮಗೆ ಅನ್ಯಾಯ ಆಗಿದೆ ಎಂದರು.
ವಾಹನದ ಹಿಂದೆ ಹೋಗಿದ್ದರಿಂದ ಪೊಲೀಸರು ನಮ್ಮನ್ನು ತಳ್ಳಾಡಿದ್ದಾರೆ. ಈ ಪ್ರಕರಣದ ತನಿಖೆ ನಡೆಸಿ 56 ಸಾವಿರ ಜನರಿಗೆ ನ್ಯಾಯ ಕೊಡಬೇಕು. ಪರೀಕ್ಷೆ ದಿನಾಂಕ ಘೋಷಣೆ ಮಾಡಿ. ದಿನೇ ದಿನೇ ನಮಗೆ ಓದಲು ಆಗುತ್ತಿಲ್ಲ. ಮರು ಪರೀಕ್ಷೆ ಕ್ಯಾನ್ಸಲ್ ಎನ್ನುತ್ತಿದ್ದಾರೆ. 545 ಜನರಿಗಷ್ಟೆ ಅನ್ಯಾಯವಾಗಿದೆಯಾ ಎಂದು ರಾಘು ಪ್ರಶ್ನಿಸಿದರು.