ತುಮಕೂರು: ಫೋನ್ ಪೇ ಮೂಲಕ ಲಂಚ ಪಡೆದ ಜಿಲ್ಲೆಯ ಗುಬ್ಬಿ ಟೌನ್ ಠಾಣೆಯ ಪಿಎಸ್ ಐ ಜ್ಞಾನಮೂರ್ತಿಯನ್ನು ಅಮಾನತುಗೊಳಿಸಿ ಎಸ್ಪಿ ಆದೇಶಿಸಿದ್ದಾರೆ.
Advertisement
ಕಳೆದ ವಾರ ವಿನಾಕಾರಣ ಮ್ಯಾಕ್ಸಿಕ್ಯಾಬ್ ವೊಂದನ್ನು ತಡೆದು ಚಾಲಕನಿಗೆ ಕಿರುಕುಳ ನೀಡಿದ ಆರೋಪವನ್ನು ಪಿಎಸ್ಐ ಎದುರಿಸುತ್ತಿದ್ದರು. ಕ್ಯಾಬ್ ಚಾಲಕನಿಂದ 7 ಸಾವಿರ ರೂ. ಲಂಚವನ್ನು ಫೋನ್ ಪೇ ಮೂಲಕ ಪಿಎಸ್ಐ ಪಡೆದುಕೊಂಡಿದ್ದರು. ಜೀಪ್ ಚಾಲಕ ಕರಿಯಪ್ಪರ ಮೊಬೈಲ್ ನಂಬರಿಗೆ ಪಿಎಸ್ಐ ಲಂಚದ ಹಣವನ್ನು ಫೋನ್ ಪೇ ಮಾಡಿಸಿಕೊಂಡದ್ದರು. ಇದನ್ನೂ ಓದಿ: ಅರವಿಂದ್ ವೀಡಿಯೋ ಮಾಡಿ ಅದನ್ನು ಟ್ರೋಲಿಗನಿಗೆ ಸಂಬರ್ಗಿ ಕೊಟ್ಟ: ಚಂದ್ರಚೂಡ್
Advertisement
Advertisement
ಪಿಎಸ್ಐ ದೌರ್ಜನ್ಯ ಖಂಡಿಸಿ ಚಾಲಕರು ಪ್ರತಿಭಟನೆ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಪಿಎಸ್ಐ ಜ್ಞಾನಮೂರ್ತಿಯನ್ನು ಅಮಾನತ್ತು ಮಾಡಿ ತುಮಕೂರು ಎಸ್ಪಿ ರಾಹುಲ್ ಕುಮಾರ್ ಶಹಾಪುರ್ ಆದೇಶಿಸಿದ್ದಾರೆ.