ವಿಜಯಪುರ: ತ್ರಿಬಲ್ ರೈಡ್ ಹೊರಟಿದ್ದ ಬೈಕ್ ಸವಾರರಿಗೆ ಪಿಎಸ್‍ಐ ಹಿಗ್ಗಮುಗ್ಗಾ ಥಳಿಸಿರುವ ಘಟನೆ ವಿಜಯಪುರದ ಇಂಡಿಯಲ್ಲಿ ನಡೆದಿದೆ.
ಸೋಮವಾರ ರಾತ್ರಿ ಇಂಡಿ ಪಟ್ಟಣದಲ್ಲಿ ಘಟನೆ ನಡೆದಿದ್ದು, ಯುವಕರಿಗೆ ಪೈಪ್ ಮತ್ತು ಕಾಲಿನಿಂದ ಒದ್ದು ಅಶ್ಲೀಲ ಪದ ಬಳಸಿದ ಇಂಡಿ ನಗರ ಪಿಎಸ್‍ಐ ಯಡವಣ್ಣವರ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. ರಸ್ತೆ ಮೇಲೆ ಹಲ್ಲೆ ಮಾಡಿದ್ದಲ್ಲದೇ ಪೊಲೀಸ್ ಠಾಣೆಯಲ್ಲಿ ಕರೆದುಕೊಂಡು ಹೋಗಿ ಹಲ್ಲೆ ಮಾಡಿರುವುದಾಗಿ ಹಲ್ಲೆಗೊಳಗಾದ ಯುವಕರು ಆರೋಪಿಸಿದ್ದಾರೆ.
ಹಂಜಗಿ ಮೂಲದ ಸಚಿನ್ ಪೊತೆ ಯುವಕರ ಮೇಲೆ ಹಲ್ಲೆ ನಡೆದಿದ್ದು, ಸದ್ಯಕ್ಕೆ ಆ ಯುವಕರು ವಿಜಯಪುರ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ದಂಡ ವಿಧಿಸದೇ ಹಲ್ಲೆ ಮಾಡಿದ ಪಿಎಸ್‍ಐ ಅಮಾನತು ಮಾಡಬೇಕೆಂಬ ಆಗ್ರಹ ಕೇಳಿಬಂದಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv