ಬಳ್ಳಾರಿ: ಅಧಿಕಾರಿಗಳು ಏನಾದರೂ ಕೆಲಸ ಮಾಡಿಕೊಟ್ಟರೆ ಅಷ್ಟೋ ಇಷ್ಟೋ ಲಂಚ ಪಡೆಯೋದು ಮಾಮೂಲು. ಆದರೆ ಇಲ್ಲೊಬ್ಬ ಪೊಲೀಸ್ ಅಧಿಕಾರಿ ಪ್ರಕರಣವೊಂದರಲ್ಲಿ ಲಕ್ಷ ಲಕ್ಷ ಲಂಚಕ್ಕೆ ಬೇಡಿಕೆಯಿಟ್ಟಿದ್ದಾನೆ. ನಿಮ್ಮ ಬಳಿ ಹಣ ಇಲ್ಲದಿದ್ದರೆ ಪೋಸ್ಟ್ ಡೇಟ್ ಹಾಕಿ ಚೆಕ್ ಕೊಡಿ ಎಂದು ಕೇಳುತ್ತಾನೆ. ಅಲ್ಲದೆ ಲಂಚದ ಹಣಕ್ಕಾಗಿ ವೈದ್ಯನ ಮನೆ ಮುಂದೆ ಕುಳಿತುಕೊಂಡು ಲಂಚ ವಸೂಲಿ ಮಾಡಿಕೊಂಡು ಬಾ ಎಂದು ಕೇಳುತ್ತಾನೆ.
ಕೃಷ್ಣ ನಾಯ್ಕ್ ಲಂಚ ಪಡೆದ ಪಿಎಸ್‍ಐ. ಬಳ್ಳಾರಿ ಜಿಲ್ಲೆಯ ಕೂಡ್ಲಗಿ ತಾಲೂಕಿನ ಖಾನಾಹೊಸಹಳ್ಳಿಯಲ್ಲಿ ಪಿಎಸ್‍ಐ ಆಗಿರುವ ಕೃಷ್ಣಾ, ಮೂರು ಲಕ್ಷ ರೂ. ಲಂಚಕ್ಕೆ ಬೇಡಿಕೆಯಿಟ್ಟಿದ್ದಾನೆ.
Advertisement
2016ರ ಮೇ 28ರಂದು ಬಳ್ಳಾರಿ ಜಿಲ್ಲೆಯ ಕೂಡ್ಲಗಿ ತಾಲೂಕಿನ ಗುಡೇಕೋಟೆ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ಸಂತಾನಹರಣ ಶಸ್ತ್ರಚಿಕಿತ್ಸೆಗೆ ಬಂದಿದ್ದ ಬಾಣಂತಿಗೆ ಓವರ್‍ಡೋಸ್ ಇಂಜೆಕ್ಷನ್ ನೀಡಿದ ಪರಿಣಾಮ ಬಾಣಂತಿ ಮೃತಪಟ್ಟಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಗುಡಕೋಟೆ ಸರ್ಕಾರಿ ಆಸ್ಪತ್ರೆಯ ವೈದ್ಯ ಮಧುಕುಮಾರ್ ಹಾಗೂ ಹಿರಿಯ ಶಸ್ತ್ರಚಿಕಿತ್ಸಾ ತಜ್ಞ ಪ್ರಕಾಶ್ ರೆಡ್ಡಿ ವಿರುದ್ಧ ದೂರು ದಾಖಲಾಗಿತ್ತು.
Advertisement
Advertisement
ಬಾಣಂತಿ ಮೃತಪಟ್ಟ ಪ್ರಕರಣದಲ್ಲಿ ವೈದ್ಯರ ನಿರ್ಲಕ್ಷ್ಯದ ಬಗ್ಗೆ ದಾಖಲಾದ ಪ್ರಕರಣದ ತನಿಖೆಗೆ ಇಳಿದ ಪಿಎಸ್‍ಐ ಕೃಷ್ಣ ನಾಯ್ಕ್ ವೈದ್ಯರ ವಿರುದ್ಧ ಬಿ ರಿಪೋರ್ಟ್ ಸಲ್ಲಿಸಲು ಬರೋಬ್ಬರಿ ಮೂರು ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆಯಿಟ್ಟಿದ್ದಾರೆ. ಅಷ್ಟೇ ಅಲ್ಲದೆ ಗುಡೇಕೋಟೆ ವೈದ್ಯಾಧಿಕಾರಿ ಮಧುಕುಮಾರ್ ಬಳಿಯೂ ಈಗಾಗಲೇ ಮೂರು ಲಕ್ಷ ರೂ. ಲಂಚ ಪಡೆದಿದ್ದಾರೆ ಎಂದು ಹೇಳಲಾಗುತ್ತಿದೆ.
Advertisement
ಪ್ರಕರಣದ ಬಗ್ಗೆ ಈಗಾಗಲೇ ನ್ಯಾಯಾಲಯಕ್ಕೆ ಬಿ ರಿಪೋರ್ಟ್ ಸಲ್ಲಿಕೆಯಾದ ನಂತರವೂ ಬಾಣಂತಿಗೆ ಆಪರೇಷನ್, ಚಿಕಿತ್ಸೆ ನೀಡದಿದ್ದರೂ ಪ್ರಕರಣದಲ್ಲಿ ಆರೋಪಿಯಾಗಿರುವ ವೈದ್ಯ ಪ್ರಕಾಶ್ ರೆಡ್ಡಿ ಅವರಿಗೂ ಮೂರು ಲಕ್ಷ ರೂಪಾಯಿ ಲಂಚ ನೀಡುವಂತೆ ಪಿಎಸ್‍ಐ ಕಿರುಕುಳ ನೀಡುತ್ತಿದ್ದಾರೆ. ಜೊತೆಗೆ ನಿಮ್ಮ ಬಳಿ ಹಣ ಇಲ್ಲದಿದ್ದರೆ ಏನಾಯ್ತು ಪೊಸ್ಟ್ ಡೇಟ್ ಚೆಕ್ ನೀಡಿ, ಇಲ್ಲದಿದ್ದರೆ ನಿಮ್ಮ ಮನೆ ಮುಂದೆ ಆಪ್ತನನ್ನು ಕಳುಹಿಸಿ ಲಂಚ ವಸೂಲಿ ಮಾಡಿಸುತ್ತೀನಿ ಎಂದು ಭ್ರಷ್ಟ್ ಪಿಎಸ್‍ಐ ಹೇಳಿದ್ದಾರೆ.
ವೈದ್ಯಕೀಯ ಚಿಕಿತ್ಸೆ ವೇಳೆ ರೋಗಿಗಳು ಮೃತಪಡೋದನ್ನು ನಾವೂ ನೋಡಿರುತ್ತೇವೆ. ಆದರೆ ಆಪರೇಷನ್ ಮಾಡದಿದ್ದರೂ ಚಿಕಿತ್ಸೆ ನೀಡದಿದ್ದರೂ ಪ್ರಕರಣದಲ್ಲಿ ಆರೋಪಿಯಾದ ವೈದ್ಯರ ಬಳಿ ಮೂರು ಲಕ್ಷ ಲಂಚಕ್ಕೆ ಬೇಡಿಕೆಯಿಟ್ಟು ಪಿಎಸ್‍ಐ ಇದೀಗ ಸಿಕ್ಕಿಕೊಂಡಿದ್ದಾರೆ. ವೈದ್ಯರಿಗೆ ಪಿಎಸ್‍ಐ ಹಾಗೂ ಪಿಎಸ್‍ಐ ಆಪ್ತ ವ್ಯಕ್ತಿಯೊಬ್ಬರು ಲಂಚದ ಹಣಕ್ಕಾಗಿ ಬೇಡಿಕೆಯಿಟ್ಟು ಕಿರುಕುಳ ನೀಡಿದ ಆಡಿಯೋಗಳು ಇದೀಗ ಪಬ್ಲಿಕ್ ಟಿವಿಗೆ ಲಭ್ಯವಾಗಿವೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv