ತುಮಕೂರು: ದೂರುದಾರ ಮಹಿಳೆಗೆ ಪಿಎಸ್‍ಐ ಓರ್ವರು ಅವಾಚ್ಯ ಶಬ್ಧಗಳಿಂದ ನಿಂದಿಸಿ, ಅಶ್ಲೀಲ ಪದ ಪ್ರಯೋಗ ಮಾಡಿ ಬೈದಿರುವ ಘಟನೆ ತುಮಕೂರಿನಲ್ಲಿ ನಡೆದಿದೆ.
ನಗರದ ತಿಲಕ್ ಪಾರ್ಕ್ ಠಾಣೆಯ ಪಿಎಸ್‍ಐ ಲಕ್ಷ್ಮಯ್ಯರ ಮೇಲೆ ಈ ಆರೋಪ ಕೇಳಿ ಬಂದಿದೆ. ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ದೂರು ನೀಡಿದ ಗಂಗಸಂದ್ರದ ಮಹಿಳೆ ರಾಧಾಗೆ ಪಿಎಸ್‍ಐ ಲಕ್ಷ್ಮಯ್ಯ ತುಚ್ಛವಾಗಿ ನಿಂದಿಸಿದ್ದಾರೆ ಎನ್ನಲಾಗಿದೆ.
Advertisement
ಗಂಗಸಂದ್ರದಲ್ಲಿ ನಡೆದಿದ್ದ ಗಲಾಟೆ ಸಂಬಂಧಿಸಿದಂತೆ ಹನುಮಂತರಾಜು-ರಾಧಾ ದಂಪತಿ ಶ್ರೀಕಾಂತ್ ಮತ್ತು ಅವರ ತಾಯಿ ಕೆಂಪಮ್ಮರ ವಿರುದ್ಧ ದೂರು ನೀಡಿದರು. ಪೊಲೀಸರು ಕೇವಲ ಕೆಂಪಮ್ಮರನ್ನು ಮಾತ್ರ ವಿಚಾರಣೆ ಮಾಡಿ ವಾಪಸ್ ಕಳುಹಿಸಿದ್ದರು. ಆದರೆ ಮೊದಲ ಆರೋಪಿ ಶ್ರೀಕಾಂತ್‍ನ ವಿಚಾರಣೆ ಮಾಡಿರಲಿಲ್ಲ.
Advertisement
Advertisement
ಇದನ್ನು ಹನುಮಂತರಾಜು- ರಾಧಾ ದಂಪತಿ ಪಿಎಸ್‍ಐ ಲಕ್ಷ್ಮಯ್ಯರನ್ನು ಪ್ರಶ್ನಿಸಿದ್ದಾರೆ. ಆರೋಪಿ ಶ್ರೀಕಾಂತನನ್ನು ವಿಚಾರಣೆ ಮಾಡಿ ಎಂದು ಕೇಳಿಕೊಂಡಿದ್ದಾರೆ. ಇಷ್ಟಕ್ಕೆ ಕೋಪಗೊಂಡ ಪಿಎಸ್‍ಐ ಲಕ್ಷ್ಮಯ್ಯ ಅವರನ್ನು ಕರೆಸಲ್ಲ ಏನಿವಾಗ… ನಮಗೆ ಹೇಗೆ ತೋಚತ್ತೋ ಹಾಗೆ ಮಾಡ್ತಿನಿ ಎಂದು ಗದರಿಸಿದ್ದಾರೆ. ಅಲ್ಲದೆ ಮಹಿಳೆ ಎನ್ನೋದನ್ನು ನೋಡದೆ ಸೂ… ಸೆ… ಎಂದು ಅಶ್ಲೀಲ ಪದ ಬಳಿಸಿ ನಿಂದಿಸಿದ್ದಾರೆ.
Advertisement
ಪಿಎಸ್‍ಐ ಲಕ್ಷ್ಮಯ್ಯನ ಅವಲಕ್ಷಣದ ಮಾತಿನಿಂದ ನೊಂದ ಮಹಿಳೆ ಗೋಳೋ ಎಂದು ಕಣ್ಣಿರಿಟ್ಟಿದ್ದಾರೆ. ತನ್ನ ಮುಂದೆಯೇ ತನ್ನ ಪತ್ನಿಗೆ ಅವಾಚ್ಯ ಶಬ್ಧದಿಂದ ಪಿಎಸ್‍ಐ ನಿಂದಿಸುತಿದ್ದುದನ್ನು ಪತಿ ಹನುಮಂತರಾಜು ಅಸಾಹಯಕನಾಗಿ ನೋಡುತಿದ್ದ.
ಈ ಘಟನೆಯಿಂದ ನೊಂದ ದಂಪತಿ ಪಿಎಸ್‍ಐ ಲಕ್ಷ್ಮಯ್ಯನ ದೌರ್ಜನ್ಯದ ವಿರುದ್ಧ ಈಗಾಗಲೇ ಎಸ್‍ಪಿ ದಿವ್ಯಾ ಗೋಪಿನಾಥ್ ಗೆ ದೂರು ನೀಡಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ದೌರ್ಜನ್ಯ ಎಸಗಿದ ಪಿಎಸ್‍ಐ ವಿರುದ್ಧ ಕ್ರಮ ತೆಗೆದುಕೊಳ್ಳದೆ ಇದ್ದರೆ ಉಪವಾಸ ಸತ್ಯಾಗ್ರಹ ಕೂರೋದಾಗಿ ಹನುಮಂತರಾಜು ರಾಧಾ ದಂಪತಿ ಎಚ್ಚರಿಕೆ ನೀಡಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv