ಧಾರವಾಡ: ಭಾನುವಾರ ರಾತ್ರಿ ಮೈಸೂರಿನಿಂದ ಧಾರವಾಡಕ್ಕೆ ಹೊರಟಿದ್ದ 17301 ನಂಬರಿನ ರೈಲಿನ ಸ್ಲಿಪರ್ ಕೋಚ್ ಬೋಗಿಯಲ್ಲಿ ವಿದ್ಯುತ್ ನೀರು ಹಾಗೂ ಫ್ಯಾನ್ ಇಲ್ಲದೇ ಪ್ರಯಾಣಿಕರು ಪರದಾಡಿದ್ದಾರೆ.
Advertisement
ಈ ಬೋಗಿಯಲ್ಲಿ ಒಟ್ಟು 27 ಪ್ರಯಾಣಿಕರು ಪ್ರಯಾಣ ಬೆಳಸಿದ್ದರು. ಮೈಸೂರಿನಿಂದ ಧಾರವಾಡ ನಗರಕ್ಕೆ ಬಂದು ತಲಪುವಷ್ಟರಲ್ಲಿ ಪ್ರಯಾಣಿಕರು ಸಾಕಷ್ಟು ತೊಂದರೆ ಅನುಭವಿಸಿದ್ದಾರೆ. ಧಾರವಾಡ ನಗರಕ್ಕೆ ಆಗಮಿಸಿದ ಪ್ರಯಾಣಿಕರು ರೈಲು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಈ ಕುರಿತು ಹುಬ್ಬಳ್ಳಿ ನೈರುತ್ಯ ವಲಯ ಜಿಎಂಗೆ ದೂರನ್ನ ನೀಡಿದ್ದಾರೆ.
Advertisement
Advertisement
ಪ್ರಯಾಣಿಕರಾದ ಗಂಗಾಧರ್ ಕುಲಕರ್ಣಿ ಎಂಬವರು ರೈಲಿನಲ್ಲಿ ಕನಿಷ್ಟ ನೀರು ಹಾಗೂ ವಿದ್ಯುತ್‍ನ್ನಾದರೂ ಕಲ್ಪಿಸಿ ಎಂದು ರೈಲ್ವೆ ಸಚಿವ ಸುರೇಶ್ ಪ್ರಭು ಅವರಿಗೆ ಟ್ವೀಟ್ ಮಾಡಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.
Advertisement
ಗಂಗಾಧರ್ ಅವರ ಟ್ವೀಟ್‍ಗೆ ರೈಲ್ವೆ ಇಲಾಖೆ ನಿಮ್ಮ ಪಿಎನ್‍ಆರ್ ನಂಬರ್ ಕಳುಹಿಸಿ ಎಂದು ಕೇಳಿ ಟ್ವೀಟ್ ಮಾಡಿದೆ.
@sureshpprabhu worst journey 17301 SE1no power,no protection,no fan,necked wires,spark in coach,no TT,n more over officers try to man Handel pic.twitter.com/Vt7MeG9ZLs
— Gangadhar (@Gangadh80199207) June 19, 2017
Kindly share PNR number
— Ministry of Railways (@RailMinIndia) June 19, 2017