ಬೆಂಗಳೂರು: ಕೇಂದ್ರ ಸರ್ಕಾರದ ವಿರುದ್ಧ ಭಾರತ್ ಬಂದ್ ಮಾಡಲು ಕಾರ್ಮಿಕ ಸಂಘಟನೆಯವರು ಕರೆಕೊಟ್ಟಿದ್ದರು. ಆದರೆ ರ‍್ಯಾಲಿಗೆ ಅವಕಾಶ ಕೊಡದ ನಗರ ಪೊಲೀಸ್ ಆಯುಕ್ತರ ವಿರುದ್ಧ ಕಾರ್ಮಿಕ ಸಂಘಟನೆಯ ಸದಸ್ಯರು ಸಿಡಿದೆದ್ದಾರೆ.
ಸಿಲಿಕಾನ್ ಸಿಟಿಯಲ್ಲಿ ಪ್ರತಿಭಟನೆ ಕಿಚ್ಚು ಜಾಸ್ತಿ ಇಲ್ಲದ ಕಾರಣ ಭಾರತ್ ಬಂದ್‍ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಮಧ್ಯೆ ಈ ಬಾರಿ ರ‍್ಯಾಲಿಗೆ ಅವಕಾಶ ಕೊಡದ ನಗರ ಪೊಲೀಸ್ ಆಯುಕ್ತರ ವಿರುದ್ಧ ಕಾರ್ಮಿಕರು ಸಿಡಿದೆದಿದ್ದಾರೆ. ಕೇಂದ್ರ ಸರ್ಕಾರದ ಬದಲಾಗಿ ಕಮೀಷನರ್ ಮೇಲೆ ವಾಗ್ದಾಳಿ ನಡೆಸಿದರು.
ಕಾರ್ಮಿಕ ಸಂಘಟನೆ ಮುಖಂಡ ಮೀನಾಕ್ಷಿ ಸುಂದರಂ ಮಾತನಾಡಿ, ಪೊಲೀಸ್ ಕಮೀಷನರ್ ಭಾಸ್ಕರ್ ರಾವ್ ಕಾಪಿ ಹೊಡೆದು ಐಪಿಎಸ್ ಪಾಸ್ ಮಾಡಿರಬೇಕು. ಅಧಿಕಾರದಲ್ಲಿರುವವರ ಬೂಟ್ ನೆಕ್ಕಿ ಅಧಿಕಾರ ಗಿಟ್ಟಿಸಿಕೊಂಡಿದ್ದಾರೆ. ಯಡಿಯೂರಪ್ಪ ಚೇಲಾ ಆಗಿರುವ ಭಾಸ್ಕರ್ ರಾವ್. ನಾವ್ ಮನಸ್ಸು ಮಾಡಿದರೆ ಠಾಣೆಗೆ ಮುತ್ತಿಗೆ ಹಾಕುತ್ತೇವೆ ಎಂದು ಕಿಡಿಕಾರಿದರು.