ಚಂಡೀಗಢ: ಬೆಂಬಲ ಬೆಲೆ ನೀಡಿ ಸೂರ್ಯಕಾಂತಿ (Sunflower Seeds) ಬೆಳೆ ಖರೀದಿಸದ ಹರಿಯಾಣ ಸರ್ಕಾರ (Haryana Government) ದ ವಿರುದ್ಧ ರೈತರು ಬೀದಿಗಿಳಿದು ಹೋರಾಟ ನಡೆಸುತ್ತಿದ್ದಾರೆ. ರೈತ ನಾಯಕ ರಾಕೇಶ್ ಟಿಕಾಯತ್ ನೇತೃತ್ವದಲ್ಲಿ ಪ್ರತಿಭಟನೆ ನಡೆಯುತ್ತಿದ್ದು, ಪ್ರಮುಖ ಕುಸ್ತಿಪಟುಗಳು ಈ ಹೋರಾಟಕ್ಕೆ ಬೆಂಬಲ ಸೂಚಿಸಿದ್ದಾರೆ.
ಸೂರ್ಯಕಾಂತಿ ಬೆಳೆಗೆ ಬೆಂಬಲ ನೀಡುವಂತೆ ಆಗ್ರಹಿಸಿ ಸೋಮವಾರ ಕುರುಕ್ಷೇತ್ರ (flyover near Pipli in Kurukshetra district) ಜಿಲ್ಲೆಯ ಪಿಪ್ಲಿ ಬಳಿಯ ಫ್ಲೈಓವರ್ ಮೇಲೆ ರೈತರು (Farmers Protest) ಜಮಾಯಿಸಿದ್ದರು. ರೈತರ ಪ್ರತಿಭಟನೆಯಿಂದ ದೆಹಲಿ-ಚಂಡೀಗಢ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ಅಸ್ತವ್ಯಸ್ತಗೊಂಡಿತು.
Advertisement
Advertisement
ಪ್ರತಿಭಟನೆಗೂ ಮುನ್ನ ಕುರುಕ್ಷೇತ್ರದಲ್ಲಿ ಮಹಾಪಂಚಾಯತ್ ನಡೆಸಲಾಯಿತು. ಭಾರತೀಯ ಕಿಸಾನ್ ಯೂನಿಯನ್ ನಾಯಕ ರಾಕೇಶ್ ಟಿಕಾಯತ್ ( Rakesh Tikait) ಸೇರಿದಂತೆ ಪ್ರಮುಖ ರೈತ ಮುಖಂಡರು, ಭಾರತೀಯ ಕುಸ್ತಿ ಫೆಡರೇಶನ್ ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ( Brij Bhushan Sharan Singh) ವಿರುದ್ಧ ಕ್ರಮಕ್ಕೆ ಒತ್ತಾಯಿಸುತ್ತಿರುವ ಕುಸ್ತಿಪಟುಗಳಲ್ಲಿ ಒಬ್ಬರಾದ ಬಜರಂಗ್ ಪುನಿಯಾ ( Bajrang Punia) ಇಲ್ಲಿ ಭಾಗಿಯಾಗಿದ್ದರು.
Advertisement
ರಾಜ್ಯ ಸರ್ಕಾರವು ಸೂರ್ಯಕಾಂತಿ ಬೀಜಗಳನ್ನು MSPಯಲ್ಲಿ ಖರೀದಿಸುತ್ತಿಲ್ಲ, ಪ್ರತಿ ಕ್ವಿಂಟಾಲ್‍ಗೆ 6,400 ರೂ. ನೀಡಿ ಖರೀದಿಸಬೇಕಿದ್ದ ಸರ್ಕಾರ ಖಾಸಗಿ ಖರೀದಿದಾರರಿಗೆ ಕ್ವಿಂಟಾಲ್‍ಗೆ 4000ರೂ.ಗೆ ಮಾರಾಟ ಮಾಡಲು ಒತ್ತಾಯಿಸುತ್ತಿದೆ ಎಂದು ಪ್ರತಿಭಟನಾನಿರತ ರೈತರು ಆರೋಪಿಸಿದ್ದಾರೆ. ಇದನ್ನೂ ಓದಿ: ಅಪ್ಪ ತಿಹಾರ್ ಜೈಲಿನಲ್ಲಿ ಇದ್ದಾಗ ವೇಷ ಬದಲಿಸಿಕೊಂಡು ನೋಡಲು ಹೋಗಿದ್ದೆ : ಡಿಕೆಶಿ ಪುತ್ರಿ ಐಶ್ವರ್ಯಾ
Advertisement
ಬೇಡಿಕೆಗಳನ್ನು ಈಡೇರಿಸದ ಸರ್ಕಾರದ ವಿರುದ್ಧ ರೈತರು ಜೂನ್ 6 ರಂದು ಕುರುಕ್ಷೇತ್ರದಲ್ಲಿ ದೆಹಲಿ-ಅಮೃತಸರ ರಾಷ್ಟ್ರೀಯ ಹೆದ್ದಾರಿಯನ್ನು ತಡೆದು ಪ್ರತಿಭಟನೆ ನಡೆಸಿದರು. ಈ ವೇಳೆ ಪೊಲೀಸರು ರಸ್ತೆಯನ್ನು ತೆರವುಗೊಳಿಸಲು ಲಾಠಿಚಾರ್ಜ್ ಮಾಡಿದರು. ಅಧ್ಯಕ್ಷರು ಸೇರಿದಂತೆ ಒಂಬತ್ತು BKU ನಾಯಕರನ್ನು ಗಲಭೆ ಮತ್ತು ಕಾನೂನುಬಾಹಿರ ಸಭೆ ಸೇರಿದಂತೆ ವಿವಿಧ ಆರೋಪಗಳ ಮೇಲೆ ಬಂಧಿಸಲಾಗಿತ್ತು.