ಕಾರವಾರ: ಹೊನ್ನಾವರದ ಪರೇಶ್ ಮೇಸ್ತ ಸಾವಿನ ತನಿಖೆಗೆ ಆಗ್ರಹಿಸಿ ಕಾರವಾರದಲ್ಲಿ ಕರೆ ನೀಡಿರುವ ಪ್ರತಿಭಟನೆ ಹಿಂಸೆಗೆ ತಿರುಗಿದೆ. ಅದರಲ್ಲೂ ಕುಮಟಾ ಪಟ್ಟಣ ಹೊತ್ತಿ ಉರಿಯುತ್ತಿದೆ.
Advertisement
ಕಾರವಾರ ನಗರದಲ್ಲಿ ಬಂದ್ ಮಾಡಿ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಟಯರ್ ಗೆ ಬೆಂಕಿ ಹಾಕಿ ವಾಹನಗಳು ಸಂಚರಿಸದಂತೆ ತಡೆದು ಪ್ರತಿಭಟನೆ ನೆಡೆಸಲಾಯ್ತು. ಕುಮಟಾದಲ್ಲಿ ಕೂಡ ಬಂದ್ ಮಾಡಲಾಗಿದ್ದು ಕುಮಟಾದ ಮಾಸ್ತಿಕಟ್ಟೆ ರಸ್ತೆ ಬಳಿ ನಿಂತಿದ್ದ ಪಶ್ಚಿಮ ವಲಯ ಐ.ಜಿ.ಪಿ ಹೇಮಂತ್ ನಿಂಬಾಳ್ಕರ್ ಅವರ ವಾಹನಕ್ಕೆ ಉದ್ರಿಕ್ತ ಗುಂಪು ಬೆಂಕಿ ಹಚ್ಚಿ ಕಲ್ಲು ತೂರಾಟ ನೆಡೆಸಿದೆ. ಈ ಸಂದರ್ಭದಲ್ಲಿ ಪೇದೆಯೊಬ್ಬರಿಗೆ ತೀವ್ರ ಗಾಯವಾಗಿದ್ದು ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದೆ.
Advertisement
Advertisement
ಉದ್ರಿಕ್ತ ಗುಂಪನ್ನು ಚದುರಿಸಲು ಅಶೃವಾಯು ಸಿಡಿಸಿ ಲಘು ಲಾಟಿ ಚಾರ್ಜ್ ಮಾಡಲಾಯ್ತು. ನಗರಾದ್ಯಾಂತ 144 ಸೆಕ್ಷನ್ ಜಾರಿ ಮಾಡಿದ್ದು 2000 ಕ್ಕೂ ಹೆಚ್ಚು ಪೊಲೀಸರನ್ನ ನಿಯೋಜನೆ ಮಾಡಲಾಗಿದೆ.
Advertisement
ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ಐದು ದಿನದ ಹಿಂದೆ ಎರಡು ಕೋಮುಗಳ ನಡುವೆ ನಡೆದ ಗಲಾಟೆ ವೇಳೆ ಪರೇಶ್ ಮೇಸ್ತಾ(19) ಎಂಬ ಯುವಕ ನಾಪತ್ತೆಯಾಗಿದ್ದ. ನಂತರ ಹೊನ್ನಾವರ ಕೆರೆಯಲ್ಲಿ ಯುವಕ ಶವವಾಗಿ ಪತ್ತೆಯಾಗಿದ್ದ. ಈ ಹಿನ್ನೆಲೆಯಲ್ಲಿ ಪರೇಶ್ ಸಾವಿಗೆ ನ್ಯಾಯ ಒದಗಿಸುವಂತೆ ಒತ್ತಾಯಿಸಿ ಇಂದು ಬಿಜೆಪಿ ಹಾಗೂ ಹಿಂದೂ ಸಂಘಟನೆಗಳು ಬಂದ್‍ಗೆ ಕರೆ ನೀಡಿದ್ದವು.