ನವದೆಹಲಿ: ವಿಶ್ವವಿಖ್ಯಾತ ಕುತುಬ್ ಮಿನಾರ್‌ನ್ನು ವಿಷ್ಣು ಸ್ತಂಭ ಎಂದು ನಾಮಕರಣ ಮಾಡಬೇಕು ಎಂದು ಆಗ್ರಹಿಸಿ ಪ್ರತಿಭಟಿಸುತ್ತಿದ್ದ ಹಿಂದೂ ಸಂಘಟನೆಯ ಸದಸ್ಯರನ್ನು ಕುತುಬ್ ಮಿನಾರ್ ಬಳಿ ವಶಕ್ಕೆ ಪಡೆಯಲಾಯಿತು.
13ನೇ ಶತಮಾನದ ಸ್ಮಾರಕವು ಮೂಲತಃ ವಿಷ್ಣು ಸ್ತಂಭವಾಗಿದೆ. ಐತಿಹಾಸಿಕ ಸ್ಮಾರಕವನ್ನು ವಿಷ್ಣು ಸ್ಮಾರಕವೆಂದು ಬದಲಿಸಬೇಕು ಎಂದು ಆಗ್ರಹಿಸಿ ಕುತುಬ್ ಮಿನಾರ್ ಮುಂದೆ ಹಿಂದೂ ಕಾರ್ಯಕರ್ತರು ಹನುಮಾನ್ ಚಾಲೀಸಾವನ್ನು ಪಠಿಸಿ ಪ್ರತಿಭಟನೆ ಮಾಡಿದ್ದಾರೆ.
ಕುತುಬ್ ಮಿನಾರ್‌ನ್ನು ರಾಜಾ ವಿಕ್ರಮಾದಿತ್ಯ ನಿರ್ಮಾಣ ಮಾಡಿದ್ದರು. ಇದನ್ನು ವಿಷ್ಣು ಸ್ಥಂಭವೆಂದು ಕರೆಯಲಾಗುತ್ತಿತ್ತು. ಆದರೆ ನಂತರದ ದಿನಗಳಲ್ಲಿ ಕುತುಬ್‍ದ್ದೀನ್ ಐಬಕ್ ಇದರ ಸ್ಥಾಪನೆಯನ್ನು ತಾನು ಮಾಡಿದ್ದೇನೆ ಎಂದು ಹೇಳಿಕೊಂಡಿದ್ದ ಎಂದು ಕಾರ್ಯಕರ್ತರು ಆರೋಪಿಸಿದ್ದಾರೆ.
ಕುತುಬ್ ಮಿನಾರ್ ಮೂಲತಃ ದೇವಾಲಯವಾಗಿತ್ತು ಮತ್ತು ಸಂಕೀರ್ಣದಲ್ಲಿ ಹಲವಾರು ವಿಗ್ರಹಗಳಿವೆ. ಕುತುಬ್-ಉದ್ದೀನ್-ಐಬಕ್ ಸಾಯಿ, ಹಿಂದೂ, ಜೈನ ದೇವಾಲಯಗಳನ್ನು ಒಡೆದು ಕುತುಬ್ ಮಿನಾರ್ ಅನ್ನು ನಿರ್ಮಿಸಿದನು. ಅವರು ಕಂಬದ ಮೇಲೆ ಕುತುಬ್ ಮಿನಾರ್ ಬರೆದಿದ್ದಾರೆ. ಇಂದಿಗೂ, ನಮ್ಮ ದೇವರು ಮತ್ತು ದೇವತೆಗಳ ವಿಗ್ರಹಗಳು ಇನ್ನೂ ಸಂಕೀರ್ಣದ ಒಂದು ಭಾಗ ಅಲ್ಲಿದೆ. ಇವೇ ಕುತುಬ್ ಮಿನಾರ್ ಮಾಡಲು ನಮ್ಮ ಹಿಂದೂ ದೇವಾಲಯಗಳನ್ನು ಒಡೆಯಲಾಗಿದೆ ಎಂಬುದಕ್ಕೆ ಸ್ಪಷ್ಟ ಪುರಾವೆಯಾಗಿದೆ ಎಂದು ಕಾರ್ಯಕರ್ತರು ತಿಳಿಸಿದರು. ಪೊಲೀಸರನ್ನ ಯಾಮಾರಿಸಿ ವಿದೇಶಕ್ಕೆ ಹಾರಿದ ಅಲ್ಲಾಹು ಅಕ್ಬರ್ ಕೂಗಿದ ವಿದ್ಯಾರ್ಥಿನಿ
ಬಿಜೆಪಿ ಮುಖಂಡ ಜೈ ಭಗವಾನ್ ಗೋಯಲ್ ಅವರು ಮಾತನಾಡಿ, ಹನುಮಾನ್ ಚಾಲೀಸಾ ಪಠಣ ಕಾರ್ಯಕ್ರಮದ ಬಗ್ಗೆ ಸ್ಥಳೀಯ ಪೊಲೀಸ್ ಕಮಿಷನರ್‍ಗೆ ತಿಳಿಸಿದ್ದೇವೆ. ಆದರೆ ಎಸಿಪಿ ಮತ್ತು ಎಸ್‍ಎಚ್‍ಒ ಸುಮಾರು 50 ಪೊಲೀಸರೊಂದಿಗೆ ನನ್ನ ಮನೆಗೆ ಬಂದು ನನ್ನನ್ನು ಗೃಹಬಂಧನದಲ್ಲಿ ಇರಿಸಿದರು ಎಂದು ಆರೋಪಿಸಿದರು.
ಕುತುಬ್ ಮಿನಾರ್ ಸಂಕೀರ್ಣದೊಳಗೆ ಯಾವುದೇ ಅಹಿತಕರ ಘಟನೆ ನಡೆದಿಲ್ಲ ಮತ್ತು ಯಾರಿಗೂ ಸಂಕೀರ್ಣವನ್ನು ಪ್ರವೇಶಿಸಲು ಸಾಧ್ಯವಾಗಲಿಲ್ಲ. ಸಂಕೀರ್ಣದ ಹೊರಗೆ ಸಾಕಷ್ಟು ಪೊಲೀಸ್ ಬಂದೋಬಸ್ತ್ ಇತ್ತು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: ಚಾರ್ಮಾಡಿ ಘಾಟ್‍ನ ದೇವಿ ಹೇಳಿದ ಜಾಗದಲ್ಲೇ ಸಿಕ್ತು ಮೂಲ ವಿಗ್ರಹ
ಘಟನೆಗೆ ಸಂಬಂಧಿಸಿದಂತೆ 50 ಪ್ರತಿಭಟನಾಕಾರರಲ್ಲಿ 44 ಮಂದಿಯನ್ನು ದೆಹಲಿ ಪೊಲೀಸರು ವಶ ಪಡಿಸಿಕೊಂಡರು. ನಂತರ ಅವರೆಲ್ಲರನ್ನೂ ಬಿಡುಗಡೆ ಮಾಡಲಾಯಿತು. ಆದರೆ ಅವರ ವಿರುದ್ಧ ಯಾವುದೇ ಎಫ್‍ಐಆರ್ ದಾಖಲಾಗಿಲ್ಲ.