ಬೆಂಗಳೂರು: ಕಸ್ತೂರಿನಗರ ವಿಭಜಿಸಿ 2 ವಾರ್ಡ್‍ಗಳನ್ನಾಗಿ ವಿಂಗಡಿಸಲು ಬಿಬಿಎಂಪಿ ಹೊರಡಿಸಿರುವ ಅಧಿಸೂಚನೆ ವಿರೋಧಿಸಿ ಕಸ್ತೂರಿನಗರ ಕ್ಷೇಮಾಭಿವೃದ್ಧಿ ಸಂಘದ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.
ಬೈಯಪ್ಪನಹಳ್ಳಿ ವಾರ್ಡ್ ನಂ. 50ನ್ನು ಒಡೆದು 2ನೇ ಮುಖ್ಯ ರಸ್ತೆಯ ಕಳಭಾಗ ಮತ್ತು ಮೇಲ್ಭಾಗವನ್ನು ಎರಡು ಭಾಗವಾಗಿ ವಿಂಗಡಿಸಲು ಬಿಬಿಎಂಪಿ ಉದ್ದೇಶಿಸಿದೆ. ಈ ಹಿನ್ನೆಲೆಯಲ್ಲಿ ಬಿಬಿಎಂಪಿಯ ನಿರ್ಧಾರವನ್ನು ವಿರೋಧಿಸಿ ಅಲ್ಲಿನ ನಿವಾಸಿಗಳು ಎರಡನೇ ಮುಖ್ಯ ರಸ್ತೆಯ ಗಣೇಶ ದರ್ಶಿನಿ ಹೋಟೆಲ್‍ನಿಂದ ಬಿಬಿಎಂಪಿ ಆಫೀಸ್ ವಾರ್ಡ್ ನಂ. 50ರವರೆಗೆ ಪ್ರತಿಭಟನೆಯನ್ನು ನಡೆಸಿದರು. ಅಷ್ಟೇ ಅಲ್ಲದೇ ಕಸ್ತೂರಿನಗರ ಕ್ಷೇಮಾಭಿವೃದ್ಧಿ ಸಂಘವು ಸಹಿ ಸಂಗ್ರಹ ಆಂದೋಲನ ಮಾಡಿ, ಬೃಹತ್ ಬೆಂಗಳೂರು ಮಹಾನಗರಪಾಲಿಕೆ ಅಧಿಕಾರಿಗಳಿಗೆ ನಮ್ಮ ವಿರೋಧ ಅಭಿಪ್ರಾಯಗಳನ್ನು ವ್ಯಕ್ತಪಡಿಸಿತು.
Advertisement
Advertisement
ಈ ಸಂದರ್ಭದಲ್ಲಿ ಪ್ರತಿಭಟನಾಕಾರರು, ಒಂದು ಭಾಗವನ್ನು ಸಿವಿ ರಾಮನ್ ನಗರಕ್ಕೆ (ಈಗಿನ ಹೊಸ ವಾರ್ಡ್ ನಂ 117), ಇನ್ನೊಂದು ಭಾಗವನ್ನು ಲಾಲ್ ಬಹುದ್ದೂರ್ ನಗರಕ್ಕೆ (ಈಗಿನ ಹೊಸ ನಂ. 118) ಸೇರಿಸುವುದಾಗಿ ಬಿಬಿಎಂಪಿ ಯೋಜಿಸಿರುವುದಕ್ಕೆ ವಿರೋಧ ವ್ಯಕ್ತಪಡಿಸಿದರು. ಇದನ್ನೂ ಓದಿ: ವಾಹನ ಸವಾರರಿಗೆ ಮತ್ತೆ ಟೋಲ್ ಬರೆ- ನೆಲಮಂಗಲ, ಅತ್ತಿಬೆಲೆಯಲ್ಲಿ 5 ರೂ. ಹೆಚ್ಚಳ
Advertisement
Advertisement
ಒಂದಾಗಿದ್ದ ಕಸ್ತೂರಿನಗರ ಮುಂದಕ್ಕೆ ಎರಡು ವಾರ್ಡ್‍ಗಳಾಗುತ್ತವೆ. ಇದರಿಂದಾಗಿ ಬೆಸ್ಕಾಂ, ನೀರು, ರಸ್ತೆ, ದಾರಿ ದೀಪ, ಒಳಚರಂಡಿ ಇತ್ಯಾದಿ ಸಮಸ್ಯೆಗಳು ಬಂದಾಗ ಇಲ್ಲಿನ ನಿವಾಸಿಗಳು ಸಿ.ವಿ ರಾಮನ್ ನಗರಕ್ಕೆ ಹೋಗಬೇಕು. ಎರಡು ವಾರ್ಡ್‍ಗಳಿಗೆ ಬೇರೆ ಬೇರೆ ಆಫೀಸ್, ಅಧಿಕಾರಿಗಳು ಮತ್ತು ಬೇರೆನೆ ಮಹಾನಗರ ಪಾಲಿಕೆ ಪ್ರತಿನಿಧಿಗಳನ್ನು ಸಂಪರ್ಕಿಸಬೇಕಾಗುತ್ತದೆ. ಇದರಿಂದಾಗಿ ಸಾರ್ವಜನಿಕರಿಗೆ ತೀರಾ ಅನಾನುಕೂಲವಾಗುತ್ತದೆ ಎಂದು ಆರೋಪಿಸಿದರು. ಇದನ್ನೂ ಓದಿ: ಇನ್ಮುಂದೆ ಸರ್ಕಾರಿ ಶಾಲೆಗಳಿಗೂ ಸ್ಕೂಲ್ ಬಸ್ ವ್ಯವಸ್ಥೆ