ಬೆಂಗಳೂರು: ಮಾಜಿ ಸಚಿವ ಡಿಕೆ ಶಿವಕುಮಾರ್ ಅವರನ್ನು ಜಾರಿ ನಿರ್ದೇಶನಾಲಯ(ಇಡಿ) ಅಧಿಕಾರಿಗಳು ಬಂಧನ ಮಾಡಿರುವುದು ಒಕ್ಕಲಿಗ ಸಮುದಾಯವನ್ನು ರೊಚ್ಚಿಗಬ್ಬಿಸಿದೆ. ಕನಕಪುರದ ಬಂಡೆಯ ಬಂಧನ ಖಂಡಿಸಿ ಇಂದು ಬೆಂಗಳೂರಲ್ಲಿ ಒಕ್ಕಲಿಗರ ಸಂಘದಿಂದ ಶಕ್ತಿ ಪ್ರದರ್ಶನ ನಡೆಯಲಿದೆ.
ಬೆಂಗಳೂರಿನ ಬಸವನಗುಡಿಯ ನ್ಯಾಷನಲ್ ಕಾಲೇಜ್ ಗ್ರೌಂಡ್‍ನಿಂದ ಈ ರ‍್ಯಾಲಿ ಆರಂಭವಾಗಲಿದ್ದು, ಫ್ರೀಡಂಪಾರ್ಕ್ ನಲ್ಲಿ ಅಂತ್ಯಗೊಳ್ಳಲಿದೆ. 30 ಸಾವಿರಕ್ಕೂ ಹೆಚ್ಚು ಜನರು ಈ ರ‍್ಯಾಲಿಯಲ್ಲಿ ಭಾಗಿಯಾಗುವ ಸಂಭವ ಇದೆ. ಇಂದಿನ ಒಕ್ಕಲಿಗರ ಪ್ರತಿಭಟನಾ ರ‍್ಯಾಲಿ ವಾಹನ ಸವಾರರ ಮೇಲೆ ಪರಿಣಾಮ ಬೀರಲಿದೆ. ಫ್ರೀಡಂ ಪಾರ್ಕ್ ವರೆಗೂ ನಡೆಯೋ ರ‍್ಯಾಲಿ ಹಿನ್ನೆಲೆಯಲ್ಲಿ ಹಲವು ರಸ್ತೆಗೆ ನಿರ್ಬಂಧ ವಿಧಿಸಲಾಗಿದೆ. ಹಲವು ಬದಲಿ ಮಾರ್ಗ ಮಾಡಲಾಗಿದೆ.
Advertisement
Advertisement
ಪ್ರತಿಭಟನಾ ರ‍್ಯಾಲಿ ಸಾಗುವ ಹಾಗೂ ಅಕ್ಕಪಕ್ಕದ ರಸ್ತೆಗಳಲ್ಲಿ ಸಂಚಾರಿ ಪೊಲೀಸರು ಸುಮಾರು 13 ಮಾರ್ಗ ಬದಲಾವಣೆ ಮಾಡಿದ್ದಾರೆ. ಅಲ್ಲದೇ 19 ಕಡೆ ಮಾರ್ಗ ಬದಲಾವಣೆ ಪಾಯಿಂಟ್‍ಗಳನ್ನ ಸಹ ಮಾಡಲಾಗಿದೆ. ಹೊರಗಿನಿಂದ ಪ್ರತಿಭಟನೆಗೆ ಬರುವ ವಾಹನಗಳಿಗೆ 9 ಕಡೆ ಪಾರ್ಕಿಂಗ್‍ಗೆ ಅವಕಾಶಗಳನ್ನ ಮಾಡಲಾಗಿದೆ.
Advertisement
ಮಾರ್ಗ ಬದಲಾವಣೆ:
* ಪ್ಯಾಲೇಸ್ ರಸ್ತೆಯಲ್ಲಿ ಸಂಚರಿಸುವವರು ಹಿಮಾಲಯ ಎಲೈಟ್ ಜಂಕ್ಷನ್‍ನಲ್ಲಿ ಬಲ ತಿರುವು ಪಡೆದು, ಟ್ಯಾಂಕ್ ಬಂಡ್ ರಸ್ತೆ ಮೂಲಕ ಸಾಗಬೇಕು
* ಚಾಲುಕ್ಯ ಸರ್ಕಲ್ ಕಡೆಯಿಂದ ಬರುವ ಸವಾರರು ಮಹಾರಾಣಿ ಬ್ರಿಡ್ಜ್ ಹತ್ತಿರ ಬಲ ತಿರುವು ಪಡೆದು ಕೆ.ಆರ್.ಸರ್ಕಲ್ ಮೂಲಕ ಹೋಗಬೇಕು
* ಮೆಜೆಸ್ಟಿಕ್‍ನಿಂದ ಮಾರ್ಕೆಟ್ ಕಡೆ ಹೋಗುವ ವಾಹನಗಳು ಲಾಲ್ ಬಾಗ್ ಪಶ್ಚಿಮ ದ್ವಾರದ ಮೂಲಕ ಹೋಗಬೇಕು. ಹೀಗೇ ಸುಮಾರು 13 ಕಡೆ ಟ್ರಾಫಿಕ್ ಡೈವರ್ಷನ್ ಮಾಡಲಾಗಿದೆ.
Advertisement
ನೋ ಪಾರ್ಕಿಂಗ್..!
* ಜೆಸಿ ರಸ್ತೆಯಿಂದ ಟೌನ್‍ಹಾಲ್‍ವರೆಗೆ
* ಎನ್‍ಆರ್ ರಸ್ತೆಯಿಂದ ಪೊಲೀಸ್ ಕಾರ್ನರ್‍ವರೆಗೆ
* ಕೆ.ಆರ್.ಸರ್ಕಲ್‍ನಿಂದ ಪೊಲೀಸ್ ಕಾರ್ನರ್‍ವರೆಗೆ
* ಕಸ್ತೂರ್ ಬಾ ರಸ್ತೆ
* ಮಲ್ಯ ಆಸ್ಪತ್ರೆ ರಸ್ತೆ
* ಎಂ.ಜಿ.ರಸ್ತೆ
* ಸೆಂಟ್ರಲ್ ಸ್ಟ್ರೀಟ್
* ಕ್ವೀನ್ಸ್ ರಸ್ತೆ
* ಡಾ.ಅಂಬೇಡ್ಕರ್ ರಸ್ತೆ
* ಶೇಷಾದ್ರಿ ರಸ್ತೆ
* ಹಳೆಯ ಅಂಚೆಕಚೇರಿ ರಸ್ತೆ
* ಪ್ಯಾಲೇಸ್ ರಸ್ತೆ
* ರೆಸಿಡೆನ್ಸಿ ರಸ್ತೆ ಸೇರಿದಂತೆ ಸುಮಾರು 25ಕ್ಕೂ ಹೆಚ್ಚು ಕಡೆ ನೋ ಪಾರ್ಕಿಂಗ್ ಮಾಡಲಾಗಿದೆ. ಇದನ್ನೂ ಓದಿ: ಬಂಡೆ ಅರೆಸ್ಟ್ ವಿರುದ್ಧ ಸಿಡಿದೆದ್ದ ಒಕ್ಕಲಿಗರು – ಸಿಲಿಕಾನ್ ಸಿಟಿಯಲ್ಲಿ ಬೃಹತ್ ಧರಣಿ– ರ‍್ಯಾಲಿ ಸಾಗೋ ಮಾರ್ಗ- ಎಲ್ಲೆಲ್ಲಿ ಟ್ರಾಫಿಕ್ ಜಾಮ್?
ಪ್ರತಿಭಟನೆಗೆ ಬರುವವರಿಗೆ ಎಲ್ಲೆಲ್ಲಿ ಪಾರ್ಕಿಂಗ್?
* ಸರ್ಕಾರಿ ಕಲಾ ಮತ್ತು ವಿಜ್ಞಾನ ಕಾಲೇಜ್
* ಬನ್ನಪ್ಪ ಪಾರ್ಕ್
* ವೈ.ಎಂ.ಸಿ.ಎ ಮೈದಾನ ನೃಪತುಂಗ ರಸ್ತೆ
* ಕನಕಪುರ ಕಡೆಯಿಂದ ಬರುವ ವಾಹನಗಳಿಗೆ, ಪಟಾಲಮ್ಮ ರಸ್ತೆ
* ಹೋಂ ಸ್ಕೂಲ್ ಜಂಕ್ಷನ್
* ನಾರಾಯಣ ರೋಡ್
* ಕೆ.ಆರ್.ರಸ್ತೆ
* ಹೋಂ ಸ್ಕೂಲ್ ರಸ್ತೆ
* ಮೈಸೂರು ರಸ್ತೆ ಕಡೆಯಿಂದ ಬರುವ ವಾಹನಗಳಿಗೆ- ಬುಲ್ ಟೆಂಪಲ್ ರಸ್ತೆ
* ಮರಾಠ ಹಾಸ್ಟೆಲ್
* ಶಂಕರಪುರಂ ರಸ್ತೆ
* ಪ್ಯಾಲೇಸ್ ರಸ್ತೆಯಲ್ಲಿ ಒಂದು ಬದಿ
* ಎಲ್.ಟಿ.ಪಿ ರೇಸ್ ಒಂದು ಬದಿ
* ಶೇಷಾದ್ರಿ ರಸ್ತೆಯಲ್ಲಿ ಒಂದು ಬದಿ
* ಲಕ್ಷ್ಮಣ ಪುರಿ ಬ್ರಿಡ್ಜ್ ಕೆಳಗಡೆ ಇರುವ ಧನ್ವಂತರಿ ರಸ್ತೆಯ ಒಂದು ಬದಿಯಲ್ಲಿ ಪಾರ್ಕಿಂಗ್‍ಗೆ ವ್ಯವಸ್ಥೆ ಮಾಡಲಾಗಿದೆ.
ರ‍್ಯಾಲಿ ಆಯೋಜನೆಗೆ ಪೊಲೀಸರು 15 ಸೂಚನೆಗಳನ್ನ ಕೊಟ್ಟಿದ್ದಾರೆ. 5.1 ಕಿಮೀ ಉದ್ದದ ಪ್ರತಿಭಟನಾ ಮೆರವಣಿಗೆಯಲ್ಲಿ ಯಾವುದಾದರೂ ಅಹಿತಕರ ಘಟನೆ ನಡೆದರೆ ಸಂಘಟಕರ ವಿರುದ್ಧ ಮೊದಲು ಎಫ್‍ಐಆರ್ ಮಾಡಲಾಗುವುದು. ಹೀಗಾಗಿ ಶಾಂತಿಯುತವಾಗಿ ಪ್ರತಿಭಟನೆ ಮಾಡಿ ಎಂದು ಪೊಲೀಸರು ಹೇಳಿದ್ದಾರೆ. 2000 ಲಾ ಅಂಡ್ ಆರ್ಡರ್ ಪೊಲೀಸರ ಜೊತೆಗೆ 1200 ಸಂಚಾರಿ ಪೊಲೀಸರನ್ನು ಮೆರವಣಿಗೆಯ ದಾರಿಯುದ್ದಕ್ಕೂ ನಿಯೋಜನೆ ಮಾಡಲಾಗಿದ್ದು, 500 ಸಿಸಿಟಿವಿಗಳು ಕಣ್ಗಾವಲಿಡಲಿವೆ ಎಂದು ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ತಿಳಿಸಿದ್ದಾರೆ.