– ಮೇಯರಿಂದಲೂ ಅಸಮಾಧಾನ
ಬೆಂಗಳೂರು: ಬೆಂಗಳೂರು ಅಖಂಡವಾಗಿರಲಿಮ ವಿಭಜನೆ ಬೇಡ. ಇದು ಬಿಬಿಎಂಪಿ ಕೌನ್ಸಿಲ್‍ನಲ್ಲಿ ಮಾರ್ಧನಿಸಿದ ಸದ್ದು. ಗುರುವಾರ ತಜ್ಞರ ಸಮಿತಿ ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಆದ್ರೆ ಪ್ರತಿಪಕ್ಷ ಬಿಜೆಪಿ ಆಗಲೇ ಹೋರಾಟ ಶುರುಮಾಡಿದೆ.
ಇತ್ತ ತಜ್ಞರ ವರದಿ ಸಲ್ಲಿಕೆಯಾಗತ್ತಿದ್ದಂತೆ ಪಾಲಿಕೆಯ ಸದಸ್ಯರು ತಮ್ಮದೇ ಆದ ವಾದ ಮುಂದಿಟ್ಟಿದ್ದಾರೆ. ಪಾಲಿಕೆ ಸದಸ್ಯೆ ನೇತ್ರ ನಾರಾಯಣ್, ವಿಭಜನೆ ವರದಿಯ ಬಗ್ಗೆ ಸ್ಪೆಷಲ್ ಮೀಟಿಂಗ್ ಕರೆಯಬೇಕು ಅಂತ ಒತ್ತಾಯಿಸಿದ್ರು. ಈ ಬಗ್ಗೆ ಪ್ರತಿಕ್ರಿಯಿಸಿದ ಬಿಬಿಎಂಪಿ ವಿರೋಧ ಪಕ್ಷದ ನಾಯಕ ಪದ್ಮನಾಭರೆಡ್ಡಿ, ಪಾಲಿಕೆ ವಿಭಜನೆಗೆ ನಮ್ಮ ವಿರೋಧವಿದೆ, ಇದು ಹೊಸ ಸಂಘರ್ಷಕ್ಕೆ ನಾಂದಿ ಹಾಡಿದಂತೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
Advertisement
ಮೇಯರ್ ಸಂಪತ್ ರಾಜ್ ವಿಭಜನೆ ವರದಿ ವಿಚಾರವಾಗಿ ಚರ್ಚಿಸಲು ಸಭೆ ಕರೆಯೋದಾಗಿ ಹೇಳಿದ್ರು. ಆದ್ರೆ ಮೈತ್ರಿಯಿಂದ ಮೇಯರ್ ಆಗಿರುವ ಸಂಪತ್ ರಾಜ್ ಅವರಿಂದ ವಿರೋಧದ ಮಾತುಗಳು ಹೊರ ಬೀಳಲಿಲ್ಲ.
Advertisement
ಈ ಹಿಂದೆ ಕಾಂಗ್ರೆಸ್ ಸರ್ಕಾರ ಬೆಂಗಳೂರನ್ನ ವಿಭಜನೆ ಮಾಡ್ತೀವಿ ಅನ್ನೋ ವಿಚಾರ ಎತ್ತಿದ್ದಾಗ ಕುಮಾರಸ್ವಾಮಿ ಯಾವುದೇ ಕಾರಣಕ್ಕೂ ಕೆಂಪೇಗೌಡರು ಕಟ್ಟಿದ ಬೆಂಗಳೂರು ವಿಭಜನೆ ಆಗೋದಕ್ಕೆ ಬಿಡಲ್ಲ ಅಂತ ಹೇಳಿದ್ದರು. ಈಗ ಕುಮಾರಸ್ವಾಮಿ ಸಿಎಂ ಆಗಿದ್ದಾರೆ.