ತುಮಕೂರು: ಹೇಮಾವತಿ ಎಕ್ಸ್‌ಪ್ರೆಸ್ ಕೆನಲ್ (Hemavathi Express canal )ಮೂಲಕ ರಾಮನಗರ ಜಿಲ್ಲೆಯ ಮಾಗಡಿ ಶ್ರೀರಂಗ ಏತನೀರಾವರಿಗೆ ಹೇಮಾವತಿ ನೀರು ತೆಗೆದುಕೊಂಡು ಹೋಗಲು ತುಮಕೂರಲ್ಲಿ (Tumakuru) ವ್ಯಕ್ತವಾಗಿರುವ ವಿರೋಧ ತೀವ್ರಗೊಂಡಿದೆ. ಹೀಗಾಗಿ ನೀರಾವರಿ ಹೋರಾಟ ಸಮಿತಿ ಇಂದು (ಜೂನ್ 25ರಂದು) ಜಿಲ್ಲಾ ಬಂದ್ ಕರೆ ನೀಡಿದ್ದು, ಹತ್ತಾರು ಸಂಘಟನೆಗಳು ಬಂದ್‌ಗೆ ಬೆಂಬಲ ಸೂಚಿಸಿವೆ.
ಮಠಾಧೀಶರು, ವರ್ತಕರು, ವಕೀಲರ ಸಂಘ, ಹೋಟೆಲ್ ಅಸೋಸಿಯೇಷನ್, ವಿವಿಧ ರೈತ, ಕನ್ನಡಪರ ಸಂಘಟನೆಗಳು ಸೇರಿ ಅನೇಕ ಸಂಘಟನೆಗಳು ತುಮಕೂರು ಬಂದ್‌ಗೆ (Tumakuru Bandh) ಬೆಂಬಲ ಸೂಚಿಸಿವೆ. ಬೆಳಗ್ಗೆ 10 ಗಂಟೆಗೆ ನಗರದ ಟೌನ್‌ಹಾಲ್‌ನಿಂದ ಪ್ರತಿಭಟನಾ ಮೆರವಣಿಗೆ ಶುರುವಾಗಲಿದ್ದು, ಜಿಲ್ಲಾಧಿಕಾರಿ ಕಚೇರಿ ವರೆಗೆ ಮೆರವಣಿಗೆ ನಡೆಸಲಾಗುತ್ತದೆ. ಬಳಿಕ ಡಿಸಿಗೆ ಮನವಿ ಪತ್ರ ಸಲ್ಲಿಸಲಾಗುತ್ತದೆ. ಇದನ್ನೂ ಓದಿ: ಜೈಲಿನಲ್ಲಿರುವ ನಟ ದರ್ಶನ್ ಭೇಟಿಗೆ ಯಾರಿಗೂ ಅವಕಾಶವಿಲ್ಲ!
Advertisement
Advertisement
ಇನ್ನೂ ಸರ್ಕಾರಿ ಸಾರಿಗೆ, ಶಾಲಾ-ಕಾಲೇಜು ಸೇರಿದಂತೆ ಇತರೇ ಸರ್ಕಾರಿ ಸೇವೆಗಳು ಎಂದಿನಂತೆ ಇರಲಿವೆ ಎಂದು ಆಡಳಿತ ಸ್ಪಷ್ಟಪಡಿಸಿದೆ. ಸಂಘಟನೆಗಳ ಬಲದಿಂದಾಗಿ ಸ್ವಯಂ ಪ್ರೇರಿತ ಬಂದ್ ಇರಲಿದೆ. ಆಟೋಗಳು ರಸ್ತೆಗಿಳಿಯುವುದು ಅನುಮಾನವಾಗಿದ್ದು, ಬಹುತೇಕ ಅಂಗಡಿ-ಮುಂಗಟ್ಟುಗಳು, ಹೋಟೆಲ್‌ಗಳು ಬಾಗಿಲು ತೆರೆಯುವುದಿಲ್ಲ.
Advertisement
ತುಮಕೂರು ನಗರ ಸೇರಿದಂತೆ 10 ತಾಲ್ಲೂಕುಗಳಲ್ಲೂ ಬಂದ್‌ಗೆ ಸಿದ್ಧತೆ ನಡೆದಿದೆ. ಆಯಾ ತಾಲ್ಲೂಕು ಕೇಂದ್ರಗಳಲ್ಲಿ ಹೋರಾಟಗಾರರು ಪ್ರತಿಭಟನೆ ಮಾಡಲಿದ್ದಾರೆ. ಜಿಲ್ಲಾದ್ಯಂತ ಬಂದ್ ಹಿನ್ನೆಲೆ, ಪೊಲೀಸ್ ಇಲಾಖೆಯಿಂದಲೂ ಬಿಗಿಭದ್ರತೆ ನಿಯೋಜಿಸಲಾಗಿದೆ. ಹೇಮಾವತಿ ನಾಲಾ ವಲಯದ ಗುಬ್ಬಿ, ತುರುವೇಕೆರೆ, ತುಮಕೂರಿನಲ್ಲಿ ಬಂದ್ ತೀವ್ರ ಸ್ವರೂಪ ಪಡೆಯೋ ಸಾಧ್ಯತೆಯಿದೆ. ಮೂರು ತಾಲ್ಲೂಕುಗಳಲ್ಲಿ ಯಾವುದೇ ಅಹಿತರಕರ ಘಟನೆ ನಡೆಯದಂತೆ ಕಟ್ಟೆಚ್ಚರ ವಹಿಸಲಾಗಿದೆ. ಇದನ್ನೂ ಓದಿ: ಬಹುಕೋಟಿ ಹಗರಣ ಕೇಸ್; ಇಡಿ ತನಿಖೆ ಬೆನ್ನಲ್ಲೇ ಎಸ್‌ಐಟಿಯಿಂದ ಮತ್ತೊಬ್ಬ ಆರೋಪಿ ಬಂಧನ!
Advertisement
ಮಿಶ್ರ ಪ್ರತಿಕ್ರಿಯೆ:
ಅಲ್ಲದೇ ಪ್ರತಿಭಟನಾ ನಿರತರು ಬಲವಂತವಾಗಿ ಯಾವುದೇ ಅಂಗಡಿ-ಮುಂಗಟ್ಟುಗಳನ್ನು ಮುಚ್ಚಿಸದಂತೆ ಪೊಲೀಸರು ಸೂಚನೆ ನೀಡಿದ್ದಾರೆ. ಹೀಗಿದ್ದೂ ಕೆಲವರು, ಬೈಕ್ ರ‍್ಯಾಲಿ ಮೂಲಕ ಅಂಗಡಿ-ಮುಂಗಟ್ಟುಗಳನ್ನು ಬಂದ್ ಮಾಡಿಸುವ ಪ್ರಯತ್ನ ನಡೆದಿದೆ. ಇನ್ನೂ ತುಮಕೂರು ನಗರದ ಸೇರಿದಂತೆ ಜಿಲ್ಲೆಯಾದ್ಯಂತ ವಾಹನ ಸಂಚಾರ ಎಂದಿನಂತೆ ಸಾಗಿದೆ, ಪ್ರತಿಭಟನೆ ಶುರುವಾದ ಬಳಿಕ ಬೆಂಬಲ ಹೇಗಿರಲಿದೆ ಎಂಬುದನ್ನು ಕಾದು ನೋಡಬೇಕಿದೆ. ಇದನ್ನೂ ಓದಿ: ಜಪಾನ್ ಅನ್ನು ಕಾಡುತ್ತಿದೆ ಮನುಷ್ಯನ ಮಾಂಸ ತಿನ್ನುವ ವೈರಸ್ – ಭಾರತಕ್ಕೂ ಇದೆಯಾ ಆತಂಕ?
ಹೇಮಾವತಿ ಜಲಾಶಯದ ಇಂದಿನ ನೀರಿನ ಮಟ್ಟ:
- ಜಲಾಶಯದ ನೀರಿನ ಸಂಗ್ರಹ ಸಾಮರ್ಥ್ಯ – 37.103 ಟಿಎಂಸಿ
- ಸದ್ಯ ಜಲಾಶಯದಲ್ಲಿರುವ ನೀರು – 11.087 ಟಿಎಂಸಿ
- ಹೇಮಾವತಿ ಜಲಾಶಯದ ಗರಿಷ್ಠ ಮಟ್ಟ – 2922.00 ಅಡಿ
- ಇಂದಿನ ನೀರಿನ ಮಟ್ಟ – 2883.49 ಅಡಿ
- ಒಳಹರಿವು – 1516 ಕ್ಯೂಸೆಕ್
- ಹೊರಹರಿವು – 250 ಕ್ಯೂಸೆಕ್