ಬೆಂಗಳೂರು: ಕನಿಷ್ಠ ವೇತನ, ಕಾಯಂ ನೌಕರಿ, ಪಿಂಚಣಿ ಸೌಲಭ್ಯ ಸೇರಿದಂತೆ ಹಲವು ಬೇಡಿಕೆಗಳನ್ನ ಮುಂದಿಟ್ಟುಕೊಂಡು ಬಿಸಿಯೂಟ ಕಾರ್ಯಕರ್ತರು ಇಂದು ಮತ್ತು ನಾಳೆ ಪ್ರತಿಭಟನೆ ಮಾಡಲು ಸಜ್ಜಾಗಿದ್ದಾರೆ.
ಈಗಾಗಲೇ ಸಾವಿರಾರು ಸಂಖ್ಯೆಯಲ್ಲಿ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣಕ್ಕೆ ಬಿಸಿಯೂಟ ಕಾರ್ಯಕರ್ತರು ಆಗಮಿಸಿದ್ದಾರೆ. ಸಿಟಿ ರೈಲ್ವೆ ನಿಲ್ದಾಣದಿಂದ ಫ್ರೀಡಂ ಪಾರ್ಕ್ ವರೆಗೆ ಪ್ರತಿಭಟನಾ ರ‍್ಯಾಲಿ ಮಾಡುವ ಮೂಲಕ ಪ್ರತಿಭಟನೆಗೆ ಅಧಿಕೃತ ಚಾಲನೆ ನೀಡಲಿದ್ದಾರೆ. ಪ್ರತಿಭಟನಾ ರ‍್ಯಾಲಿ ಹಿನ್ನೆಲೆಯಲ್ಲಿ ಸಿಟಿ ರೈಲ್ವೆ ನಿಲ್ದಾಣ ಮುಖ್ಯ ರಸ್ತೆ ಹಾಗೂ ನೃಪತುಂಗ ರೋಡ್ ಸಂಪೂರ್ಣವಾಗಿ ವಾಹನ ಸವಾರಕ್ಕೆ ಬಂದ್ ಆಗಲಿದೆ.
Advertisement
Advertisement
ಏಕಕಾಲದಲ್ಲಿ ಸಾವಿರಾರು ಕೆಂಪು ಮಹಿಳೆಯರು ರಸ್ತೆಯಲ್ಲಿ ಮೆರವಣಿಗೆ ಮಾಡುವುದರಿಂದ ಮೆಜೆಸ್ಟಿಕ್, ಕೆಜಿ ರೋಡ್, ನೃಪತುಂಗ ರೋಡ್, ಶೇಷಾದ್ರಿ ರೋಡ್ ಸೇರಿದಂತೆ ಸುತ್ತಮುತ್ತಲಿನ ರೋಡ್‍ಗಳು ಜಾಮ್ ಆಗೋ ಸಾಧ್ಯತೆಗಳಿವೆ. ಇದರಿಂದ ವಾಹನ ಸವಾರರು ಬೇರೆ ಮಾರ್ಗ ಬಳಸುವುದು ಉತ್ತಮ.