ಶಿವಮೊಗ್ಗ: ಬೀಡಿ, ಸಿಗರೇಟ್ ನೀಡುವಂತೆ ಆಗ್ರಹಿಸಿ ಸೋಗಾನೆಯಲ್ಲಿರುವ ಕೇಂದ್ರ ಕಾರಾಗೃಹದಲ್ಲಿ (Jail) ಕೈದಿಗಳು ಪ್ರತಿಭಟನೆ ನಡೆಸಿದ್ದಾರೆ.
ಜೈಲು ಮ್ಯಾನುಯಲ್‌ನಲ್ಲಿ ನಿಷೇಧಿತ ವಸ್ತುಗಳು ಎಂಬ ಕಾರಣಕ್ಕೆ ಬೀಡಿ, ಸಿಗರೇಟು ಕೊಂಡೊಯ್ಯಲು ಕೈಗಾರಿಕ ಭದ್ರತಾ ಪಡೆ ಮತ್ತು ಜೈಲು ಸಿಬ್ಬಂದಿ ನಿರ್ಬಂಧ ವಿಧಿಸಿದ್ದಾರೆ. ಹಾಗಾಗಿ ಕೈದಿಗಳಿಗೆ ಬೀಡಿ, ಸಿಗರೇಟ್ ದೊರೆಯುತ್ತಿಲ್ಲ. ಬೀಡಿ, ಸಿಗರೇಟು ಕೊಡಬೇಕು ಎಂದು ಆಗ್ರಹಿಸಿ ಕೈದಿಗಳು ಸೋಮವಾರ ಬೆಳಗ್ಗೆ ಉಪಹಾರ ತ್ಯಜಿಸಿ ಪ್ರತಿಭಟಿಸಿದ್ದಾರೆ. ಬಳಿಕ ಜೈಲು ಅಧಿಕಾರಿಗಳು ತಿಳಿ ಹೇಳಿದ್ದರಿಂದ ಕೈದಿಗಳು ಪ್ರತಿಭಟನೆ ಕೈಬಿಟ್ಟಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: Shivamogga | ಪ್ರೀತಿಸಲು ಹುಡುಗಿ ಸಿಗಲಿಲ್ಲ ಅಂತ ತುಂಗಾ ನದಿಗೆ ಹಾರಿ ಯುವಕ ಆತ್ಮಹತ್ಯೆ!
Advertisement
ಬೆಂಗಳೂರಿನ (Bengaluru) ಪರಪ್ಪನ ಅಗ್ರಹಾರ (Parappana Agrahara) ಜೈಲಿನಲ್ಲಿ ನಟ ದರ್ಶನ್ (Darshan) ಸಿಗರೇಟು ಸೇದುತ್ತಿರುವ ಫೋಟೊ ವೈರಲ್ ಆಗಿತ್ತು. ಇದರ ಬೆನ್ನಲ್ಲೇ ಶಿವಮೊಗ್ಗ (Shivamogga) ಜೈಲಿನ ಮೇಲೆ ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ನೇತೃತ್ವದಲ್ಲಿ ದಾಳಿ ನಡೆಸಲಾಗಿತ್ತು. ಇದನ್ನೂ ಓದಿ: ಟಿಕೆಟ್ ಸಿಗಲಿ, ಸಿಗದೇ ಇರಲಿ ಪಕ್ಷದ ಜೊತೆ ಇರ್ತೇನೆ, ಜೆಡಿಎಸ್‌ಗೆ ಟಿಕೆಟ್ ಕೊಟ್ರೂ ಕೆಲಸ ಮಾಡ್ತೇನೆ: ಸಿಪಿವೈ
Advertisement
Advertisement
ಈ ವೇಳೆ ಬೀಡಿ, ಸಿಗರೇಟು, ಬೆಂಕಿ ಪೊಟ್ಟಣಗಳು ಸಿಕ್ಕಿದ್ದವು. ಸದ್ಯ ಜೈಲು ಭದ್ರತೆ ನೋಡಿಕೊಳ್ಳುತ್ತಿರುವ ಕೆಎಸ್‌ಐಎಸ್‌ಎಫ್ ಸಿಬ್ಬಂದಿ ಭದ್ರತೆಯನ್ನು ಬಿಗಿಗೊಳಿಸಿದ್ದಾರೆ. ಜೈಲು ಅಧಿಕಾರಿಗಳು ನಿಷೇಧಿತ ವಸ್ತುಗಳನ್ನು ಜೈಲಿನೊಳಗೆ ಕೊಂಡೊಯ್ಯದಂತೆ ನಿರ್ಬಂಧಿಸಿದ್ದಾರೆ. ಇದನ್ನೂ ಓದಿ: ಖಿನ್ನತೆಯಿಂದ ಬಳಲುತ್ತಿದ್ದ 23ರ ಟ್ರೈನಿ ವೈದ್ಯೆ 5ನೇ ಮಹಡಿಯಿಂದ ಹಾರಿ ಆತ್ಮಹತ್ಯೆ