ಮಂಗಳೂರು: ವಕ್ಫ್ ತಿದ್ದುಪಡಿ ಕಾಯ್ದೆ ಜಾರಿಗೊಳಿಸಿರುವ ಕೇಂದ್ರ ಸರ್ಕಾರದ ವಿರುದ್ಧ ಮಂಗಳೂರಿನ ಅಡ್ಯಾರಿನಲ್ಲಿ ಬೃಹತ್ ಪ್ರತಿಭಟನೆ ನಡೆದಿದೆ.
ರಾಷ್ಟ್ರೀಯ ಹೆದ್ದಾರಿ ಸಮೀಪದ ಅಡ್ಯಾರ್ ಶಾ ಮೈದಾನದಲ್ಲಿ ಪ್ರತಿಭಟನೆ ನಡೆದಿದ್ದು, ರಾಷ್ಟ್ರೀಯ ಹೆದ್ದಾರಿ ಕಿಲೋಮೀಟರ್‌ಗಟ್ಟಲೇ ಸ್ತಬ್ಧವಾಗಿತ್ತು. ಹೆದ್ದಾರಿ ಬಂದ್ ಮಾಡಬಾರದು ಎಂಬ ಕೋರ್ಟ್ ಸೂಚನೆ ಇದ್ದರೂ, ಪ್ರತಿಭಟನಾಕಾರ ಯುವಕರ ಗುಂಪು ಉದ್ದೇಶಪೂರ್ವಕವಾಗಿ ಹೆದ್ದಾರಿಯನ್ನು ಅಲ್ಲಲ್ಲಿ ಬಂದ್ ಮಾಡಿತು. ವಾಹನಗಳು ಕಿಲೋಮೀಟರ್‌ಗಟ್ಟಲೆ ರಸ್ತೆಯಲ್ಲಿ ಜಾಮ್ ಆದರು. ಇದನ್ನೂ ಓದಿ: ವಕ್ಫ್ ಕಾಯ್ದೆಯನ್ನು ರಾಷ್ಟ್ರಭಕ್ತ ಮುಸ್ಲಿಮರು ಬೆಂಬಲಿಸಬೇಕು: ಕೋಟ ಶ್ರೀನಿವಾಸ ಪೂಜಾರಿ
ಪೊಲೀಸರು ಹರಸಾಹಸ ಪಟ್ಟು ವಾಹನಗಳನ್ನು ಮುಂದಕ್ಕೆ ಕಳುಹಿಸಿದರು. ಪ್ರತಿಭಟನಾ ಮೈದಾನ ತುಂಬಿಕೊಂಡಿದ್ದರಿಂದ ಹಲವಾರು ಜನ ಸುತ್ತಮುತ್ತಲ ಕಾಂಪೌಂಡ್ ಮನೆಯ ಛಾವಣಿ, ಮರಗಳನ್ನು ಹತ್ತಿ ಕಾರ್ಯಕ್ರಮ ವೀಕ್ಷಿಸಿದರು. ಮರದ ತುದಿಯವರೆಗೂ ಕೆಲ ಯುವಕರು ಹತ್ತಿದ್ದು, ಪೊಲೀಸರು ಮುಂಜಾಗ್ರತಾ ಕ್ರಮವಾಗಿ ಅವರನ್ನು ಇಳಿಸಿದರು.