ಚಿಕ್ಕೋಡಿ/ಧಾರವಾಡ: ಜೈನಮುನಿ (Jain Muni) ಆಚಾರ್ಯ ಕಾಮಕುಮಾರ ನಂದಿ ಮಹಾರಾಜರ (Kamakumara Nandi Maharaja) ಕೊಲೆ ಖಂಡಿಸಿ ಸೋಮವಾರ ರಾಜ್ಯದೆಲ್ಲೆಡೆ ಪ್ರತಿಭಟನೆ ಮಾಡಲು ನಿರ್ಧಾರ ಮಾಡಲಾಗಿದೆ.
ಚಿಕ್ಕೋಡಿ (Chikkodi) ಪಟ್ಟಣದ ಆರ್‌ಡಿ ಹೈಸ್ಕೂಲ್ ಹತ್ತಿರವಿರುವ ಮೈದಾನದಲ್ಲಿ ಸೇರುವ ಜೈನಸಮುದಾಯದ ಜನರು ಹಾಗೂ ಸ್ವಾಮೀಜಿಗಳು ಮೌನ ಪ್ರತಿಭಟನೆ ಮಾಡಿ, ಬಳಿಕ ಮೆರವಣಿಗೆ ಮಾಡಿ ತಹಶೀಲ್ದಾರ್ ಮೂಲಕ ಸರ್ಕಾರಕ್ಕೆ ಪ್ರಕರಣದ ತನಿಖೆ ಮಾಡಿ ಹಂತಕರಿಗೆ ಶಿಕ್ಷೆ ನೀಡುವಂತೆ ಮನವಿ ಮಾಡಲಿದ್ದಾರೆ.
Advertisement
Advertisement
ಹುಬ್ಬಳ್ಳಿಯಲ್ಲಿ ಕಾಮಕುಮಾರ ನಂದಿ ಮಹಾರಾಜರ ಕೊಲೆ ಖಂಡಿಸಿ ಸಿಎಂ ಸಿದ್ದರಾಮಯ್ಯ ಸ್ಪಂದಿಸಲಿಲ್ಲವೆಂದು ಹಾಗೂ ಜೈನ ಮುನಿಗಳಿಗೆ ರಕ್ಷಣೆ ನೀಡುವಂತೆ ಆಗ್ರಹಿಸಿ ವರೂರಿನ ಜೈನಮುನಿ ಗುಣಧರನಂದಿ ಮಹಾರಾಜ್ ಸ್ವಾಮೀಜಿ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದರು. ಗೃಹ ಸಚಿವರ ದೂರವಾಣಿ ಕರೆಮಾಡಿ ಬೇಡಿಕೆ ಈಡೇರಿಕೆ ಭರವಸೆ ನೀಡಿದ ಬಳಿಕ ಗುಣಧರನಂದಿ ಸ್ವಾಮೀಜಿ ಉಪವಾಸ ಕೈಬಿಟ್ಟಿದ್ದಾರೆ. ಇದನ್ನೂ ಓದಿ: ಉತ್ತರ ಭಾರತದಲ್ಲಿ ಮಳೆಯಿಂದ ಜಲಪ್ರಳಯ – ಈವರೆಗೆ 19 ಬಲಿ, ಇಂದೂ ಭಾರೀ ಮಳೆ ಸಾಧ್ಯತೆ
Advertisement
Advertisement
ಹತ್ಯೆ ಖಂಡಿಸಿ ಸಮುದಾಯದಿಂದ ಮೌನ ಪ್ರತಿಭಟನೆ ಮಾಡಲು ಮುಂದಾಗಿದೆ. ಧಾರವಾಡದಲ್ಲಿ ಶ್ರೀ ಅಮಿತಂಜನ ಕೀರ್ತಿ ಮುನಿ ಮಹಾರಾಜರ ಸಾನ್ನಿಧ್ಯದಲ್ಲಿ ಜೈನ ಸಮುದಾಯದ ವಿವಿಧ ಸಂಘಟನೆಗಳು ಜಿಲ್ಲಾಧಿಕಾರಿ ಕಚೇರಿವರೆಗೂ ಮೆರವಣಿಗೆ ಮೂಲಕ ತೆರಳಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ತನಿಖೆಗೆ ಆಗ್ರಹಿಸಲಿದ್ದಾರೆ. ಅಲ್ಲದೆ ಜೈನಮುನಿ ಆಚಾರ್ಯ ಕಾಮಕುಮಾರ ನಂದಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇವಲ ಓರ್ವ ಆರೋಪಿಯನ್ನು ಬಂಧಿಸಿದ್ದಾರೆ. ಒಂದು ಸಮುದಾಯದ ಆರೋಪಿಯನ್ನು ಸಂರಕ್ಷಣೆ ಮಾಡುತ್ತಿದ್ದಾರೆ. ಹೀಗಾಗಿ ಪ್ರಕರಣವನ್ನು ಸಿಬಿಐಗೆ ವಹಿಸಿದರೆ ಸತ್ಯ ಬಹಿರಂಗವಾಗಲಿದೆ ಎಂದು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಅನ್ನಭಾಗ್ಯಕ್ಕೆ ಇಂದು ಚಾಲನೆ- ಬಿಪಿಎಲ್ ಕಾರ್ಡ್‍ದಾರರ ಅಕೌಂಟ್‍ಗೆ ರೇಷನ್ ದುಡ್ಡು
Web Stories