ಬಳ್ಳಾರಿ: ಸಂಬಂಧಿಕರ ನಿರ್ಲಕ್ಷ್ಯದಿಂದ ಮನನೊಂದು ವೃದ್ಧ ದಂಪತಿ ರೈಲ್ವೇ ಹಳಿಗೆ ಬಿದ್ದು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಗಣಿನಾಡು ಜಿಲ್ಲೆಯ ಹೊಸಪೇಟೆ ನಗರದಲ್ಲಿ ನಡೆದಿದೆ.
ಬುಧವಾರ ರಾತ್ರಿ 9 ಘಂಟೆ ಸುಮಾರಿಗೆ ರಾಮಪ್ಪ ಮತ್ತು ರೇಣುಕಮ್ಮ ಎಂಬ 75 ವರ್ಷ ಆಸುಪಾಸಿನ ಈ ವೃದ್ಧ ದಂಪತಿ ಹೊಸಪೇಟೆ ರೈಲ್ವೇ ನಿಲ್ದಾಣದ ಬಳಿಯ ಹಳಿಯ ಮೇಲೆ ಮಲಗಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಅದೇ ಸ್ಥಳದಲ್ಲಿದ್ದ ಸ್ಥಳೀಯ ಯುವಕರು ಈ ಇಬ್ಬರು ವೃದ್ಧರನ್ನ ರಕ್ಷಣೆಮಾಡಿ ಮನೆಗೆ ಕರೆತಂದಿದ್ದಾರೆ.
Advertisement
ಹಲವು ದಿನಗಳಿಂದ ಈ ವೃದ್ಧ ದಂಪತಿ ಹೊಸಪೇಟೆಯ ಪಟೇಲ್ ನಗರದ ಫುಟ್ ಪಾತ್ ನಲ್ಲಿ ವಾಸವಾಗಿದ್ದು, ಯಾರೂ ಸಂಬಂಧಿಕರು ತಮ್ಮನ್ನ ನೊಡಿಕೊಳ್ಳದ ಹಿನ್ನೆಲೆಯಲ್ಲಿ ಈ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ.
Advertisement
ಸದ್ಯಕ್ಕೆ ಈ ವೃದ್ಧ ದಂಪತಿ ಹೊಸಪೇಟೆ ನಗರಸಭೆಯ ಸದಸ್ಯ ಶ್ರೀಧರ್ ನಾಯ್ಡು ಅವರ ಜೊತೆ ಇದ್ದು, ಬಳ್ಳಾರಿಯ ನಿರ್ಗತಿಕರ ಪುನರ್ವಸತಿ ಕೇಂದ್ರಕ್ಕೆ ಈ ದಂಪತಿಯನ್ನು ಸೇರಿಸಲಾಗುವುದು ಎಂದು ಹೇಳಿದ್ದಾರೆ.