ಕಾರವಾರ: ರೈಲ್ವೆ ಬೋಗಿಯಿಂದ ರೈಲಿನ ಅಡಿಭಾಗಕ್ಕೆ ಆಯಾ ತಪ್ಪಿ ಬೀಳುತ್ತಿದ್ದ ಪ್ರಯಾಣಿಕನನ್ನು ರೈಲ್ವೆ ಸಿಬ್ಬಂದಿ ರಕ್ಷಿಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ.
ರೈಲ್ವೆ ಸಿಬ್ಬಂದಿ ನರೇಶ್ ರಕ್ಷಣೆ ಮಾಡಿದ ವ್ಯಕ್ತಿ. ಬೆಂಗಳೂರು ಮೂಲದ ಕೇಂದ್ರ ರಕ್ಷಣಾ ಇಲಾಖೆಯ ಅಧಿಕಾರಿ ಬಿ.ಎಂ.ದೇಸಾಯಿ (59) ರಕ್ಷಣೆಗೊಳಗಾದ ವ್ಯಕ್ತಿಯಾಗಿದ್ದಾರೆ. ಪ್ಲಾಟ್‍ಫಾರಂ ಒಂದರಲ್ಲಿ ಲಗೇಜು ತೆಗೆದುಕೊಳ್ಳಲು ಟ್ರೈನ್‍ನಿಂದ ದೇಸಾಯಿ ಅವರು ಇಳಿಯುವಾಗ ಟ್ರೈನ್ ಹೊರಟಿದ್ದರಿಂದ ಆಯಾತಪ್ಪಿ ಬಿದ್ದಿದ್ದರು. ಈ ವೇಳೆ ಕರ್ತವ್ಯದಲ್ಲಿದ್ದ ಸಿಬ್ಬಂದಿ ಸಮಯ ಪ್ರಜ್ಞೆಯಿಂದ ಇವರನ್ನು ರಕ್ಷಣೆ ಮಾಡಿದ್ದಾರೆ. ಇದನ್ನೂ ಓದಿ: ರೈತ ಗೀತೆ ಮೂಲಕ ಮೇಕೆದಾಟು ಪಾದಯಾತ್ರೆಗೆ ಕಾಂಗ್ರೆಸ್ ಚಾಲನೆ
Advertisement
Advertisement
ಚಿಕ್ಕಪುಟ್ಟ ಗಾಯವಾಗಿದ್ದ ಅವರನ್ನು ಪ್ರಥಮ ಚಿಕಿತ್ಸೆ ಕೊಡಿಸಿ ರೈಲ್ವೆ ಇನ್ಸ್‍ಪೆಕ್ಟರ್ ನೀಲೇಶ್ ದುಬೆ ಅವರ ಸಹಾಯದಿಂದ ಮತ್ತೊಂದು ಟ್ರೈನ್ ಮೂಲಕ ಸುರಕ್ಷಿತವಾಗಿ ಬೆಂಗಳೂರಿಗೆ ರೈಲ್ವೆ ಇಲಾಖೆ ಸಿಬ್ಬಂದಿ ಕಳುಹಿಸಿಕೊಟ್ಟಿದ್ದಾರೆ. ರಕ್ಷಣೆ ಮಾಡಿದ ವೀಡಿಯೋವನ್ನು ಕೊಂಕಣ ರೈಲ್ವೆ ಇಲಾಖೆ ಬಿಡುಗಡೆಗೊಳಿಸಿ ಪ್ರಯಾಣಿಕರು ಜಾಗೃತಿ ಇರುವಂತೆ ಕೋರಿದ್ದಾರೆ. ಇದನ್ನೂ ಓದಿ: ರಾಜ್ಯದ ಕೋವಿಡ್ ವಾರ್ ರೂಮ್ಗೆ ರಾಷ್ಟ್ರ ಪ್ರಶಸ್ತಿ