ಮುಂಬೈ: ಮಹಾರಾಷ್ಟ್ರದ ಕರಾವಳಿ ಜಿಲ್ಲೆಗಳ ಮೀನುಗಾರರು ಸುಮಾರು 260 ಸಂರಕ್ಷಿತ ಮೀನುಗಳನ್ನು ಸುರಕ್ಷಿತವಾಗಿ ಸಮುದ್ರಕ್ಕೆ ಬಿಟ್ಟಿದ್ದಕ್ಕಾಗಿ ಸರ್ಕಾರ ಪರಿಹಾರವಾಗಿ 40.78 ಲಕ್ಷವನ್ನು ನೀಡಿದೆ.
ಆಲಿವ್ ರಿಡ್ಲಿ ಮತ್ತು ಹಸಿರು ಸಮುದ್ರ ಆಮೆಗಳು ಸೇರಿದಂತೆ 260 ಸಂರಕ್ಷಿತ ಸಮುದ್ರ ಜೀವಿಗಳನ್ನು ಬಿಡುಗಡೆ ಮಾಡಿದ್ದಕ್ಕಾಗಿ ಮಹಾರಾಷ್ಟ್ರ ಸರ್ಕಾರ ಕಳೆದ 3 ವರ್ಷಗಳಿಂದ ಮೀನುಗಾರರಿಗೆ 40.78 ಲಕ್ಷ ರೂ. ಹಣವನ್ನು ಪರಿಹಾರವಾಗಿ ನೀಡುತ್ತಿದೆ. ಇದನ್ನೂ ಓದಿ: ರಾಷ್ಟ್ರಪಿತನ ಬಗ್ಗೆ ಅವಹೇಳನಕಾರಿ ಹೇಳಿಕೆ – ಕಾಳಿಚರಣ್ ಮಹಾರಾಜ್ ಬಂಧನ
Advertisement
Advertisement
ಅಪರೂಪದ ಹಾಗೂ ಸಂರಕ್ಷಿತ ಸಮುದ್ರ ಜೀವಿಗಳನ್ನು ಉಳಿಸುವ ಉದ್ದೇಶದಿಂದ ರಾಜ್ಯ ಅರಣ್ಯ ಹಾಗೂ ಮೀನುಗಾರಿಕೆ ಇಲಾಖೆ ಜಂಟಿಯಾಗಿ 2018ರಲ್ಲಿ ಯೋಜನೆಯನ್ನು ಪ್ರಾರಂಭಿಸಿತ್ತು. ಇದರ ಭಾಗವಾಗಿ ಅಪರೂಪದ ಹಾಗೂ ಸಂರಕ್ಷಿತ ಸಮುದ್ರ ಜೀವಿಗಳನ್ನು ಮೀನುಗಾರರು ಮರಳಿ ಸಮುದ್ರಕ್ಕೆ ಬಿಟ್ಟರೆ ಅವರಿಗೆ ಪರಿಹಾರ ಧನ ನೀಡುವುದಾಗಿ ಘೋಷಿಸಿತ್ತು. ಇದನ್ನೂ ಓದಿ: ಲತಾ ಮಂಗೇಶ್ಕರ್‌ಗೆ ಐಸಿಯುನಲ್ಲೇ ಚಿಕಿತ್ಸೆ ಮುಂದುವರಿಕೆ
Advertisement
ಇಲ್ಲಿಯವರೆಗೆ 138 ಆಲಿವ್ ರಿಡ್ಲಿ ಆಮೆಗಳು, 67 ಹಸಿರು ಸಮುದ್ರ ಆಮೆಗಳು, 5 ಹಾಕ್ಸ್ ಬಿಲ್, 2 ಚರ್ಮದ ಬೆನ್ನು ಹೊಂದಿರುವ ಸಮುದ್ರ ಆಮೆಗಳು, 37 ಜಿಂಕೆ ಶಾರ್ಕ್, 6 ಗಿಟಾರ್ ಮೀನುಗಳು, 4 ಫಿನ್‌ಲೆಸ್ ಪೋರ್ಪೋಯಿಸ್‌ಗಳನ್ನು ಸಮುದ್ರಕ್ಕೆ ಬಿಡಲಾಗಿದೆ.