ಬೆಂಗಳೂರು: ನನ್ನ ವಿರುದ್ಧ ಇರುವ ಆರೋಪಕ್ಕೆ ರಾಜ್ಯಪಾಲರ ಪ್ರಾಸಿಕ್ಯೂಷನ್ (Prosecution) ಅನುಮತಿಯೇ ಬೇಡ. ನನ್ನನ್ನು ಹೆದರಿಸಲು ಪ್ರಾಸಿಕ್ಯೂಷನ್ ಅನುಮತಿ ಕೊಡಿ ಎಂದು ರಾಜ್ಯಪಾಲರಿಗೆ ದೂರು ಕೊಟ್ಟಿದ್ದಾರೆ ಎಂದು ಸಿಎಂ (Siddaramaiah) ಮತ್ತು ಮಂತ್ರಿಗಳ ವಿರುದ್ಧ ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ (HD Kumaraswamy) ವಾಗ್ದಾಳಿ ನಡೆಸಿದ್ದಾರೆ.
ಕುಮಾರಸ್ವಾಮಿ ವಿರುದ್ಧದ ಕೇಸ್‌ಗೆ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಟ್ಟಿಲ್ಲ ಎಂಬ ಸಿಎಂ, ಮಂತ್ರಿಗಳ ಹೇಳಿಕೆಗೆ ಬೆಂಗಳೂರಿನಲ್ಲಿ ಹೆಚ್‌ಡಿಕೆ ಪ್ರತಿಕ್ರಿಯಿಸಿದರು. 150 ಕೋಟಿ ಜಂತಕಲ್ ಮೈನಿಂಗ್ ಕೇಸ್ ಈಗಾಗಲೇ ಹೈಕೋರ್ಟ್‌ನಲ್ಲಿ ವಜಾ ಆಗಿದೆ. ಸಾಯಿ ವೆಂಕಟೇಶ್ವರ ಕೇಸ್ ತನಿಖೆ ಮಾಡಿ ಎಂದು ಹೇಳಿದ್ದಾರೆ. ಅಬ್ರಹಾಂ ಅವರು 2011ರಲ್ಲಿ ನನ್ನ ಮೇಲೆ, ಎಸ್‌ಎಂ ಕೃಷ್ಣ ಮತ್ತು ಧರ್ಮಸಿಂಗ್ ಮೇಲೆ ಸುಪ್ರೀಂ ಕೋರ್ಟ್‌ಗೆ ದೂರು ಕೊಟ್ಟರು. ಎಸ್‌ಎಂ ಕೃಷ್ಣ ಕೇಸ್‌ಗೆ ಸ್ಟೇ ತಂದರು. ಧರ್ಮ ಸಿಂಗ್ ಈಗ ಇಲ್ಲ. ಸುಪ್ರೀಂ ಕೋರ್ಟ್‌ನಲ್ಲಿ ನನ್ನ ವಿರುದ್ಧ ಎಸ್‌ಐಟಿಗೆ ತನಿಖೆ ಮಾಡಿ ಅಂತ ಆದೇಶ ಮಾಡಿದ್ದರು. ಎಸ್‌ಐಟಿ ತಂಡ 3 ತಿಂಗಳಲ್ಲಿ ತನಿಖಾ ವರದಿ ಸಲ್ಲಿಸಿ ಅಂತ 2017ರಲ್ಲಿ ಸುಪ್ರೀಂ ಕೋರ್ಟ್ (Supreme Court) ಆದೇಶ ಮಾಡಿತ್ತು. ಈಗ 2024. ಸುಪ್ರೀಂ ಕೋರ್ಟ್ ಮುಂದೆ ನೀವು ಹೋಗಬೇಡಿ ಅಂತ ನಿಮ್ಮನ್ನು ಹಿಡಿದುಕೊಂಡಿರೋರು ಯಾರು? ಸುಪ್ರೀಂ ಕೋರ್ಟ್ ಮುಂದೆ ಹೋಗಿ. ಇದಕ್ಕೆ ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಡಿ ಎಂದು ರಾಜ್ಯಪಾಲರ ಮುಂದೆ ಡ್ರಾಮಾ ಮಾಡೋದು ಯಾಕೆ? ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಬೈಕ್‌ನಲ್ಲಿ ಹೋಗುತ್ತಿದ್ದಾಗ ಹೃದಯಾಘಾತ – ಬೆಳಗಾವಿಯಲ್ಲಿ ಯೋಧ ಸಾವು
Advertisement
Advertisement
ನನ್ನ ಮೇಲೆ 24 ಗಂಟೆಯಲ್ಲಿ ಕ್ರಮ ಆಗಿದೆ ಎಂದು ಡ್ರಾಮಾ ಮಾಡುತ್ತಿದ್ದಾರೆ. ನೀವು ಪ್ರಾಮಾಣಿಕವಾಗಿ ಇದ್ದರೆ ನೀವು ತಪ್ಪು ಮಾಡಿಲ್ಲ ಅಂದರೆ ರಾಜ್ಯಪಾಲರ ವಿರುದ್ಧ ಯಾಕೆ ಪ್ರತಿಭಟನೆ ಮಾಡಿಸುತ್ತಿದ್ದೀರಿ? ದೇಶದಲ್ಲಿ ರಾಜ್ಯಪಾಲರ ವಿರುದ್ಧ ಪ್ರತಿಭಟನೆ ಮಾಡಿಸುತ್ತಿರೋದು ಇದೇ ಮೊದಲು. ರಾಜ್ಯಪಾಲರ ಫೋಟೋಗೆ ಕಪ್ಪು ಮಸಿ ಬಳಿದು, ಬೆಂಕಿ ಹಚ್ಚಿ ಸಚಿವರೆಲ್ಲ ಸೋಮವಾರ ಪ್ರತಿಭಟನೆ ಮಾಡಬೇಕು ಎಂದು ಮಾತನಾಡುತ್ತಿದ್ದೀರಿ. ಏನು ಸಾಧನೆ ಮಾಡಿದ್ದೀರಾ ಎಂದು ರಾಜ್ಯಪಾಲರ ವಿರುದ್ಧ ಪ್ರತಿಭಟನೆ ಮಾಡುತ್ತೀರಿ ಎಂದು ಸಿಎಂ ವಿರುದ್ಧ ಕೆಂಡಕಾರಿದರು. ಇದನ್ನೂ ಓದಿ: ಸಿದ್ದರಾಮಯ್ಯ ರಾಜೀನಾಮೆ ಕೊಟ್ಟು ನಿರ್ದೋಷಿಯಾಗಿ ಮತ್ತೆ ಸಿಎಂ ಆಗಲಿ: ಸುರೇಶ್ ಬಾಬು
Advertisement
Advertisement
ಕುಮಾರಸ್ವಾಮಿ ಮೇಲೆ ಏನೇ ಆರೋಪ ಇದ್ದರೂ ನೀವೇ ಆಕ್ಷನ್ ತೆಗೆದುಕೊಳ್ಳಿ. ಈಗ ಗಂಗೇನಹಳ್ಳಿ ಹಿಡಿದುಕೊಂಡು ಏನಾದರೂ ಮಾಡಿ ಎನ್ನುತ್ತಿದ್ದಾರೆ. ಅದಕ್ಕೂ ನನಗೂ ಸಂಬಂಧವೇ ಇಲ್ಲ. ಏನು ಮಾಡ್ತೀರಾ. ಧೈರ್ಯವಾಗಿ ಇದ್ದೀನಿ. ಕೇಂದ್ರ ಸರ್ಕಾರವನ್ನು ಯಾಕೆ ದೂರುತ್ತೀರಾ? ನೀವು ಸರಿ ಇದ್ದರೆ ಕೇಂದ್ರವನ್ನು ಯಾಕೆ ದೂರುತ್ತೀರಾ. ಸ್ಟಾಲಿನ್ ಮೇಲೆ ಯಾಕೆ ನಡೆಯುತ್ತಿಲ್ಲ. ತೆಲಂಗಾಣ ಮೇಲೆ ಯಾಕೆ ನಡೆಯುತ್ತಿಲ್ಲ. ಇಲ್ಲಿ ಯಾಕೆ ಪ್ರಾರಂಭ ಆಯಿತು ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಯುಎಸ್ ಕಾರು ಅಪಘಾತ; ಭಾರತೀಯ ಮೂಲದ ಒಂದೇ ಕುಟುಂಬದ ಮೂವರು ಸಾವು