ಬೆಂಗಳೂರು : ಮುಜರಾಯಿ ದೇವಾಲಯಗಳಲ್ಲಿ (Muzrai Temple) ಬಾಕಿ ಇರುವ ಆಸ್ತಿ ಇಂಡೀಕರಣವನ್ನು ಇನ್ನೊಂದು ವರ್ಷದಲ್ಲಿ ಪೂರ್ಣ ಮಾಡುವುದಾಗಿ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ (Ramalinga Reddy) ಭರವಸೆ ನೀಡಿದ್ದಾರೆ.
ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ ಸದಸ್ಯ ಅಬ್ದುಲ್ ಜಬ್ಬರ್ ಈ ಬಗ್ಗೆ ಪ್ರಶ್ನೆ ಕೇಳಿದರು. ಇದನ್ನೂ ಓದಿ: ಚಲನಚಿತ್ರೋತ್ಸವಕ್ಕೆ ಎಲ್ಲರಿಗೂ ಆಹ್ವಾನ ಹೋಗಿದೆ: ಸಾಧು ಕೋಕಿಲ
ಇದಕ್ಕೆ ಉತ್ತರ ನೀಡಿದ ಸಚಿವ ರಾಮಲಿಂಗಾರೆಡ್ಡಿ,ಮುಜರಾಯಿ ದೇವಾಲಯಗಳ ಆಸ್ತಿ ರಕ್ಷಣೆ ಮತ್ತು ಇಂಡೀಕರಣ ಮಾಡುವ ಪ್ರಕ್ರಿಯೆ ಶುರುವಾಗಿದೆ. 2023 ಮತ್ತು 2024 ರಲ್ಲಿ 11,498 ಎಕರೆ ಆಸ್ತಿಯನ್ನ ದೇವಾಲಯಗಳ (Temple) ಹೆಸರಿಗೆ ಪಹಣಿ ಇಂಡೀಕರಿಸಲಾಗಿದೆ. ಸುಮಾರು 15,413 ಎಕರೆ ಆಸ್ತಿಯನ್ನು ದೇವಾಲಯಗಳನ್ನು ದೇವಾಲಯಗಳ ಹೆಸರಿಗೆ ಇಂಡೀಕರಣ ಮಾಡಲಾಗಿದೆ ಎಂದು ತಿಳಿಸಿದರು.
ಇನ್ನೂ 20 ಸಾವಿರ ಎಕರೆ ದೇವಾಲಯಗಳ ಜಾಗ ಇಂಡೀಕರಣ ಮಾಡಬೇಕು.ಈಗಾಗಲೇ ಪ್ರಕ್ರಿಯೆ ಶುರುವಾಗಿದೆ. ಇನ್ನೊಂದು ವರ್ಷದಲ್ಲಿ ಬಾಕಿ ಇರೋ ಎಲ್ಲಾ ದೇವಾಲಯಗಳ ಆಸ್ತಿ ಇಂಡೀಕರಣ ಮಾಡುತ್ತೇವೆ ಅಂತ ಭರವಸೆ ನೀಡಿದರು.