ಧಾರವಾಡ: ಆಸ್ತಿ ವಿವಾದದ ಹಿನ್ನೆಲೆ ವ್ಯಕ್ತಿಯೊಬ್ಬರನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಆಯಟ್ಟಿ ಗ್ರಾಮದಲ್ಲಿ ನಡೆದಿದೆ.
ವಿರುಪಾಕ್ಷಪ್ಪ ಆಚಮಟ್ಟಿ (58) ಕೊಲೆಯಾದ ವ್ಯಕ್ತಿ. ಆಯಟ್ಟಿ ಗ್ರಾಮದ ಲಕ್ಷಣ ಈ ಕೊಲೆ ಮಾಡಿದ ವ್ಯಕ್ತಿ. ಇದನ್ನೂ ಓದಿ: ಆ ಕೊಲೆ ಮನೆ ಮುಂದಿದ್ದ ಚಪ್ಪಲಿಯಿಂದ ಬಯಲಾಯ್ತು!
ಇಬ್ಬರ ನಡುವೆ ಆಸ್ತಿ ವಿಚಾರಕ್ಕೆ ಸಂಬಂಧಿಸಿ ಹಲವು ವರ್ಷಗಳಿಂದ ಗಲಾಟೆ ನಡೆದಿತ್ತು. ಆದರೆ ಇಬ್ಬರೂ ಮುಖಾಮುಖಿಯಾದ ವೇಳೆ ಮಾತಿಗೆ ಮಾತು ಬೆಳೆದು ಲಕ್ಷ್ಮಣ ವಿರೂಪಾಕ್ಷನಿಗೆ ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ್ದಾನೆ. ಸದ್ಯ ಆರೋಪಿಗೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇದನ್ನೂ ಓದಿ: ಪತ್ನಿಯ ಎದೆಹಾಲು ಕದ್ದು ಕುಡಿದ ಆಯುಷ್ಮಾನ್ ಖುರಾನಾ
ಈ ಸಂಬಂಧ ನವಲಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.