ಚಿತ್ರದುರ್ಗ: ಮದ್ಯಪಾನಿ ವಿರುದ್ಧ ದೌರ್ಜನ್ಯವೆಸಗಿ ಜಮೀನು ಖರೀದಿಸಿದ್ದನ್ನು ವಿರೋಧಿಸಿದ್ದಕ್ಕೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿರುವ ಘಟನೆ ಹೊಳಲ್ಕೆರೆ (Holalkere) ತಾಲೂಕಿನ ಗಂಗಸಮುದ್ರದಲ್ಲಿ ನಡೆದಿದೆ.
ಗಂಗಸಮುದ್ರ ಗ್ರಾಮದ ಗಂಗಾಧರಪ್ಪ ಮತ್ತು ಹೊಸದುರ್ಗ (Hosadurga) ತಾಲ್ಲೂಕಿನ ಹೇರೂರು ಗ್ರಾಮದ ರಾಮಚಂದ್ರಪ್ಪ ಎಂಬುವವರ ನಡುವೆ ಬಹಳ ಕಾಲದಿಂದ ಜಮೀನಿನ ವಿವಾದ ಇತ್ತು. ತೀವ್ರ ಮದ್ಯಪಾನಿಯಾಗಿದ್ದ ರಾಮಚಂದ್ರಪ್ಪನನ್ನು ಬೆದರಿಸಿ ಗಂಗಾಧರಪ್ಪ ಮತ್ತು ಇತರರು ಜಮೀನಿನ ಪತ್ರಕ್ಕೆ ಸಹಿ ಮಾಡಿಸಿಕೊಂಡಿದ್ದಾರೆ. ಇದಕ್ಕೆ ರಾಮಚಂದ್ರಪ್ಪನ ಪುತ್ರ ಅಣ್ಣಪ್ಪ ಹಾಗೂ ಆತನ ಹೆಂಡತಿ ವಿರೋಧ ವ್ಯಕ್ತಪಡಿಸಿದ್ದಾರೆ ಎಂಬ ಆರೋಪ ಬಂದಿದೆ. ಇದನ್ನೂ ಓದಿ: ಕಾಡಾನೆಯೊಂದಿಗೆ ಸೆಲ್ಫಿ – 20 ಸಾವಿರ ರೂ. ದಂಡ
ಆಗ ಗ್ರಾಮಸ್ಥರ ಅಣ್ಣಪ್ಪನಿಗೆ 2 ಎಕರೆ ಹಾಗೂ ಉಳಿದ 3 ಎಕರೆ ಜಮೀನನ್ನು ಗಂಗಾಧರಪ್ಪ ಹಾಗೂ ಇತರರಿಗೆ ಎಂದು ತೀರ್ಮಾನಿಸಿ, ಪತ್ರ ಬರೆಸಿ ಕೊಟ್ಟಿದ್ದರು. ಇಷ್ಟಾದರೂ ಗಂಗಾಧರಪ್ಪ ಅಣ್ಣಪ್ಪನ ಜಮೀನಿನಲ್ಲಿ ಜೋಳ ಬಿತ್ತನೆ ಮಾಡಿದ್ದಾನೆ. ಇದನ್ನೂ ಪ್ರಶ್ನಿಸಿದ್ದಕ್ಕೆ ಕುಡುಗೋಲಿನಿಂದ ಅಣ್ಣಪ್ಪ ಹಾಗೂ ಆತನ ಪತ್ನಿ ಮೇಲೆ ಹಲ್ಲೆ ನಡೆಸಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ.
ಗಾಯಗೊಂಡಿರುವ ದಂಪತಿಯನ್ನು ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂಬಂಧ ಹೊಳಲ್ಕೆರೆ ಪೊಲೀಸ್ ಠಾಣೆಯಲ್ಲಿ ಎರಡು ಗುಂಪಿನಿಂದಲೂ ದೂರು ಪ್ರತಿದೂರು ದಾಖಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಪ್ರಕರಣದ ಆರೋಪಿಗಳಿಗೆ ನೋಟಿಸ್ ಜಾರಿಗೊಳಿಸಿದ್ದು, ಎಸ್‌ಪಿ ಪರಶುರಾಮ್ ನೇತೃತ್ವದಲ್ಲಿ ತನಿಖೆ ನಡೆಸಲಾಗುತ್ತಿದೆ. ಇದನ್ನೂ ಓದಿ: ಪ್ರೀತಿಸಿದ ಯುವಕನೊಂದಿಗೆ ಮಗಳು ಪರಾರಿ – ತಾಯಿ ನೇಣಿಗೆ ಶರಣು
Web Stories