ಬಳ್ಳಾರಿ: ರಿಪಬ್ಲಿಕ್ ಆಪ್ ಬಳ್ಳಾರಿಯಲ್ಲಿ ಮಾತ್ರ ಪೊಲೀಸರಿಗೊಂದು ಕಾನೂನು, ಜನಸಾಮಾನ್ಯರಿಗೊಂದು ಕಾನೂನಿದೆ. ಇದಕ್ಕೆ ಸಾಕ್ಷಿ ಈ ಸ್ಟೋರಿ. ಮದುವೆಯಾಗಿ ಎರಡು ಮಕ್ಕಳಾದ ಮೇಲೆ ಹೆಂಡ್ತಿ ಹತ್ತಿರ ಡೈವೋರ್ಸ್ ಕೇಳಿದ. ಡೈವೋರ್ಸ್ ಸಿಗಲಿಲ್ಲ ಅಂತ ಪತ್ನಿಗೆ ಆಸಿಡ್ ಕುಡಿಸಿದ. ಇದೀಗ ಅದೇ ವ್ಯಕ್ತಿಗೆ ಶಿಕ್ಷೆ ನೀಡೋ ಬದಲು ಪೊಲೀಸ್ ಇಲಾಖೆ ಪ್ರಮೋಷನ್ ನೀಡಿದೆ.
ಹೌದು. ಬಳ್ಳಾರಿಯ ಕೌಲಬಜಾರ ನಿವಾಸಿಯಾಗಿದ್ದ ಆಶಾಳನ್ನು 2006ರಲ್ಲಿ ಲಕ್ಷಾಂತರ ರೂಪಾಯಿ ವರದಕ್ಷಿಣೆ ಪಡೆದು ಪೇದೆ ವೆಂಕಟೇಶ್ ಮದುವೆಯಾಗಿದ್ದ. ಮದುವೆ ನಂತರ ವರದಕ್ಷಿಣೆ ದಾಹಕ್ಕಾಗಿ ನಿತ್ಯ ಜಗಳವಾಡುತ್ತಿದ್ದನು. ಮದುವೆಯಾಗಿ 2 ಮಕ್ಕಳಾದ ನಂತರ ಸುಖವಾಗಿ ಸಂಸಾರ ಮಾಡಬೇಕಿದ್ದ ಪೇದೆ ವೆಂಕಟೇಶ, ಕಳೆದ ವರ್ಷ ಜುಲೈ 11ರಂದು ಪೊಲೀಸ ವಸತಿ ನಿಲಯದಲ್ಲೆ ಆಸಿಡ್ ಕುಡಿಸಿದ್ದಾನೆ. ಈ ಕುರಿತು ಬಳ್ಳಾರಿಯ ಕೌಲಬಜಾರ ಪೊಲೀಸ ಠಾಣೆಯಲ್ಲಿ ದೂರು ದಾಖಲಾಗಿತ್ತು.
Advertisement
Advertisement
ಆದ್ರೆ ಪೊಲೀಸರು ತಮ್ಮ ಇಲಾಖೆಯ ಮಾನ ಮರ್ಯಾದೆ ಮುಚ್ಚಿಕೊಳ್ಳಲು ಪೇದೆಯ ಪರವಾಗಿಯೇ ನ್ಯಾಯಾಲಯಕ್ಕೆ ಚಾರ್ಜ್‍ಶೀಟ್ ಸಲ್ಲಿಸಿದ್ದಾರೆ. ಆಕೆಯೇ ಮನನೊಂದು ಆ್ಯಸಿಡ್ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾಳೆ ಅಂತ ಚಾರ್ಜ್‍ಶೀಟ್ ಸಲ್ಲಿಸಿ ಇಡೀ ಪ್ರಕರಣವನ್ನೇ ಹಳ್ಳ ಹಿಡಿಸಿದ್ದರು. ಈಗ ಇದೇ ರಾಕ್ಷಸನಿಗೆ ಹುದ್ದೆಯಲ್ಲಿ ಬಡ್ತಿ ನೀಡಿದ್ದಾರೆ.
Advertisement
ನ್ಯಾಯಾಲಯಕ್ಕೆ ಸುಳ್ಳು ಚಾರ್ಜ್‍ಶೀಟ್ ನೀಡಿದವನಿಗೆ ಈಗ ಪ್ರಮೋಷನ್ ಕೊಡ್ತಿದ್ದಾರೆ. ಅಧಿಕಾರದ ಅಮಲು ತಲೆಗೇರಿ ಇನ್ನೊಬ್ಬ ಮಹಿಳೆಗೆ ಅನ್ಯಾಯ ಆಗೋ ಮೊದಲು ಎಸ್‍ಪಿ ಸಾಹೇಬ್ರು ನ್ಯಾಯ ಕೊಡಿಸಬೇಕಾಗಿದೆ.
Advertisement