– ಆಚರಣೆಯ ಒಂದು ಭಾಗ ಎಂದ
– ಬಾಬಾನ ಮಾತಿಗೆ ಮೋಸ ಹೋದ ಮಹಿಳೆ
ಮುಂಬೈ: ಮಗನ ಕ್ಯಾನ್ಸರ್ ಗುಣಪಡಿಸುತ್ತೇನೆ ಎಂದು ಹೇಳಿ 41 ವರ್ಷದ ಮಹಿಳೆ ಮೇಲೆ ಉಜ್ಜಯಿನಿ ಮೂಲದ ಡೋಂಗಿ ಬಾಬಾನೊಬ್ಬ ಅತ್ಯಾಚಾರ ಎಸಗಿರುವ ಘಟನೆ ನಗರದಲ್ಲಿ ನಡೆದಿದೆ.
ಡೋಂಗಿ ಬಾಬಾನ ವಿರುದ್ಧ ದೂರು ದಾಖಲಾಗಿದ್ದು, ಆತನನ್ನು ಟ್ರಾಂಬೆ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಅತ್ಯಾಚಾರ ಎಸಗಿದ್ದಲ್ಲದೆ ಬಾಬಾ ಮಗನ ಕ್ಯಾನ್ಸರ್ ಕಾಯಿಲೆಯನ್ನು ಗುಣಪಡಿಸುವುದಕ್ಕೆ ಪೂಜೆ ಮಾಡಬೇಕೆಂದು ಸಂತ್ರಸ್ತೆಯಿಂದ ಬರೋಬ್ಬರಿ 3.5ಲಕ್ಷ ರೂ. ಹಣವನ್ನು ದೋಚಿದ್ದಾನೆ ಎಂದು ಪತಿ ಈಗ ಪೊಲೀಸರಿಗೆ ದೂರು ನೀಡಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾದಗೇ ಮಗ ಮೃತಪಟ್ಟಿದ್ದಾನೆ.
Advertisement
Advertisement
ಏನಿದು ಪ್ರಕರಣ?
ಈ ದಂಪತಿಗೆ ಒಬ್ಬನೇ ಮಗನಿದ್ದನು. ಆದರೆ 2017ರಿಂದ ಮಗ ಕ್ಯಾನ್ಸರ್ ಕಾಯಿಲೆಗೆ ತುತ್ತಾಗಿದ್ದನು. ನಂತರ ಮಗನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲು ಮಾಡಿದ್ದರು. ಆದರೆ ಯಾವುದೇ ಚಿಕಿತ್ಸೆ ನೀಡಿದರೂ ಕ್ಯಾನ್ಸರ್ ಗುಣವಾಗಿರಲಿಲ್ಲ. ಬಳಿಕ ಅದೇ ವರ್ಷದ ಮೇ ತಿಂಗಳಲ್ಲಿ ಸಂತ್ರಸ್ತೆ ದೇವಸ್ಥಾನದಲ್ಲಿ ಡೋಂಗಿ ಬಾಬಾನನ್ನು ಭೇಟಿಯಾಗಿದ್ದು, ಆತನ ಬಳಿ ತನ್ನ ಕಷ್ಟವನ್ನು ಹೇಳಿಕೊಂಡಿದ್ದಾರೆ. ಆಗ ಬಾಬಾ ಕೆಲವೊಂದು ಆಚರಣೆ-ಪೂಜೆ ಮಾಡಿದರೆ ಮಗನಿಗಿರುವ ಕಾಯಿಲೆ ವಾಸಿಯಾಗುವುದು ಎಂದು ಭರವಸೆ ನೀಡಿದ್ದಾನೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
Advertisement
ಬಾಬಾ ಸಂತ್ರಸ್ತೆಯ ಜೊತೆ ಮನೆಗೆ ಬಂದು ಕೆಲವೊಂದು ಯಜ್ಞ ನಡೆಸಿದ್ದಾನೆ. ಈ ವೇಳೆ ಬಾಬಾ ಮಹಿಳೆ ಮತ್ತು ಬರುವ ಯಜ್ಞದ ಭಸ್ಮವನ್ನು ಕೊಟ್ಟಿದ್ದಾನೆ. ಅದನ್ನು ಸೇವಿಸಿದ ತಕ್ಷಣ ಸಂತ್ರಸ್ತೆ ಪ್ರಜ್ಞೆಹೀನರಾಗಿ ಬಿದ್ದಿದ್ದಾರೆ. ತಕ್ಷಣ ಬಾಬಾ ಮನೆಯಲ್ಲಿದ್ದ 60 ಸಾವಿರ ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾನೆ. ಇದಾದ ಬಳಿಕ ಬಾಬಾ ಸಂತ್ರಸ್ತೆಯನ್ನು ತನ್ನ ಫ್ಲ್ಯಾಟ್ ಗೆ ಬರುವಂತೆ ಹೇಳಿ ಕರೆಸಿಕೊಂಡಿದ್ದಾನೆ. ಅಲ್ಲಿ ಆಕೆಯನ್ನು ಅತ್ಯಾಚಾರ ಮಾಡಿದ್ದು, ಇದು ಪೂಜೆಯ ಒಂದು ವಿಧಾನ ಎಂದು ಸಂತ್ರಸ್ತೆಯನ್ನು ನಂಬಿಸಿದ್ದಾನೆ. ಅಷ್ಟೇ ಅಲ್ಲದೇ ಅತ್ಯಾಚಾರದ ಫೋಟೋವನ್ನು ತನ್ನ ಮೊಬೈಲಿನಲ್ಲಿ ತೆಗೆದುಕೊಂಡಿದ್ದಾನೆ ಎಂದು ಎಫ್‍ಐಆರ್ ನಲ್ಲಿ ಉಲ್ಲೇಖಿಸಲಾಗಿದೆ.
Advertisement
ಡೋಂಗಿ ಬಾಬಾ ಆ ಫೋಟೋ ಇಟ್ಟುಕೊಂಡು ಹಣಕ್ಕಾಗಿ ಸಂತ್ರಸ್ತೆಯನ್ನು ಬ್ಲ್ಯಾಕ್‍ಮೇಲ್ ಮಾಡಲು ಶುರು ಮಾಡಿದ್ದಾನೆ. ಒಂದು ವೇಳೆ ಹಣ ಕೊಡಲಿಲ್ಲ ಎಂದರೆ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡುವುದಾಗಿ ಬೆದರಿಕೆ ಒಡ್ಡಿದ್ದಾನೆ. ಈ ಬಗ್ಗೆ ಪತ್ನಿ ನನಗೆ ತಿಳಿಸಿರಲಿಲ್ಲ. ಮಗನ ಕಾಯಿಲೆ ವಾಸಿ ಮಾಡುವುದಾಗಿ ಬಾಬಾ ಪೂಜೆಗಾಗಿ ಸುಮಾರು 2.98 ಲಕ್ಷ ಹಣವನ್ನು ಪಡೆದುಕೊಂಡಿದ್ದು, ಬಾಬಾ ಪರಾರಿಯಾಗಿದ್ದಾನೆ ಎಂದು ಸಂತ್ರಸ್ತೆಯ ಪತಿ ದೂರಿನಲ್ಲಿ ತಿಳಿಸಿದ್ದಾರೆ.
ಈಗ ಡೋಂಗಿಬಾಬಾನ ವಿರುದ್ಧ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ಶೋಧ ಕಾರ್ಯ ನಡೆಸುತ್ತಿದ್ದಾರೆ. ಐಪಿಸಿ ಸೆಕ್ಷನ್ 374 (ಅತ್ಯಾಚಾರ), 354 (ಎ) (ಲೈಂಗಿಕ ಕಿರುಕುಳ), 384 (ಸುಲಿಗೆ) ಮತ್ತು 506 (ಕ್ರಿಮಿನಲ್ ಬೆದರಿಕೆ) ವಿಭಾಗಗಳಲ್ಲಿ ಮತ್ತು ಮೂಢ ನಂಬಿಕೆ ಕಾಯ್ದೆಯಡಿ ನಾವು ಪ್ರಕರಣ ದಾಖಲಿಸಿದ್ದೇವೆ ಎಂದು ಇನ್ಸ್ ಪೆಕ್ಟರ್ ಪಿ. ಸಾಲ್ವಿ ತಿಳಿಸಿದ್ದಾರೆ.