ಬಾಹುಬಲಿ ಸೂಪರ್ ಸ್ಟಾರ್ ಪ್ರಭಾಸ್ (Prabhas)- ದೀಪಿಕಾ ಪಡಕೋಣೆ (Deepika Padukone) ನಟನೆಯ ಬಹುನಿರೀಕ್ಷಿತ ಸಿನಿಮಾ ‘ಪ್ರಾಜೆಕ್ಟ್ ಕೆ’ ಚಿತ್ರಕ್ಕೆ ತಮಿಳಿನ ಸ್ಟಾರ್ ನಟ ಸಾಥ್ ನೀಡುತ್ತಿದ್ದಾರೆ. ‘ವಿಕ್ರಮ್’ ಸಿನಿಮಾದ ಹೀರೋ ಕಮಲ್ ಹಾಸನ್, ಪ್ರಭಾಸ್ ಮುಂದೆ ಅಬ್ಬರಿಸಲಿದ್ದಾರೆ.
ಪ್ರಭಾಸ್ ಮತ್ತು ಕನ್ನಡತಿ ದೀಪಿಕಾ ಪಡುಕೋಣೆ ನಟನೆಯ ‘ಪ್ರಾಜೆಕ್ಟ್ ಕೆ’ (Project K) ಸಿನಿಮಾದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಪ್ರಭಾಸ್, ದೀಪಿಕಾ ಜೊತೆ ಬಾಲಿವುಡ್ ಸ್ಟಾರ್ ನಟ ಅಮಿತಾಭ್ ಬಚ್ಚನ್ ಕೂಡ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ. ಬಿಗ್ ಬಿ ಬೆನ್ನಲ್ಲೇ ಕಮಲ್ ಹಾಸನ್ (Kamal Haasan) ಕೂಡ ಎಂಟ್ರಿ ಕೊಡಲಿದ್ದಾರೆ ಎಂದು ಹೇಳಲಾಗುತ್ತಿದೆ.
‘ಪ್ರಾಜೆಕ್ಟ್ ಕೆ’ ಸಿನಿಮಾ ಈಗಾಗಲೇ 70ರಷ್ಟು ಚಿತ್ರೀಕರಣವಾಗಿದೆ. ಚಿತ್ರತಂಡದವರು ಕಮಲ್ ಹಾಸನ್ ಅವರನ್ನ ಸಂಪರ್ಕಿಸಿ ಅವರ ಪಾತ್ರದ ಬಗ್ಗೆ ಕಥೆ ಹೇಳಲಾಗಿದೆ. ಒಂದು ಸುತ್ತಿನ ಮಾತುಕತೆ ಕೂಡ ನಡೆದಿದೆ. ಆದರೆ ಕಮಲ್ ಹಾಸನ್ ಚಿತ್ರಕ್ಕೆ ಓಕೆ ಎಂದಿರೋದರ ಬಗ್ಗೆ ಅಧಿಕೃತ ಅಪ್‌ಡೇಟ್ ಸಿಕ್ಕಿಲ್ಲ. ಎಲ್ಲಾ ಓಕೆ ಆದರೆ, ಪ್ರಭಾಸ್ ಮುಂದೆ ಖಡಕ್ ವಿಲನ್ ಆಗಿ ಕಮಲ್ ಹಾಸನ್ ಅಬ್ಬರಿಸಲಿದ್ದಾರೆ. ಅವರ ಪಾತ್ರಕ್ಕೂ ಬಹಳಷ್ಟು ಪ್ರಾಮುಖ್ಯತೆ ಇದೆ. ಇದನ್ನೂ ಓದಿ:ಸಮಂತಾ ನಟನೆಯ ಹಾಲಿವುಡ್ ಸಿನಿಮಾಗೆ ಟೈಟಲ್ ಫಿಕ್ಸ್
ನಾಗ್ ಅಶ್ವೀನ್ (Nag Ashwin) ನಿರ್ದೇಶನದ ಈ ಸಿನಿಮಾದಲ್ಲಿ ನಟಿಸಲು 150 ಕೋಟಿ ರೂಪಾಯಿ ಸಂಭಾವನೆಯನ್ನ ಕಮಲ್ ಹಾಸನ್ ಡಿಮ್ಯಾಂಡ್ ಮಾಡಿದ್ದಾರಂತೆ. ಎಲ್ಲವೂ ಸರಿಹೋದಲ್ಲಿ ಕಮಲ್ ಹಾಸನ್ ಕೂಡ ಈ ಚಿತ್ರದ ಭಾಗವಾಗಲಿದ್ದಾರೆ ಎಂದು ಹೇಳಲಾಗುತ್ತಿದೆ. ಅಧಿಕೃತ ಅಪ್‌ಡೇಟ್‌ಗಾಗಿ ಕಾದುನೋಡಬೇಕಿದೆ.