ಲಕ್ನೋ: ವಿದ್ಯಾರ್ಥಿನಿಯರಿಗೆ ಸ್ವೀಟ್ ಹಾರ್ಟ್ ಹಾಗೂ ಅಶ್ಲೀಲ ವಿಡಿಯೋ ಕಳುಹಿಸುತ್ತಿದ್ದ ಆರೋಪದ ಮೇಲೆ ಪ್ರೊಫೆಸರ್‍ನನ್ನು ಕೆಲಸದಿಂದ ಸಸ್ಪೆಂಡ್ ಮಾಡಲಾಗಿದೆ.
ಪಿ. ಸೆಂಥಿಲ್ ಕುಮಾರ್ ಸಸ್ಪೆಂಡ್ ಆದ ಪ್ರೊಫೆಸರ್. ಸೆಂಥಿಲ್ ನೋಯ್ಡಾ ವಿಭಾಗದ ಫಿಸಿಯೋಥೇರಪಿ ವಿಭಾಗ ಮುಖ್ಯಸ್ಥನಾಗಿ ಕೆಲಸ ಮಾಡುತ್ತಿದ್ದನು. ಸೆಂಥಿಲ್ ಸಾಮಾಜಿಕ ಜಾಲತಾಣದಲ್ಲಿ ಯುವತಿಯರಿಗೆ ಸ್ವೀಟ್ ಹಾರ್ಟ್ ಎಂದು ಹೇಳುತ್ತಾ ಅಶ್ಲೀಲ ವಿಡಿಯೋ, ಫೋಟೋ ಕಳುಹಿಸಿ ಕಿರುಕುಳ ನೀಡುತ್ತಿದ್ದಾನೆ ಎಂದು ವಿದ್ಯಾರ್ಥಿನಿಯರು ಆರೋಪಿಸಿದ್ದಾರೆ.
Advertisement
Advertisement
ಸೋಮವಾರ ನೋಯ್ಡಾ ವಿಶ್ವವಿದ್ಯಾಲಯದ 14 ವಿದ್ಯಾರ್ಥಿನಿಯರು ಪ್ರೊಫೆಸರ್ ಸೆಂಥಿಲ್ ವಿರುದ್ಧ ಹಲವು ಆರೋಪಗಳನ್ನು ಮಾಡಿ ಫೇಸ್‍ಬುಕ್‍ನಲ್ಲಿ ಪೋಸ್ಟ್ ಮಾಡಿದ್ದರು. ಪ್ರೊಫೆಸರ್ ನಮ್ಮನ್ನು ‘ಸ್ವೀಟ್ ಹಾರ್ಟ್’, ‘ಸ್ವೀಟು’, ಈ ರೀತಿ ಕರೆಯುತ್ತಾರೆ. ಅಲ್ಲದೆ ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ವಿಡಿಯೋ ಕಳುಹಿಸುತ್ತಾರೆ ಎಂದು ಹೇಳಿದ್ದಾರೆ.
Advertisement
ಪ್ರೊಫೆಸರ್ ಸೆಂಥಿಲ್ ವಿಶ್ವವಿದ್ಯಾಲಯಕ್ಕೆ ಪ್ರವೇಶಿಸುವುದಕ್ಕೆ ತಡೆ ಹಿಡಿಯಲಾಗಿದೆ. ಈ ಬಗ್ಗೆ ಇಂಟರ್ ನಲ್ ಕಂಪ್ಲೇಟ್ ಕಮಿಟಿ ರಚನೆಯಾಗಿದ್ದು, 72 ಗಂಟೆಯೊಳಗೆ ವರದಿಯನ್ನು ನೀಡಲಿದೆ ಎಂದು ವಿಶ್ವವಿದ್ಯಾನಿಲಯದ ವಕ್ತಾರ ವಿಕ್ರಂ ಸಿಂಗ್ ತಿಳಿಸಿದ್ದಾರೆ.
Advertisement
ವಿದ್ಯಾರ್ಥಿನಿಯರು ದೂರು ನೀಡಿದ ನಂತರ ಸೆಂಥಿಲ್ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದಾಗ ಸ್ವಿಚ್ಛ್ ಆಫ್ ಆಗಿದೆ ಎಂದು ವರದಿಯಾಗಿದೆ.