ಧಾರವಾಡ: ಕರ್ನಾಟಕ ವಿಶ್ವವಿದ್ಯಾಲಯದ ಸಹ ಪ್ರಾಧ್ಯಾಪಕ ಡಾ.ದಿನೇಶ್ ನಾರಾಯಣಕರ್ ವಿದ್ಯಾರ್ಥಿನಿಯೋರ್ವಳಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪದ ಹಿನ್ನೆಲೆಯಲ್ಲಿ ಅಮಾನುತು ಮಾಡಿ ಆದೇಶಿಸಲಾಗಿದೆ.
Advertisement
ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಅಪರಾಧಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ದಿನೇಶ್, ತಮ್ಮ ವಿಭಾಗದ ಮೂರನೇ ಸೆಮಿಸ್ಟರ್ ವಿದ್ಯಾರ್ಥಿನಿಗೆ ಮೈ-ಕೈ ಮುಟ್ಟುವ ಮೂಲಕ ಕಿರುಕುಳ ನೀಡ್ತಾಯಿದ್ದರು. ಈ ಸಂಬಂಧ ವಿದ್ಯಾರ್ಥಿನಿ ಕುಲಪತಿಗಳಿಗೆ ಡಿಸೆಂಬರ್‍ನಲ್ಲಿ ದೂರು ನೀಡಿದ್ದರು. ಅಲ್ಲದೇ ಇಂಟರನಲ್ ಅಂಕ ಬೇಕಾದ್ರೆ ನನ್ನ ಜೊತೆ ಅಡ್ಜೆಸ್ಟ್ ಆಗಬೇಕು ಎಂದು ಹೇಳುತ್ತಾರೆ ಎಂದು ವಿದ್ಯಾರ್ಥಿನಿ ದೂರಿನಲ್ಲಿ ಉಲ್ಲೇಖಿಸಿದ್ದರು.
Advertisement
ಇದನ್ನೂ ಓದಿ: ವಿದ್ಯಾರ್ಥಿನಿ ಕುಲಪತಿಗಳಿಗೆ ನೀಡಿದ ದೂರಿನಲ್ಲಿ ಹೀಗೆ ಬರೆಯಲಾಗಿತ್ತು!
Advertisement
Advertisement
ಈ ಹಿನ್ನೆಲೆ ಕರ್ನಾಟಕ ವಿವಿ ಪ್ರಕರಣದ ವಿಚಾರಣೆ ನಡೆಸಲು ಲೈಂಗಿಕ ದೌರ್ಜನ್ಯ ಸಮಿತಿಗೆ ನೀಡಿತ್ತು. ಸಮಿತಿ ನೀಡಿದ ವರದಿ ಆಧರಿಸಿ ಕರ್ನಾಟಕ ವಿವಿ ಅಪರಾಧಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ದಿನೇಶ್ ನಾರಾಯಣಕರ್ ಅವರನ್ನು ಅಮಾನತು ಮಾಡಿದೆ. ಈ ಪ್ರಕರಣವನ್ನ ಕರ್ನಾಟಕ ವಿವಿ ಸಿಂಡಿಕೆಟ್ ಸಭೆಯಲ್ಲಿಟ್ಟ ಕುಲಪತಿ ಪ್ರಮೋದ ಗಾಯಿ, ನಿವೃತ್ತ ನ್ಯಾಯಮೂರ್ತಿಗಳನ್ನ ನೇಮಿಸಿ ಈ ಪ್ರಕರಣದ ತನಿಖೆ ಕೂಡಾ ನಡೆಸಲು ನಿರ್ಧಾರ ಕೈಗೊಂಡಿದ್ದಾರೆ.