ಡೆಹ್ರಾಡೂನ್: ಪತ್ನಿಯ ಅಶ್ಲೀಲ ವಿಡಿಯೋ ಮಾಡಿ ಅದನ್ನು ಮಗನಿಗೆ ತೋರಿಸುತ್ತಿದ್ದ ಪ್ರೊಫೆಸರ್ ನನ್ನು ಒಂದು ವರ್ಷದ ಬಳಿಕ ಪೊಲೀಸರು ಬಂಧಿಸಿದ್ದಾರೆ.
ಕಳೆದ ವರ್ಷ ಮಾರ್ಚ್ 18 ರಂದು ನನ್ನ ಪತಿ ಅಶ್ಲೀಲ ವಿಡಿಯೋವನ್ನು ಮಗನಿಗೆ ತೋರಿಸುತ್ತಿದ್ದಾನೆ ಎಂದು ಪತ್ನಿಯೊಬ್ಬರು ದೂರು ನೀಡಿದ್ದರು. ದೂರು ದಾಖಲಾದ ಪ್ರೊಫೆಸರ್ ನನ್ನು ಹುಡುಕಾಡುತ್ತಿದ್ದ ಪೊಲೀಸರು ಒಂದು ವರ್ಷದ ಬಳಿಕ ಈಗ ಬಂಧಿಸಿದ್ದಾರೆ.
Advertisement
ಗುರುವಾರ ರಾತ್ರಿ ಪೊಲೀಸರು ಆರೋಪಿಯನ್ನು ಕಾಲೇಜೊಂದರಲ್ಲಿ ಬಂಧಿಸಿದ್ದಾರೆ. ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿ ಅಮರ್ಜಿತ್ ಸಿಂಗ್ ತಿಳಿಸಿದ್ದಾರೆ.
Advertisement
Advertisement
ಹಲ್ದಾನಿಯಲ್ಲೂ ಕೂಡ ಇದೇ ರೀತಿಯ ಪ್ರಕರಣ ದಾಖಲಾಗಿದ್ದು, ಯುವಕನೊಬ್ಬ ಅಪ್ರಾಪ್ತೆಯ ಜೊತೆ ದೈಹಿಕ ಸಂಪರ್ಕ ಬೆಳೆಸಿ ವಿಡಿಯೋ ಮಾಡಿ ಆಕೆಗೆ ಬ್ಲಾಕ್ ಮೇಲ್ ಮಾಡುತ್ತಿದ್ದನು. ಪೊಲೀಸರು ಪೋಕ್ಸೋ ಕಾಯ್ದೆ ಅಡಿ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದರು.
Advertisement
ಅಪ್ರಾಪ್ತೆ ಜೊತೆ ದೈಹಿಕ ಸಂಪರ್ಕ ಬೆಳೆಸಿ 2 ತಿಂಗಳ ನಂತರ ಆರೋಪಿ ರಾಶಿದ್ ಆ ವಿಡಿಯೋವನ್ನು ಆಕೆಯ ಸಹೋದರಿಯ ಮೊಬೈಲಿಗೆ ಕಳುಹಿಸಿದ್ದನು. ಅಲ್ಲದೇ ಹಣ ನೀಡದಿದ್ದರೆ, ಈ ವಿಡಿಯೋವನ್ನು ವೈರಲ್ ಮಾಡುವುದಾಗಿ ಬ್ಲಾಕ್ಮೇಲ್ ಮಾಡುತ್ತಿದ್ದನು.
ರಾಶಿದ್ ಕಿರುಕುಳಕ್ಕೆ ಬೇಸತ್ತ ಅಪ್ರಾಪ್ತೆಯ ಪೋಷಕರು ಆತನ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ರಾಶಿದ್ ಅಪ್ರಾಪ್ತ ಮನೆಯ ಅಕ್ಕಪಕ್ಕ ತಿರುಗುತ್ತಿದ್ದ ವೇಳೆ ಪೊಲೀಸರು ಆತನನ್ನು ಬಂಧಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv