ಮುಂಬೈ: ಮಹಾರಾಷ್ಟ್ರ ರಾಜಕೀಯದಲ್ಲಿ ಆದ ಹೈಡ್ರಾಮಾ ನೋಡಿ ಅನಾರೋಗ್ಯಕ್ಕೀಡಾಗಿದ್ದೇನೆ, ಶಾಕ್‍ಗೆ ಒಳಗಾಗಿದ್ದೇನೆ ಎಂದು ಪ್ರೊಫೆಸರ್‌ರೊಬ್ಬರು ಬರೆದ ರಜಾ ಅರ್ಜಿ ಈಗ ಎಲ್ಲೆಡೆ ಸಖತ್ ವೈರಲ್ ಆಗಿದೆ.
ಚಂದ್ರಪುರದಿಂದ ಸುಮಾರು 43 ಕಿ.ಮೀ ದೂರವಿರುವ ಗಡ್ಚಂದೂರ್ ಕಾಲೇಜಿನ ಇಂಗ್ಲಿಷ್ ಪ್ರೊಫೆಸರ್ ಝಹೀರ್ ಸಯ್ಯದ್ ಅವರು ಈ ರೀತಿ ರಜಾ ಅರ್ಜಿ ಬರೆದಿದ್ದಾರೆ. ಶನಿವಾರ ಬೆಳಗ್ಗೆ ಟಿವಿ ನೋಡುತ್ತಿದ್ದಾಗ ಮಹಾರಾಷ್ಟ್ರ ರಾಜಕೀಯದಲ್ಲಿ ನಡೆದ ಹೈಡ್ರಾಮಾದ ಸುದ್ದಿ ಪ್ರಸಾರವಾಗಿತ್ತು. ಇದನ್ನು ನೋಡಿ ನನಗೆ ಶಾಕ್ ಆಯ್ತು. ಇದರಿಂದ ನಾನು ಅನಾರೋಗ್ಯಕ್ಕೀಡಾದೆ. ಹೀಗಾಗಿ ನನಗೆ ಕಾಲೇಜಿಗೆ ಬರಲು ಆಗುತ್ತಿಲ್ಲ ರಜಾ ನೀಡಿ ಎಂದು ಪ್ರಾಂಶುಪಾಲರಿಗೆ ಪ್ರೊಫೆಸರ್ ಅರ್ಜಿ ಬರೆದಿದ್ದರು. ಇದನ್ನೂ ಓದಿ:ಫಡ್ನವಿಸ್, ಅಜಿತ್ ಪವಾರ್ ಪದಗ್ರಹಣಕ್ಕೆ ಬಂದಿದ್ದ ಎನ್‍ಸಿಪಿ ಶಾಸಕ ನಾಪತ್ತೆ
Advertisement
Advertisement
ಪ್ರೊಫೆಸರ್ ರಜಾ ಅರ್ಜಿ ನೋಡಿದ ಪ್ರಾಂಶುಪಾಲರು, ಅರ್ಜಿಯಲ್ಲಿದ್ದ ಕಾರಣವನ್ನು ಒಪ್ಪದೆ ರಜೆ ನೀಡಲು ತಿರಸ್ಕರಿಸಿದ್ದಾರೆ. ಆದರೆ ಈ ರಜಾ ಅರ್ಜಿ ಮಾತ್ರ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ. ಓರ್ವ ವ್ಯಕ್ತಿ ಅನಾರೋಗ್ಯಕ್ಕೀಡಾಗುವ ರೀತಿ ಮಹಾರಾಷ್ಟ್ರ ರಾಜಕೀಯದಲ್ಲಿ ಹೈಡ್ರಾಮಾ ನಡೆಯುತ್ತಿದೆ. ಇದ್ದಕ್ಕಿದ್ದ ಹಾಗೆ ಬಿಜೆಪಿ ಎನ್‍ಸಿಪಿ ಜೊತೆಗೂಡಿ ಸರ್ಕಾರ ರಚನೆ ಮಾಡುತ್ತಿರುವುದು ಅನೇಕರಿಗೆ ಅಚ್ಚರಿಗೊಳಿಸಿದೆ ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ. ಇದನ್ನೂ ಓದಿ:ಕಂಡು ಕೇಳರಿಯದ `ಮಹಾ’ ನಾಟಕದ ಸೂತ್ರಧಾರಿ ಯಾರು?
Advertisement
Advertisement
ಶನಿವಾರ ಮಹಾರಾಷ್ಟ್ರ ಸಿಎಂ ಆಗಿ ಎರಡನೇ ಬಾರಿಗೆ ದೇವೆಂದ್ರ ಫಡ್ನವಿಸ್ ಪ್ರಮಾಣವಚನ ಸ್ವೀಕರಿಸಿದ್ದರು. ಅವರ ಜೊತೆಗೆ ಎನ್‍ಸಿಪಿ ನಾಯಕ ಅಜಿತ್ ಪವಾರ್ ಅವರು ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು. ಈ ವಿಚಾರ ಕೇಳಿ ಸ್ವತಃ ಎನ್‍ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರೇ ಶಾಕ್ ಪಟ್ಟು, ವಿರೋಧಿಸಿದ್ದರು. ಅಲ್ಲದೆ ಶಿವಸೇನೆ ಜೊತೆಗೂಡಿ ಸುದ್ದಿಗೋಷ್ಠಿಯನ್ನೂ ನಡೆಸಿ, ಬಿಜೆಪಿ ಬೆಂಬಲ ನೀಡುತ್ತಿರುವುದು ಅಜಿತ್ ಪವಾರ್ ಅವರ ವೈಯಕ್ತಿಕ ವಿಚಾರವೇ ಹೊರೆತು ಎನ್‍ಸಿಪಿದಲ್ಲ ಎಂದು ಶರದ್ ಪವಾರ್ ಹೇಳಿದ್ದರು.