ತೆಲುಗಿನ ಖ್ಯಾತ ನಟ ಜ್ಯೂನಿಯರ್ ಎನ್.ಟಿ.ಆರ್ ಅವರ ಸಹೋದರ ಕಲ್ಯಾಣ್ ರಾಮ್ (Kalyan Ram) ನಟನೆಯ ‘ಡೆವಿಲ್’ (Devil) ಸಿನಿಮಾ ವಿವಾದಕ್ಕೆ ಕಾರಣವಾಗಿದೆ. ಈ ಸಿನಿಮಾದ ನಿರ್ದೇಶಕನ ಹೆಸರನ್ನೇ ಸಿನಿಮಾದಿಂದ ಕಿತ್ತುಹಾಕಿ, ಆ ಜಾಗದಲ್ಲಿ ನಿರ್ಮಾಪಕರು ತಮ್ಮ ಹೆಸರನ್ನು ಹಾಕಿಕೊಂಡಿದ್ದಾರೆ. ಈ ಅನ್ಯಾಯದ ಕುರಿತಂತೆ ನಿರ್ದೇಶಕ ನವೀನ್ ಮೆದರಮ್ (Naveen Medaram)ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
2021ರಲ್ಲಿ ಡೆವಿಲ್ ಸಿನಿಮಾ ಸೆಟ್ಟೇರಿತ್ತು. ಎರಡು ವರ್ಷಗಳ ನಂತರ ಸಿನಿಮಾ ಸಿದ್ಧವಾಗಿದೆ. ಸ್ವಾತಂತ್ರ್ಯ ಪೂರ್ವದ ಕಥೆಯನ್ನು ಹೊಂದಿರುವ ಈ ಸಿನಿಮಾವನ್ನು ಅಭಿಷೇಕ್ ನಮಾ (Abhishek Nama) ಎನ್ನುವವರು ನಿರ್ಮಾಣ ಮಾಡಿದ್ದಾರೆ. ನಿರ್ಮಾಪಕರ ಮತ್ತು ನಿರ್ದೇಶಕ ವೈಮನಸ್ಸಿನ ಕಾರಣದಿಂದಾಗಿ ನಿರ್ದೇಶಕರ ಹೆಸರನ್ನೇ ನಿರ್ಮಾಪಕರು ಕಿತ್ತುಹಾಕಿದ್ದಾರೆ ಎಂದು ಹೇಳಲಾಗುತ್ತಿದೆ.
ನಿರ್ದೇಶಕರು ಸತತ ಮೂರು ವರ್ಷಗಳ ಕಾಲ ಈ ಚಿತ್ರಕ್ಕಾಗಿ ಕೆಲಸ ಮಾಡಿದ್ದಾರಂತೆ. 105 ದಿನಗಳ ಕಾಲ ಚಿತ್ರೀಕರಣವನ್ನೂ ಮಾಡಿದ್ದಾರೆ. ಪ್ಯಾಚ್ ವರ್ಕ್ ನಲ್ಲಿ ಮಾತ್ರ ಅವರು ಇರಲಿಲ್ಲವಂತೆ. ಹಾಗಾಗಿ ಇಂಥದ್ದೊಂದು ಸಮಸ್ಯೆ ತಲೆದೂರಿದೆ ಎನ್ನುವುದು ನಿರ್ದೇಶಕರ ಆರೋಪ. ಇದು ನನ್ನ ಮಗುವಾಗಿದ್ದರಿಂದ ಯಾವುದೇ ಕಾರಣಕ್ಕೂ ಅನ್ಯಾಯ ಆಗೋದಕ್ಕೆ ಬಿಡುವುದಿಲ್ಲ ಎಂದು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ ನಿರ್ದೇಶಕರು. ಈ ವಿವಾದ ನಡುವೆಯೂ ಡೆವಿಲ್ ಎಂದು ಬಿಡುಗಡೆ ಆಗಿದೆ.