ಸಂಜನಾ ಏನ್ ಮಾಡ್ತಾಳೋ ಮಾಡ್ಲಿ, ನಾನು ಕಾನೂನು ಕ್ರಮ ಕೈಗೊಳ್ಳುವೆ: ವಂದನಾ ಜೈನ್

Public TV
2 Min Read
SANJANA

ಚಿಕ್ಕಬಳ್ಳಾಪುರ: ಸಂಜನಾ ಏನು ಮಾಡುತ್ತಾಳೋ ಮಾಡಲಿ ನಾನು ಕಾನೂನು ಪ್ರಕಾರ ಕ್ರಮ ಕೈಗೊಳ್ಳುವೆ ಅಂತ ನಿರ್ಮಾಪಕಿ ವಂದನಾ ಜೈನ್ ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿದ್ದಾರೆ.

ಸದ್ಯ ಕೇರಳದಲ್ಲಿರುವ ವಂದನಾ ಜೈನ್ ಮೊಬೈಲ್ ಮೂಲಕ ಪ್ರತಿಕ್ರಿಯಿಸಿ, ಸಂಜನಾ ದಿನಕ್ಕೊಂದು ರೀತಿ ಆಟ ಆಡಿದರೆ ಜನ ನೋಡುತ್ತಿರುತ್ತಾರೆ. ಆಟ ಅದರೂ ಆಡಲಿ, ನನ್ನ ಮೇಲೆ ಕಂಪ್ಲೇಂಟ್ ಆದರೂ ಕೊಡಲಿ. ಏನಾದ್ರೂ ಮಾಡಲಿ, ನಾನು ಬೆಂಗಳೂರಿಗೆ ಬಂದು ಕಾನೂನು ಪ್ರಕಾರ ಕ್ರಮ ಕೈಗೊಳ್ಳುತ್ತೇನೆ. ನಾನು ಈಗಾಗಲೇ ಸಂಜನಾ ವಿರುದ್ಧ ದೂರು ನೀಡಿದ್ದೇನೆ. ಪೊಲೀಸ್ ಠಾಣೆ ಮುಂದೆ ಹೋಗಿ ಸಂಜನಾ ನಿಂತ ಮಾತ್ರಕ್ಕೆ ಕಂಪ್ಲೇಂಟ್ ಆಗೋದಿಲ್ಲ. ಕಂಪ್ಲೇಂಟ್ ಯಾರದ್ದು ಆಗಬೇಕೋ ಅವರದ್ದೇ ಆಗೋದು. ಆಕೆ ಏನ್ ಮಾಡಿದ್ಲು ಅನ್ನೋದರ ಸಾಕ್ಷಿ ಕೊಟ್ಟು ಕಂಪ್ಲೇಂಟ್ ಕೊಟ್ಟಿದ್ದೇನೆ. ಅಕೆಗೂ ಕಂಪ್ಲೇಂಟ್ ಕೊಡೋಕೆ ಕಾರಣ ಇದ್ದರೆ ಕೊಡಲಿ. ಸಂಜನಾ ಮಾಡಿದ ವರ್ತನೆಯಿಂದಲೇ ನಾನು ಆ ದಿನ ರಾತ್ರಿ ಪೊಲೀಸರಿಗೆ ಕರೆ ಮಾಡಿದೆ ಎಂದಿದ್ದಾರೆ.

VANDANA

ಗಲಾಟೆ ಆದ ದಿನ ರಾತ್ರಿ ನನ್ನ ಫ್ರೆಂಡ್ ಜೊತೆ ಮಾತಾಡುತ್ತಿದ್ದಳು. ಆಗ ನನ್ನ ಫ್ರೆಂಡ್ ನೀವಿಬ್ಬರೂ ಯಾಕೆ ಮಾತಾಡಲ್ಲ ಅಂದರು. ಆಗ ತಕ್ಷಣ ಅಕೆ ನನ್ನ ಮೇಲೆ ವೈಯಕ್ತಿಕವಾಗಿ ನಿಂದಿಸೋಕೆ ಆರಂಭಿಸಿದಳು. ಆಗ ನಾನು ಇದು ಪಬ್ಲಿಕ್ ಪ್ಲೇಸ್ ಹೀಗೆಲ್ಲಾ ಮಾತಾಡಬೇಡ ಅಂತ ಹೇಳಿದೆ. ಈ ವೇಳೆ ಸಂಜನಾ ಕೈಯಲ್ಲಿದ್ದ ಡ್ರಿಂಕ್‍ನ್ನ ಬಿಸಾಡಿದಳು. ಇದನ್ನ ಸ್ವತಃ ಸಂಜನಾ ನೇ ಹೇಳ್ತಾ ಇದ್ದಾಳೆ. ಹಾಗಾಗಿ ಅಕೆ ಮಾಡಿದ್ದನ್ನ ಒಪ್ಪಿಕೊಂಡಿದ್ದಾಳೆ. ಸಂಜನಾಗೆ ನನ್ನ ಮೇಲೆ ಯಾಕೆ ಅಷ್ಟೊಂದು ಕೋಪ ಅಂತ ಸಂಜನಾನೇ ಹೇಳಬೇಕು. ಕಾರಣ ಇಲ್ಲದೆ ಯಾವ ಕಾರಣಕ್ಕೆ ಸಂಜನಾ ಯಾಕೆ ಆ ರೀತಿ ನಡೆದುಕೊಳ್ತಾ ಇದ್ದಾಳೋ ನನಗೆ ಗೊತ್ತಿಲ್ಲ. ನನಗೆ ಪ್ರಚಾರ ಪಡೆದುಕೊಳ್ಳೋಕೆ ಸಂಜನಾ ರೀತಿ ಬರಲ್ಲ. ನನಗೆ ಪ್ರಚಾರ ಪಡೆದುಕೊಳ್ಳಬೇಕಾದರೆ ಬೇರೆ ದಾರಿಗಳಿವೆ. ನಾವು ಸ್ನೇಹಿತರಾಗಿದ್ದವರು. ಸಂಜನಾ ಈ ನಡೆಯಿಂದ ನನಗೆ ಬೇಜಾರಾಗುತ್ತಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಗಲಾಟೆಯಾಗಿಲ್ಲ, ಸಾಕ್ಷಿಗೆ ನನ್ನ ಬಳಿ ವಿಡಿಯೋ ಇದೆ: ಸಂಜನಾ ಸ್ಪಷ್ಟನೆ

SANJANA 1

ಕಾರಣ ಇಲ್ಲದೆ ಸಂಜನಾ ಯಾಕೆ ಹೀಗೆ ಮಾಡಿತಿದ್ದಾಳೋ ಅರ್ಥ ಆಗ್ತಾ ಇಲ್ಲ. ಜನ ನನಗೆ ಮೆಸೇಜ್ ಮಾಡ್ತಾ ಇದ್ದಾರೆ. ಆಕೆ ನಡೆದುಕೊಳ್ಳುತ್ತಿರುವ ರೀತಿ ಸರಿ ಇಲ್ಲ. ನಿಮ್ಮ ನಡೆ ಸರಿ ಇದೆ. ಆಕೆಯನ್ನ ಬಿಡಬೇಡಿ ಅಂತ ಹಲವರು ಮೆಸೇಜ್ ಮಾಡುತ್ತಿದ್ದಾರೆ ಎಂದರು. ಇದನ್ನೂ ಓದಿ; ಎಣ್ಣೆ ಕಿಕ್‍ನಲ್ಲಿ ಗಲಾಟೆ ಮಾಡ್ಕೊಂಡ್ರಾ ಸಂಜನಾ ಗಲ್ರಾನಿ?

ನಾನು ನ್ಯೂ ಇಯರ್ ಸೆಲೆಬ್ರೇಷನ್ ಗೆ ಅಂತ ಕೇರಳಕ್ಕೆ ಬಂದಿದ್ದೇನೆ. ಆದರೆ ಈ ಗಲಾಟೆ ಹಿನ್ನೆಲೆಯಲ್ಲಿ ಈಗ ಬೆಂಗಳೂರಿಗೆ ವಾಪಾಸ್ ಆಗ್ತೀನಿ ಬಂದ ನಂತರ ಮಾಧ್ಯಮಗಳಿಗೆ ಸಂಪೂರ್ಣ ಮಾಹಿತಿ ಕೊಡುತ್ತೇನೆ ಎಂದು ಹೇಳಿದರು.

Share This Article
Leave a Comment

Leave a Reply

Your email address will not be published. Required fields are marked *